By Pro. Stevan Qudras
Nov 15 : 450 years celebration at Rosario Cathedral will be on Sunday November 18, 2018. Here is a glance at the history of the Cathedral.
ಮಂಗ್ಳುರ್ ದಿಯೆಸೆಜಿಚೆಂ ‘ಕಾಥೆದ್ರಾಲ್’ – 450 ವರ್ಸಾಂಚೊ ಸಂಭ್ರಮ್
ಬೊಳಾರ್ ಮ್ಹಣ್ಚ್ಯಾ ಮಂಗ್ಳುರ್ ಶಹರಾನ್ ದರ್ಯಾಕ್ ಮೆಳುಂಕ್ ವೆಚ್ಯಾ ತ್ಯಾ ಪ್ರಶಾಂತ್ ತಳಾರ್ ಮಂಗ್ಳುರ್ ದಿಯೆಸೆಜಿಚೆಂ ಕಾಥೆದ್ರಾಲ್ ಆದ್ಲ್ಯಾ 450 ವರ್ಸಾಂ ಥಾವ್ನ್ ವಯ್ಭವಾನ್ ಪರ್ಜಳುನ್ ಮಹೋನ್ನತಾಚ್ಯಾ ಮಹಿಮೆಕ್ ಸಾಕ್ಸ್ ದೀವ್ನ್ ಆಸಾ.
1526 ಇಸ್ವೆಂತ್ ರಾಯ್ಪ್ರತಿನಿಧಿ ಲೋಪೊ ವಾಝ್ ದೇ ಸಂಪಾಯೊಚ್ಯಾ ಮುಕೇಲ್ಪಣಾಂತ್ ಪುಡ್ತುಗೆಝಾಂನಿ ಮಂಗ್ಳುರ್ ಬಂಗ (ಬಂಗೇಲ್) ರಾಯಾಂಚ್ಯಾ ಹಾತಾಂತ್ಲೆಂ ವೋಡ್ನ್ ಘೆತ್ಲೆಂ. ಕ್ರಮೇಣ್ ಪುಡ್ತುಗೆಝಾಥಾವ್ನ್ ಕ್ರಿಸ್ತಾಂವ್ ಭಾವಾಡ್ತಿ ಹಾಂಗಾಸರ್ ವಸ್ತೆಕ್ ಆಯ್ಲೆ. ತಾಣಿಂ ಆತಾಂಚ್ಯಾ ತಾಂಡ್ರೆಬಯ್ಲ್ (ತಾಂಡೆಲಾಂಚೆಂ ಬಯ್ಲ್) ಸುವಾತೆರ್ ಸಾನ್ ಸಬೆಸ್ತ್ಯಾವೊ (ಸಾಂತ್ ಸೆಬೆಸ್ತ್ಯಾಂವ್) ವ್ಯಾಪಾರಿ ಠಾಣೆಂ ಸುರ್ವಾತ್ಲೆಂ (ಜಾಕಾ ತವಳ್ಚ್ಯಾ ಯುರೋಪಿ ಭಾಸಾಂನಿ ಫಾಕ್ತೋರಿ/ ಫ್ಯಾಕ್ಟರಿ ಮ್ಹಣ್ತಾಲೆ)
ಜನೆರ್ 5, 1568 ಇಸ್ವೆಂತ್ ಪುಡ್ತುಗೆಝಾಂನಿ ದಿಯೆಗೊ ದೆ ಸಿಲ್ವೇರಾಚ್ಯಾ ಮುಕೆಲ್ಪಣಾನ್ ಫಾಕ್ತೋರಿ ಭಿತರ್ ಹಾಂಗಾಚಿ ಪಯಿಲ್ಲಿ ಇಗರ್ಜ್ ಬಾಂದ್ಲಿ. ಅಶೆಂ ಸುರ್ವಾತ್ಲಿ ಮಹಾನ್ ಕಥಾ ಕೆನಾರಾಚ್ಯಾ ಭಾವಾಡ್ತಿ ವಾಡಾವಳೆಂಚಿ. ಈ ಕಥಾ ಆದ್ಲ್ಯಾ 450 ವರ್ಸಾಂಥಾವ್ನ್ ದೆವಾಚ್ಯಾ ಕುರ್ಪೆನ್ ವಾಡುನ್ ವಿಸ್ತಾರುನ್ಂಚ್ ಆಸಾ.
1623 ಇಸ್ವೆಂತ್ ಇಟಲಿಥಾವ್ನ್ ಕೆನರಾಕ್ ಆಯಿಲ್ಲೊ ಪಯ್ಣಾರಿ ಪಿಯೆತ್ರೊ ದೆಲ್ಲಾ ವಲ್ಲೆ ಹಾಂಗಾಸರ್ ಆಸ್ಚ್ಯಾ ತೀನ್ ಇಗರ್ಜಾಂಚೊ (ನೊಸ್ಸಾ ಸೆನ್ಹೊರಾ ದೊ ರೊಸಾರಿಯೊ ದೆ ಮಂಗಲೋರೆ{ರುಜಾಯ್}, (ನೊಸ್ಸಾ ಸೆನ್ಹೊರಾ ದೆ ಮೆರ್ಸೆ ದೆ ವೆಲಾಲಾ {ಪಾಣೀರ್} ಆನಿ ಸಾವೊ ಫ್ರಾನ್ಸಿಸ್ಕೊ ದೆ ಆಸಿಸ್ಸಿ ಫರಂಗಿಪೇಟ್ ಉಲ್ಲೇಕ್ ಕರ್ತಾ ಆನಿ ಹ್ಯಾ ತಿನಾಂಪಯ್ಕಿ ರುಜಾಯ್ಚಿ ಇಗರ್ಜ್ಚ್ ಲೊಕಾಂಕ್ ಚಡ್ ಮನ್ ವೊಡ್ಚಿ ಜಾವ್ನಾಸಾ ಮ್ಹಣ್ತಾ.
