MANGALURU, JAN 08: The Catholic Diocese of Mangalore held a solemn Eucharistic procession on Sunday January 8, 2023, from Milagres Church to Rosario Cathedral. Thousands of Catholics from in and around Mangalore partook in the same with devotion and discipline.
The Year 2023 in the diocese of Mangalore is declared as the ‘Year of Family’ during the same.
Prior to the procession, mass was offered by Most Rev. Dr Peter Paul Saldanha, Bishop of Mangalore at Milagres Church, after which the Eucharistic procession was held. The procession led by the bishop culminated at Rosario Cathedral with adoration.
The Eucharistic procession was held on the solemnity of the Epiphany also called Feast of the Epiphany, Theophany, or Three Kings’ Day, commemorating the first manifestation of Jesus Christ to the Gentiles, represented by the Magi, and the manifestation of his divinity.
In his homily, the bishop said, “We need to search God first in the Holy Scriptures and then in the hearts of each other.” He further said, “The Word of God in our hands is our Star pointing towards Jesus. The Gospel itself becomes our star which draws us unto Jesus. Our hearts will burn with the Word of God when we read and reflect on it. The Word of God will make us realize that Jesus walks with us,” he added.
All the faithful participated in the procession with utmost devotion and discipline without causing any disturbance to the general public.
Rev. Fr Chethan Lobo, OFM Cap, Editor of Sevak Monthly preached a homily at the Rosario Cathedral grounds. He elaborated on the theme, “Humane Family: Hope of the Future”, and brought out some areas to bring renewal and reformation in the modern Christian families.
Rev. Fr Vijay Machado, Director of Mangala Jyothi animated the ceremony. The bishop thanked all for making this procession a great success.
Click the photos to view them in High Resolution
ಮಂಗಳೂರು ಧರ್ಮಪ್ರಾಂತ್ಯದ ಪರಮ ಪವಿತ್ರ ಪ್ರಸಾದದ ಮೆರವಣಿಗೆ: ‘ಕುಟುಂಬ ವರ್ಷ’ ಘೋಷಣೆ
ವರದಿ: ವಂದನೀಯ ಅನಿಲ್ ಐವನ್ ಫೆರ್ನಾಂಡಿಸ್
ಚಿತ್ರಗಳು: ಸ್ಟಾನ್ಲಿ ಹಾಗೂ ಜೋಸ್ಟನ್
ಮಂಗಳೂರು, ಜನವರಿ ೦೮: ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ ೮ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಭಕ್ತಿ ಮತ್ತು ಶಿಸ್ತಿನಿಂದ ಪಾಲ್ಗೊಂಡರು.
ಈ ಸಂದರ್ಭ ಮಂಗಳೂರು ಧರ್ಮಕ್ಷೇತ್ರದಲ್ಲಿ ಪ್ರಸ್ತುತ ೨೦೨೩ ವರ್ಷವನ್ನು ‘ಕುಟುಂಬ ವರ್ಷ’ ವೆಂದು ಘೋಷಿಸಿ, ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಮಾನವೀಯ ಕುಟುಂಬಗಳನ್ನು ಕಟ್ಟಲು ಕರೆ ನೀಡಲಾಯಿತು.
ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ನಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.
ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ “ದೇವರನ್ನು ಮೊದಲು ಪವಿತ್ರ ಗ್ರಂಥಗಳಲ್ಲಿ ಕಂಡುಕೋಳ್ಳೋಣ, ನಂತರ ನಮ್ಮ ಹಾಗೂ ಪರಸ್ಪರರ ಹೃದಯಗಳಲ್ಲಿ ಆತನ ಸಾಮಿಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದ್ದಲ್ಲಿ ಯೇಸುವಲ್ಲಿ ಸೇರುವ ದಾರಿಯು ಗೋಚರಿಸುವುದು. ದೇವರ ವಾಕ್ಯ ನಮ್ಮ ದಾರಿಗೆ ದೀಪವೂ, ಆ ದೀಪದ ಬೆಳಕಿನಲ್ಲಿ ಸದಾ ನಡೆದು ಯೇಸುವನ್ನು ಮಹಿಮೆಪಡಿಸೊಣ”, ಎಂದು ನುಡಿದರು.
ಅತ್ಯಂತ ಭಕ್ತಿ ಮತ್ತು ಶಿಸ್ತಿನಿಂದ ನಡೆದ ಈ ಮೆರವಣಿಗೆಯು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಎರಡು ಸಾಲುಗಳಲ್ಲಿ ಸಾಗಿತು.
ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ‘ಸೆವಕ್’ ಮಾಸಿಕ ಪತ್ರಿಕೆಯ ಸಂಪಾದಕ ವಂದನೀಯ ಚೇತನ್ ಲೋಬೋ, ಕಾಪುಚಿನ್ ಅವರು ಪ್ರವಚನ ಬೋಧಿಸಿದರು. ಅವರು “ಮಾನವೀಯ ಕುಟುಂಬಗಳು: ಭವಿಷ್ಯದ ಭರವಸೆ” ಎಂಬ ವಿಷಯವನ್ನು ವಿವರಿಸುತ್ತಾ, ಆಧುನಿಕ ಕುಟುಂಬಗಳನ್ನು ಮಾನವೀಯ ನೆಲೆಯಲ್ಲಿ ಸುಧಾರಣೆಗೋಳಿಸಲು ಹಾಗೂ ಪುನಶ್ಚೇತನಗೋಳಿಸಲು ಕರೆ ಕೊಟ್ಟರು.
ಮಂಗಳ ಜ್ಯೋತಿಯ ಸಂಚಾಲಕ ವಂದನೀಯ ವಿಜಯ್ ಮಚಾದೊ ಆವರು ಭಕ್ತಿಯುತವಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.
ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವನಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.