ಪದ್ರುವಾದೆ ವೆವಸ್ತ್ಯಾನ್ ಆಪ್ಲೊ ವಿಗಾರ್ ಅಪೊಸ್ತಲಿಕ್ ಜಾವ್ನ್ 1681 ಂತ್ ಕೆನರಾಕ್ ಧಾಡ್ಲ್ಲ್ಯಾ ಸಾಂತ್ ಜುಜೆ ವಾಝಾನ್ ಹಾಂಗಾಸರ್ ಭಾವಾಡ್ತ್ ವಿಸ್ತಾರಾಂವ್ಚೊ ವರ್ತೊ ವಾವ್ರ್ ಕೆಲೊ. ತಾಚೆ ಪರ್ಮಾಣೆಂ ‘ರುಜಾಯ್ಚಿ ಇಗರ್ಜ್ ಕೆನರಾಚ್ಯಾ ಭಾವಾಡ್ತಾಚೆಂ ಮೊಲಾಧಿಕ್ ಪಾಳ್ಣೆಂ’ ಜಾವ್ನಾಸ್ಲ್ಲೆಂ. ರುಜಾಯ್ ಥಾವ್ನ್ ಹೆರ್ ಇರ್ಮಿದ್ಯೊ ಜನ್ಮೊನ್ ವಾಡ್ಲ್ಯೊ ಮ್ಹಣ್ ತೊ ವಿವರ್ ದಿತಾ.
ಆರ್ಬ್ಯಾಂಕ್ ಆನಿ ಪುಡ್ತುಗೆಝಾಂಕ್ ತವಳ್ ತವಳ್ ವ್ಯಾಪಾರಿ ಕಾರಣಾನ್ ತಿಕ್ಕಾಟ್ ಚಲ್ತಾಲೆ. 1695 ಇಸ್ವೆಂತ್ ಆರ್ಬ್ಯಾಂನಿ ಆಪ್ಲ್ಯಾ ವ್ಯಾಪಾರ್ ವಯ್ವಾಟಾಕ್ ಅಡ್ಕಳ್ ಜಾಲ್ಲ್ಯಾ ಪುಡ್ತುಗೆಝಾಂಚೆರ್ ರಾಗ್ ತಿರ್ಸುಂಕ್ ತಾಂಡ್ರೆಬಯ್ಲಾಂತ್ಲ್ಯಾ ತಾಂಚ್ಯಾ ಕೊಟ್ಯಾಚೆರ್ ದಾಡ್ ಘಾಲ್ನ್ ತೆಂ ಕೊಟೆಂ ಲಾಸುನ್ ಉಡಯ್ಲೆಂ ಆನಿ ಕೊಟ್ಯಾ ಸವೆಂ ಇಗರ್ಜ್ಯಿ ಹುಲ್ಪುನ್ ಗೆಲಿ.
ಅಟ್ರಾವ್ಯಾ ಶೆಕ್ಡ್ಯಾಚ್ಯಾ ಸುರ್ವಾಯೆಂತ್ (1700 ಉಪ್ರಾಂತ್) ಪುಡ್ತುಗೆಝಾಂನಿ ತಾಂಡ್ರೆಬಯ್ಲ್ ಥಾವ್ನ್ ಆತಾಂ ದಕ್ಷಿಣ್ ಕನ್ನಡ ಜಿಲ್ಲ್ಯಾಚ್ಯಾ ಕಲೆಕ್ಟರಾಚೆಂ ದಫ್ತರ್ ಆಸಾ ಥಂಯ್ ಆಪ್ಲೆಂ ಕೊಟೆಂ ಜಾಗ್ಯಾಂತರ್ ಕೆಲೆಂ ಆನಿ ತ್ಯಾ ಕೊಟ್ಯಾಚ್ಯಾ ತೆನ್ಕಾ ಮುಲ್ಯಾಕ್ ಮ್ಹಣ್ಜೆ ಆತಾಂ ಕಾಥೆದ್ರಾಲ್ ಉಬೆಂ ಆಸಾ ಥಂಯ್ ನವಿ ಇಗರ್ಜ್ ಬಾಂದ್ಲಿ.
1700 ಥಾವ್ನ್ ಟಿಪ್ಪುನ್ ಕೆನರಾಚ್ಯಾ ಕ್ರಿಸ್ತಾಂವಾಂಚೆರ್ ಮೋಡ್ತ್ ಮಾರ್ತಾ ಪರ್ಯಾಂತ್ ಮ್ಹಣ್ಜೆ 1784 ಪರ್ಯಾಂತ್ ಪರ್ತ್ಯಾನ್ ರುಜಾಯ್ಚಿ ಇಗರ್ಜ್ ಕ್ರಿಸ್ತಿ ಭಾವಾಡ್ತಾಚ್ಯಾ ವಯ್ಭವಾಚೆಂ ಕೇಂದ್ರ್ ಜಾವ್ನ್ ವಾಡ್ಲಿ, ಭಾವಾಡ್ತ್ಯಾಂಚೊ ಸಂಕೊ ಚಡ್ಲೊ, ದೇವ್ ಆಪೊವ್ಣಿಂ ಫುಲ್ಲಿಂ ಆನಿ ಗಾಂವಾಂನ್ಗಾಂವ್ ಕ್ರಿಸ್ತಾಚೊ ಉಜ್ವಾಡ್ ಹಾಂಗಾಥಾವ್ನ್ ಫಾಂಕ್ಲೊ.
ಟಿಪ್ಪುನ್ ಜೆದ್ವಾಂ ಕಾಂಯ್ ಥಳ್ ನಾತ್ಲ್ಲ್ಯಾ ದುಬಾವಾಚೆರ್ ಹೊಂದುನ್ ಪಟ್ಣಾಕ್ ಆಂಬುಡ್ನ್ ವೆಲೆಂ ತೆದ್ನಾಂ ಕೆನರಾಂತ್ಲ್ಯಾ ಕ್ರಿಸ್ತಾಂವಾಂಚೆರ್ ಆಯಿಲ್ಲೊ ಕಾಳೊಕ್ ತಾಂಚ್ಯಾ ದೇವ್ತೆಂಪ್ಲಾಂಚೆರ್ಯಿ ಆಯ್ಲೊ. ರುಜಾಯ್ಚಿ ಇಗರ್ಜ್ ಪಿಡ್ಡ್ಯಾರ್ಪೂಡ್ ಕೆಲಿ, ಇಗರ್ಜೆಚ್ಯಾ ಫಾತ್ರಾಚೆರ್ ಫಾತೊರ್ ಉರಾನಾತ್ಲ್ಲೆಪರಿಂ ಕೆಲೊ.
ಟಿಪ್ಪುಚ್ಯಾ ಮೊರ್ಣಾ ಉಪ್ರಾಂತ್ ವ್ಹಳೂವ್ಹಳೂ ಭಾವಾಡ್ತಿ ಪಾಟಿಂ ಕೆನರಾಕ್ ಆಯ್ಲೆ. 1813 ಇಸ್ವೆಂತ್ ಥೊಡ್ಯಾ ಭಾವಾಡ್ತಿ ಮುಕೆಲ್ಯಾಂನಿ ಸರ್ಕಾರಾಥಾವ್ನ್ ಆಪ್ಣಾಚಿ ಇಗರ್ಜ್ ಪರ್ತ್ಯಾನ್ ಬಾಂದುಂಕ್ ದುಡ್ವಾಕುಮೊಕ್ ಮಾಗ್ಲಿ. ಸುರ್ವೆರ್ ಕೊಂಡ್ಡ್ಯಾಗೊವೊಳಾಂತ್ ಲಿತುರ್ಜಿ ಚಲ್ತಾಲಿ ತರಿ ಲೊಕಾಚ್ಯಾ ಮ್ಹಿನತೆನ್ ಕ್ರಮೇಣ್ ಪರ್ತ್ಯಾನ್ ಸೊಭಿತ್ ಸುಂದರ್ ದೇವ್ತೇಂಪ್ಲ್ ಹಾಂಗಾಸರ್ ಉಬೆಂ ಜಾಲೆಂ ಭಾವಾಡ್ತ್ಯಾಂಚೊ ಸಂಕೊ ವಾಡ್ಲೊ.
1845 ಇಸ್ವೆಂತ್ ಕೆನರಾ ವೆರಾಪೊಲ್ಲಿಚ್ಯಾ ಅಧೀನ್ ಪ್ರೋ ವಿಕಾರಿಯೆಟ್ ಜಾವ್ನ್ ಸ್ಥಾಪಿತ್ ಜಾಲಿ ತೆದ್ನಾಂ ಹಾಂಗಾಸರ್ ಏಕ್ ‘ಕಾಥೆದ್ರಾಲ್’ ಮಾನೊಂವ್ಚಿ ಗರ್ಜ್ ದಿಸುನ್ ಆಯ್ಲಿ ಆನಿ ಕೆನರಾಂತ್ ಪಯಿಲ್ಲಿ ವಾಡುನ್ ಆಯಿಲ್ಲಿ ರುಜಾಯ್ಚಿ ಇಗರ್ಜ್ ಹ್ಯಾ ಮಾನೊವ್ಣೆಕ್ ಫಾವೊ ಜಾಲಿ.‘ಕಥೆದ್ರಾ’ ಮ್ಹಳ್ಯಾರ್ ಕದೆಲ್ ಎಕಾ ದಿಯೆಸೆಜಿಚ್ಯಾ ಗೊವ್ಳ್ಯಾಚೆಂ ಮ್ಹಣ್ಜೆ ಬಿಸ್ಪಾಚೆಂ ಅಧಿಕಾರಾಚೆಂ ಕೇಂದ್ರ್ ಜಾವ್ನ್ ಕಾಥೆದ್ರಾಲ್ ಸೆವಾ ದಿತಾ. ತಾಚಿ ಬಸ್ಕಾ ಆನಿ ಸದ್ರ್ ಹಾಂಗಾಸರ್ ಥಾವ್ನ್ ಚಲ್ತಾ.
1878 ಇಸ್ವೆಂತ್ ಜೆದ್ವಾಂ ಜೆಜ್ವಿತ್ (ಜೆಜುಚ್ಯಾ ಸಭೆಚೆ) ಯಾಜಕ್ ಹಾಂಗಾಸರ್ ಸೆವೆಕ್ ಆಯ್ಲೆ ತಾಂಚ್ಯಾ ಮಧ್ಲೊ ಬಾಪ್ ಅರ್ಬನ್ ಸ್ಟೇಯ್ನ್ ಕಾಥೆದ್ರಾಲಾಚೊ ವಿಗಾರ್ ಜಾಲೊ. ತಾಣೆಂ ತಾಂಕಿವರ್ತ್ಯಾ ವಾವ್ರಾನ್ ಇಗರ್ಜೆಕ್ ನವೊ ಜೀವ್ ಭರ್ಲೊ ಮಾತ್ರ್ ನ್ಹಂಯ್ ಫಿರ್ಗಜ್ ಜಿವಾಳ್ ಕೆಲಿ. ಅರ್ಸುಲಾಯ್ನ್ ಧರ್ಮ್ಮೆಳಾಚ್ಯಾ ಸಂಸ್ಥಾಪನಾಕ್ ತಾಣೆಂ ವಾಟ್ ದಾಕಯ್ಲಿ. 1910 ಇಸ್ವೆಂತ್ ಕಾಥೆದ್ರಾಲಾಕ್ ನವೆಂ ಬಾಂದಪ್ ಬಾಂದ್ಚಿ ಗರ್ಜ್ ದಿಸುನ್ ಆಯ್ಲಿ. ವಿಗಾರ್ ಹೆನ್ರಿಕ್ ಬುಜ್ಜೋನಿ, ಬ್ರದರ್ ದಿವೊ, ಬಾಪ್ ಎವ್ಜಿನ್ ರೊಜೆಟ್ಟಿ ಹಾಂಚ್ಯಾ ಹುಮೆದಿನ್ , ನಿರಂತರ್ ವಾವ್ರಾನ್ ಆನಿ ದೆವಾಚ್ಯಾ ಬೆಸಾಂವಾಂನಿ ಆಜ್ ಉಬೆಂ ಆಸಾ ತೆಂ ‘ರೋಮನೆಸ್ಕ್’ (ಬಯ್ಜಂತಿಯುಮ್ ಆನಿ ರೋಮನ್ ಶಯ್ಲೆಚೆಂ ಸಮ್ಮಿಶ್ರಣ್) ಬಾಂದ್ಪಾಶಯ್ಲೆಚೆಂ ಮಜ್ಬೂತ್ ಕಾಥೆದ್ರಾಲ್ ಬಾಂದಪ್ ಉಬೆಂ ಜಾಲೆಂ. ತಿಚಿ ದಯ್ವಿಕ್ ಗ್ರೇಸ್ತ್ಕಾಯ್ ಚಾರ್ಗಾಂವಾಂಕ್ ಪಾವೊಂವ್ಕ್ ರುಜಾಯ್ಚ್ಯೊ ಘಾಂಟಿ ಮ್ಹಣ್ಂಚ್ ಚರಿತ್ರೆಂತ್ ನಾಂವ್ ಜಾಲ್ಲ್ಯೊ ಚಾರ್ ವ್ಹಡ್ ಜಯ್ತ್ ಘಾಂಟಿ ಇಟಲಿಥಾವ್ನ್ ಹಾಡ್ನ್ ಹಾಂಗಾಚ್ಯಾ ಘಾಂಟಿತೊರಿಚೆರ್ ಬಸಯ್ಲ್ಯೊ.
1924 ಎಪ್ರಿಲ್ 3 ವೆರ್ ಬಿಸ್ಪ್ ಪಾವ್ಲ್ ಪೆರಿನಿನ್ ನವ್ಯಾ ಕಾಥೆದ್ರಲ್ ಬಾಂದ್ಪಾಚೆಂ. ಸಮರ್ಪಣ್ ಕೆಲೆಂ. ತ್ಯಾ ದೀಸ್ ಥಾವ್ನ್ ಹ್ಯಾ ಸೊಭಿತ್ ಸುಂದರ್ ಮಂದಿರಾಚೊ ಉಜ್ವಾಡ್ ಕೆನರಾಂತ್ ಆನಿ ಕೆನರಾಕ್ ಉತ್ರುನ್ ಹಜಾರೊ ಗಾಂವಾಂಕ್ ಫಾಂಕ್ತಾ.
ರುಜಾಯ್ ಕಾಥೆದ್ರಾಲಾಚ್ಯಾಖಾಲ್ ಆನಿ ಆಸ್ಪಾಸ್ ಶಿಕ್ಷಣಾಚೆಂ ಮಿಸಾಂವ್ ಭೋವ್ ವರ್ತ್ಯಾ ರಿತಿನ್ ಚಲುನ್ ಆಯ್ಲಾಂ ಆನಿ ಸರ್ವ್ ಲೊಕಾಂಕ್ ಜಾಣ್ವಾಯೆಚೊ ಉಜ್ವಾಡ್ ಫಾಂಕ್ಲಾ ಮ್ಹಣ್ಚೆಂ ದುಬಾವಾವಿಣ್. 1858 ಂತ್ ಮ್ಹಣ್ಜೆ ಆಜಿಕ್ ಕಾಂಯ್ 160 ವರ್ಸಾಂ ಆದಿಂ ಬಿಸ್ಪ್ ಮಾರಿ ಅಂತೊನಿನ್ ಎಫ್ರಾಯೆಮಾನ್ ರುಜಾಯ್ ಹಾಯ್ಸ್ಕೂಲ್ ಸ್ಥಾಪನ್ ಕೆಲೆಂ. ಹ್ಯಾ ಇಸ್ಕೊಲಾಂತ್ ಶಿಕ್ಲ್ಲೆ ಹಜಾರೊ ಮುಕೆಲಿ ದೆಶಾ-ವಿದೇಶಾಂಚ್ಯಾ ಮುಲ್ಯಾಂಮುಲ್ಯಾಂನಿ ಪರ್ಜಳ್ಳ್ಯಾತ್. ತೆಂ ಹಾಯ್ಸ್ಕೂಲ್ ಆಜ್ ಪಿಯುಸಿ ಕೊಲೆಜ್ ಜಾವ್ನ್ ರೊಜೆರಿಯೊ ಕೊಲೆಜ್ ಆಫ್ ಬಿಸ್ನೆಸ್ ಮ್ಯಾನೆಜ್ಮೆಂಟ್ ಜಾವ್ನ್ ವಾಡ್ಲಾಂ. 1902 ಇಸ್ವೆಂತ್ ಸಾಂತ್ ಅರ್ಸುಲಾ ಕನ್ನಡ ಇಸ್ಕೊಲ್ ಸುರ್ವಾತ್ಲೆಂ. 1982 ಇಸ್ವೆಂತ್ ಆಧುನಿಕ್ ಕಾಳಾಚ್ಯಾ ಗರ್ಜೆಕ್ ತೆಕಿತ್ ರೊಜಾರಿಯೊ ಇಂಗ್ಲಿಶ್ ಮಿಡಿಯಮ್ ಇಸ್ಕೊಲ್ ಸುರ್ವಾತ್ಲೆಂ. ಹ್ಯಾ ಕಾಥೆದ್ರಾಲಾಚ್ಯಾ ಸಾವ್ಳೆಂತ್ 1890 ಇಸ್ವೆಂತ್ ಮದರ್ ವೆರೋನಿಕಾನ್ ಸುರ್ವಾಥ್ಲಲೆಂ ಶಿಕ್ಷಕ್ ತರ್ಬೆತೆ ಕೇಂದ್ರ್ ಆಜ್ ಜಾಗತಿಕ್ ಹಂತಾರ್ ಮಹತ್ವಾಚೆಂ ಶಿಕ್ಷಕ್ ತರ್ಬೆತೆ ಕೇಂದ್ರ್ ಮ್ಹಣುನ್ ನಾಮ್ಣೆಚೆಂ ಜಾಲಾಂ. ಹಾಂಗಾಸರ್ ಸ್ನಾತಕೋತ್ತರ್ ಹಂತಾ ಪರ್ಯಾಂತ್ ಶಿಕ್ಷಕ್ ತರ್ಬೆತಿ ಲಾಭ್ತಾ. ತ್ಯಾಚ್ ಪರಿಸರಾಂತ್ ಸಾಂತ್ ಅನ್ನಾ ಹಾಯ್ಸ್ಕೂಲ್ ಆನಿ ಪಿಯುಸಿ ಕೊಲೆಜ್ ಉಬಿ ಜಾಲ್ಯಾ. ಹ್ಯಾಚ್ ಪರಿಸರಾಂತ್ ಶ್ರೀಮತಿ ಫ್ರಾನ್ಸೆಸ್ ಪಿಂಟೊಚ್ಯಾ ಮುಕೇಲ್ಪಣಾಂತ್ ಇನ್ಫೆಂಟ್ ಜೀಸಸ್ ಜೊಯ್ಲ್ಯಾಂಡ್ ಇಸ್ಕೊಲ್ ಶಿಕ್ಪಾ ಸೆವಾ ದೀವ್ನ್ ಆಸಾ.
ರುಜಾಯ್ ಕಾಥೆದ್ರಾಲ್ ಮಂಗ್ಳುರ್ ಧರ್ಮ್ಪ್ರಾಂತಾಚೆಂ ಮಹತ್ವಾಚೆಂ ಧಾರ್ಮಿಕ್ ಕೇಂದ್ರ್ ಜಾವ್ನ್ ಆದ್ಲ್ಯಾ 450 ವರ್ಸಾಂ ಥಾವ್ನ್ ಲಾಕೊಂಲೊಕಾಂಚೆಂ ಭಕ್ತಿಚೆಂ ಆನಿ ಸಕ್ತೆಚೆಂ ಕೇಂದ್ರ್ ಜಾವ್ನ್ ವಾಡ್ಲಾಂ. ಕರಾವಳಿ ಕರ್ನಾಟಕಾಚ್ಯಾ ಸರ್ವ್ ಧರ್ಮಾಂಚ್ಯಾ ಭಕ್ತಿಕಾಂಚಿ ಅವಯ್ ರೊಜಾರ್ ಮಾಂಯ್ ಆಪ್ಲ್ಯಾ ಭುರ್ಗ್ಯಾಂಕ್ ದೆಣ್ಯಾಂನಿ ಭರುನ್ಂಚ್ ಆಸಾ. ತಿಚ್ಯಾ ಪಾಂಯಾಂಮುಳಿಂ ಆಯಿಲ್ಲ್ಯಾಂಕ್ ತಿಣೆಂ ಕೆದಿಂಚ್ ಪಾಟಿಂ ಕೆಲ್ಲೆಂ ನಾ. ಜಾತಿಕಾತಿಚೊ ದೊರೊ ತಿಕಾ ನಾ. ಭೆದ್ ಆನಿ ತಡವ್ ತಿಚೆ ಥಂಯ್ ನಾ. ಆಮ್ಚಿ ಮಾಂಯ್ ಮಯ್ಪಾಶಿ ಆನಿ ಆಮ್ಕಾಂ ರಾಕುನ್ ರಾಂವ್ಚಿ, ತಿಚಿಂ ಭುರ್ಗಿಂ ಜಾವ್ನ್ ತಿಚ್ಯಾ ಮೊಗಾರ್ ಪಡ್ಚೆಂ ಮಾತ್ರ್ ಆಮ್ಕಾಂ ಬಾಕಿ ಆಸ್ಚೆಂ.
ಪದ್ರುವಾದೆ ನಿಯಂತ್ರಣಾಖಾಲ್ ರುಜಾಯ್ಚೆಂ ಕಾಥೆದ್ರಾಲ್ ಆಸ್ಲ್ಲಿ ಸಾಕ್ಸ್ ಜಾವ್ನ್ ಪುಡ್ತುಗಲಾಚ್ಯಾ ರಾಯಾಚ್ಯಾ ಮ್ಹೊರಿಚೊ ಫಾತೊರ್ – ಪದ್ರುವಾದೆ ಮ್ಹಳ್ಯಾರ್ ಪುಡ್ತುಗೆಝಾಚ್ಯಾ ರಾಯಾಚ್ಯಾ ನಿಯಂತ್ರಣಾ ಮುಕಾಂತ್ರ್ ಪವಿತ್ರ್ಸಭೆಚೆಂ ವಿಸ್ತರಣ್ ಜಾಂವ್ಚಿ ವೆವಸ್ತಾ. ಪ್ರೊಫಗಾಂದಾ ಫೀದೆ ಮ್ಹಳ್ಯಾರ್ ಶೀದಾನ್ಶೀದಾ ಪಾಪಾ ಖಾಲ್ ಆಸ್ಚಿ ಪವಿತ್ರ್ ಸಭೆಚಿ ವೆವಸ್ತಾ. ಆಜ್ ಪದ್ರುವಾದೆಚೆಂ ಬಳ್ ಮೊಡ್ಲಾಂ.
ಸಾತ್ ಅಲ್ತಾರಿಂಚಿ ಸೊಭಾಯ್:
ವಾತಿಕಾನ್ ದುಸ್ರ್ಯಾ ಮಹಾಸಭೆ ಪಯ್ಲೆಂ ಎಕಾಚ್ ಇಗರ್ಜೆಂತ್ ಎಕಾಚ್ ಕಾಳಾರ್ (ಯಾಜಕಾಂನಿ ಮಾತ್ರ್) ಸಭಾರ್ ಮಿಸಾಂ (ಲೊಕಾಕ್ ಪಾಟ್ ಕರ್ನ್ ವಾ ಆಪ್ಣಾ ಖಾತಿರ್ಚ್) ಭೆಟೊಂವ್ಚಿ ರೀತ್ ಆಸ್ಲ್ಲಿ ಆನಿ ಹ್ಯಾ ಖಾತಿರ್ ಆದ್ಲ್ಯಾ ಕಾಳಾಚ್ಯಾ ಇಗರ್ಜಾಂನಿ ಸಭಾರ್ ಆಲ್ತಾರಿ ಆಸ್ತಾಲ್ಯೊ. ಮದ್ಗಾತ್ ವಯ್ಭಾವಾನ್ ಸೊಭ್ಚಿ ರೊಜಾರ್ ಸಾಯ್ಬಿಣಿಚಿ ಪ್ರಧಾನ್ ಆಲ್ತಾರ್ ಸೊಡ್ಲ್ಯಾರ್ ಸ (6) ಕುಟ್ ಆಲ್ತಾರಿ ರುಜಾಯ್ಚ್ಯಾ ಕಾಥೆದ್ರಾಲಾಂತ್ ಆಸ್ಲ್ಲ್ಯೊ. ಹ್ಯಾ ಪಯ್ಕಿ ಥೊಡ್ಯಾ ಆಯಿನ್ನ್ ಕಾರಣಾಂಕ್ ಲಾಗುನ್ ದೋನ್ (2)ಧಾಂಪ್ಲ್ಯೊ ಆನಿ ಆತಾಂ ಜೆಜುಚ್ಯಾ ಪವಿತ್ರ್ ಕಾಳ್ಜಾಚಿ, ಸಾಂತ್ ಆಂತೊನಿಚಿ, ಭಾಗೆವಂತ್ ಜುಜೆಚಿ ಆನಿ ಸಾಂತ್ ಫ್ರಾನ್ಸಿಸ್ ಸಾವೇರಾಚಿ ಅಶೆಂ ಚಾರ್ (4) ಕುಟ್ ಆಲ್ತಾರಿ ಉಗ್ತ್ಯೊ ಆಸಾತ್.
ಪುಡ್ತುಗೆಝಾಂನಿ ತಾಂಡ್ರೆಬಯ್ಲಾಂತ್ ಪಯಿಲ್ಲಿ ಇಗರ್ಜ್ ಕಿತ್ಯಾಕ್ ಬಾಂದ್ಲಿ ಮ್ಹಳ್ಯಾರ್ ತೆಣೆಂತ್ಲ್ಯಾನ್ ದರ್ಯಾಂತ್ ತಾರ್ವಾರ್ ವೆತಾನಾಂ ತ್ಯಾ ಸುವಾತೆರ್ ತಾಂಕಾಂ ಏಕ್ ವ್ಹಡ್ಜಯ್ತ್ ರುಕಾಡಾಚೊ ಖುರಿಸ್ ದಿಸ್ಲೊ ಖಂಯ್, ತೊ ಖುರಿಸ್ 1493 ಇಸ್ವೆಂತ್ ಮಾಸ್ಳಿ ಪಾಗ್ತೆಲ್ಯಾಂಕ್ ಜಾಳಾಂತ್ ಸಾಂಪ್ಡಾಲ್ಲೊ ಆನಿ ತೊ ತಾಣಿಂ ಬಂಗಾ ರಾಯಾಂಕ್ ದಿಲ್ಲೊ ಆನಿ ರಾಯಾನ್ ಖಂಚ್ಯಾಗಿ ಕಾರಾಣಾನ್ ತೊ ಏಕ್ ಕಾಟೆಂ ಬಾಂದುನ್ ಮಾನಾಕ್ ದವರ್ಲಲೊ ಖಂಯ್ ಆನಿ ತ್ಯಾಚ್ ಜಾಗ್ಯಾರ್ ಇಗರ್ಜೆಕ್ ಥಳ್ ಕೆಲೆಂ.
ರೊಜಾರಿಚಿ ಮಾಂಯ್ ಅಜಾಪಾಂ ಕರ್ತಾ – ತಿಚಿ ಅಜಾಪಾಂಚಿ ಇಮಾಜ್
ಕಾಂಯ್ 1560 ಇಸ್ವೆಂತ್ ಬೊಳಾರಾಂತ್ ಮಾಸ್ಳಿ ಪಾಗ್ತೆಲ್ಯಾಂಕ್ ಭಾಗೆವಂತ್ ಆಂಕ್ವಾರ್ ಸಾಯಿಣಿಚಿ ವ್ಹಡ್ ಏಕ್ ರುಕಾಡಾಚಿ ಇಮಾಜ್ ಜಾಳಾಂತ್ ಮೆಳ್ಳಿ. ತಿ ತಾಣಿಂ ಇಗರ್ಜೆಕ್ ದಿಲಿ. ಸಾಯ್ಬಿಣಿಚೆ ಕೇಸ್ ಭಿಸ್ಳೆ ಆಸ್ಲ್ಲೆ. ಅಶೆಂ ವಾಡ್ಲೆಂ ಆಮ್ಚ್ಯಾ ಲೊಕಾಂಚ್ಯಾ ಜಿಬೆರ್ ಗುಮ್ಟಾಂಚೆಂ ಪೊದ್ ‘ ಗೊಂಯ್ ಸಾಂಡುನ್ ಆಯ್ಲಿ ಮಾಂಯ್ ಧೆಂವ್ಲಿ ಸಮ್ದಿರಾಕ್, ದೆಂವ್ಲಿ ಸಮ್ದಿರಾಕ್ ಬಿಸ್ಳ್ಯಾಕೆಸಾಂನಿ ಮಾಂಯ್ ಪಾವ್ಲಿ ಬೊಳಾರಾಕ್’. ಹಿ ಅಜಾಪಾಂಚಿ ಇಮಾಜ್ ಆತಾಂ ಸಾಂತ್ ಲುವಿಸ್ ಕೊಲೆಜಿಚ್ಯಾ ಸಾಂಟ್ಯಾಘರಾಂತ್ (ಮ್ಯುಸಿಯಮಾಂತ್) ಆಸಾ.
ಜಿಣಿ ಬದ್ಲುಂಕ್ ದಿಗ್ದರ್ಶನ್ ದಿಂವ್ಚಿ ಪುಲ್ಪುತ್ರ್
ಹಾಂಗಾಸರ್ ಸೊಭ್ಚಿ ಪುಡ್ತುಗೇಝ್ ಶಯ್ಲೆಚಿ ರುಕಾಟಾಚಿ ಪುಲ್ಪುತ್ರ್ ಶೆಂಭೊರಾಂನಿ ವರ್ಸಾಂನಿ ಲೊಕಾಂಚ್ಯಾ ಜಿವಿತಾಕ್ ನವಿ ದಿಶಾದಿಂವ್ಚಿ ದೆವಾಚೆಂ ಉತರ್ ಮೊಡ್ಚಿ ವೆದಿ ಜಾವ್ನಾಸ್ಲ್ಲಿ. ಹಾಚ್ಯಾ ಘಟ್ ಖಾಂಬ್ಯಾಂ ವಯ್ರ್. ಚವ್ಗ್ ವಾಂಜೆಲಿಸ್ತ್ ಮರಿಯೆ ಆಮ್ಚೆ ಮಾಂಯೆ ಭಂವ್ತಿಂ ಸೊಭ್ತಾತ್, ಎಕಾ ಕೊನ್ಶ್ಯಾಕ್ ಸಾಂತ್ ಆಂಬ್ರೋಜ್ ಆನಿ ಎಕಾ ಕೊನ್ಶ್ಯಾಕ್ ಸಾಂತ್ ಆಗುಸ್ತಿನಿಚೆಂ ಪಿಂತುರ್ ಆಸಾ.
ದೋಮ್, ದಾರ್ವಾಟ್ಯಾ ಖಾಂಬೆ, ಆರ್ಕ್ ಆನಿ ಕುಟ್ಆರ್ಕಾಂಚಿ ಸೊಭಾಯ್
ರುಜಾಯ್ ಕಾಥೆದ್ರಾಲಾಚಿ ವಯ್ಭವಿಕ್ ಸೊಭಾಯ್ ಪಯಿಲ್ಲೆಂ ತಿಣೆ ಪಯ್ಶಿಲ್ಯಾನ್ ಹಜಾರೊ ಭಕ್ತಿಕಾಂಕ್ ಆಪ್ಣಾಥಂಯ್ ವೊಡ್ಚ್ಯಾ ತ್ಯಾ ದೊಮಾಂತ್ ಉಟುನ್ ದಿಸ್ತಾ. ರೊಮಾಂತ್ಲ್ಯಾ ಸಾಂತ್ ಪೆದ್ರು ಬಾಸಿಲಿಕಾಚ್ಯಾ ಸಾರ್ಕ್ಯಾಕ್ ಹಾಂಗಾ ಬಾಂದ್ಪಾಂತ್ ವಾಪರ್ಲಾಂ. ಗ್ರೇಕೊ ರೋಮನ್ ಶಯ್ಲೆಚೆ ಫುಡ್ಲ್ಯಾ ದಾರ್ವಾಟ್ಯಾ ಖಾಂಬೆ ತಶೆಂಚ್ ಇಗರ್ಜೆ ಭಿತರ್ ಲಾಂಬಾಯೆಕ್ ಆಸ್ಚೆ 48 ವ್ಹಡ್ ಆರ್ಕ್ ಆನಿ ತಾಂಚೆ ವಯ್ಲೆ 50 ಕುಟ್ಆರ್ಕ್ ನಿರ್ಮಾಣ್ ಸೊಭಾಯ್ ಪಾರ್ಕುಂಚ್ಯಾ ದೊಳ್ಯಾಂಕ್ ಫೆಸ್ತ್ಚ್ ಸಯ್. 12 ಕೇಂದ್ರ್ ಆರ್ಕಾಂಚಿ ಉಂಚಾಯ್ ಸರ್ವೆಸ್ಪರಾಚ್ಯಾ ಸಂಪತ್ತೆ ಉಂಚಾಯೆಚಿ ಸಾಕ್ಸ್ ತಶೆಂ ಸೊಭ್ತಾತ್.
ಹ್ಯಾ ಥಳಾಂತ್ ವಾಡ್ಲೆ ದೋನ್ ಧರ್ಮ್ಮೇಳ್
1887 ಇಸ್ವೆಂತ್ ಎಪ್ರಿಲ್ 10 ವೆರ್ ರುಜಾಯ್ಚೊ ವಿಗಾರ್ ಬಾಪ್ ಅರ್ಬನ್ ಸ್ಟೇಯ್ನಾಚ್ಯಾ ಪ್ರೇರಣಾನ್ 12 ಯುವತಿಂನಿ ‘ಪಾಯಸ್ ಅಸೋಸಿಯೇಶನ್ ಆಫ್ ಸೇಂಯ್ಟ್ ಅರ್ಸುಲಾ’ ಸುರ್ವಾತ್ಲೆಂ ಆನಿ ಥಂಯ್ಥಾವ್ನ್ ವಾಡುನ್ ಆಜ್ ಸಂಸ್ರಾಚ್ಯಾ ಕೊನ್ಶ್ಯಾಕೊನ್ಶ್ಯಾ ಕ್ರಿಸ್ತಾಚ್ಯಾ ಮಾಯಾಮೊಗಾಚಿ ಸಾಕ್ಸ್ ದೀವ್ನ್ ಆಸಾ ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮ್ಮೇಳ್.
ಕಾರ್ಮೆಲಿತ್ ಬಿಸ್ಪ್ ಮಾರಿ ಎಫ್ರೇಮಾಚ್ಯಾ ಉಲ್ಯಾಕ್ ಫಾಳೊ ದೀವ್ನ್ ಫ್ರಾನ್ಸಾಚ್ಯಾ ಪೋ ಶಹರಾಥಾವ್ನ್ ಮಾನಾಪಾತ್ರ್ ಮದರ್ ವೆರೋನಿಕಾಚ್ಯಾ ಮುಕೇಲ್ಪಣಾಂತ್ ರುಜಾಯ್ ಯೇವ್ನ್ ಪಾವ್ಲ್ಲಿಂ 9 ಜಣಾಂ ಭಯ್ಣಿಂ ಹ್ಯಾ ದೇವ್ಮಂದಿರಾಚ್ಯಾ ಸಾವ್ಳೆಂತ್ ಕ್ರಿಸ್ತಾಚೊ ಉಜ್ವಾಡ್ ಸಂಸ್ರಾಚ್ಯಾ ಮುಲ್ಯಾಮುಲ್ಯಾಕ್ ಪಾವೊಂವ್ಚೆಂ ಬಳ್ ಜಾವ್ನ್ ವಾಡುಂಕ್ ಸಕ್ಲಿಂ.
ಹಾಂಗಾ ಥಾವ್ನ್ ಹಾಂಗಾ ಪರ್ಯಾಂತ್ ಪಯ್ಣ್ ಆಮ್ಚ್ಯಾ ದಿಯೆಸೆಜಿಚ್ಯಾ ಗೊವ್ಳ್ಯಾಂಕ್….
ಮಂಗ್ಳುರ್ ದಿಯೆಸೆಜಿಚೆ ಗೊವ್ಳಿ ಆಪ್ಲೆಂ ಗೊವ್ಳಿಕ್ ಮ್ಹಣಿಯಾರ್ಪಣ್ ಹಾಂಗಾ ಥಾವ್ನ್ ಸುರ್ವಾತ್ತಾ. ವಿಶೇಸ್ ಸಂದರ್ಭ್ ಸೊಡ್ನ್ ಆದ್ಲ್ಯಾ ಸಾತ್ ಗೊವ್ಳ್ಯಾಂಚೆಂ ಗೊವ್ಳಿಕ್ ಕೊನ್ಸೆಕ್ರಸಾಂವ್ ಹಾಂಗಾಚ್ ಜಾಲಾಂ. ಹಾಂಗಾಚ್ ತಾಂಚ್ಯಾ ಸೆವೆಅಧಿಕಾರಾಚೊ ಪಾಟ್ ಭದ್ರ್ ಆಸ್ತಾ. ಆನಿ ಚಡ್ ಕರ್ನ್ ಸಂಸ್ರಾಚೆಂ ತಾಚೆಂ ಪಯ್ಣ್ ಸಂಪ್ಲ್ಯಾ ಉಪ್ರಾಂತ್ ತಾಚ್ಯಾ ನಿರ್ಜೀವ್ ಕುಡಿಕ್ ಕಾಥೆದ್ರಾಲಾಂತ್ಚ್ ನಿಕೆಪಿತಾತ್. ಅಶೆಂ ರುಜಾಯ್ ಕಾಥೆದ್ರಾಲಾಂತ್ ಹೆ ಆಮ್ಚೆ ಅಮರ್ ಉಗ್ಡಾಸಾಚೆ ಗೊವ್ಳಿ ಸಾಸ್ಣಿಕ್ ವಿಶೆವಾಂತ್ ಆಸಾತ್.
+ ಬಿಸ್ಪ್ ಮಾರಿ ಎಫ್ರೆಮ್, + ಬಿಸ್ಪ್ ನಿಕೋಲಸ್ ಮರಿಯಾ ಪಗಾನಿ, + ಬಿಸ್ಪ್ ಅಬುಂದಿಯಾಸ್ ಕವಾದೀನಿ,
+ ಬಿಸ್ಪ್ ವಲೇರಿಯನ್ ಸೋಜ್, + ಬಿಸ್ಪ್ ವಿತೊರ್ ಫೆರ್ನಾಂದ್, + ಬಿಸ್ಪ್ ಬಾಜಿಲ್ ಪೆರಿಸ್
+ ಬಿಸ್ಪ್ ಬಾಜಿಲ್ ಸಾ ಸೋಜ್
ಪುನೆವಂತಾಂನಿ ಆಶೀರ್ವಾದಿತ್ ಕೆಲ್ಲೆಂ ಆಶೀರ್ವಾದಾಂಚೆ ಥಳ್.
ಹ್ಯಾ ಥಳಾಂತ್ ವಸ್ತಿ ಕೆಲ್ಲಿಂ ಪುನೆವಂತಾಂ
- ಖುರ್ಸಾಯಿಲ್ಲ್ಯಾ ಜೆಜುಚಿ ಮಿಸ್ತಿಕ್ ಸಾಂತ್ ಮೇರಿ ಬೊವಾರ್ದಿ 1870-1872 ಅವ್ದೆಂತ್ ಹ್ಯಾ ಭೊಂವಾರಾಂತ್ ಜಿಯೆಲಿ.
- ಮರಿಯೆಚೊ ಖಾಸ್ ಸೆವಕ್ ಕೆನರಾಚೊ ಆರ್ಸೊ ಸಾಂತ್ ಜುಜೆ ವಾಝ್ 1678-1681 ಅವ್ದೆಂತ್ ಹಾಂಗಾಸರ್ ವಾವುರ್ಲೊ.
- ಅಪೊಸ್ತಲಿಕ್ ಕಾರ್ಮೆಲ್ ಧರ್ಮ್ಮೆಳಾಚಿ ಘಡ್ನಾರ್ ಮಾನಾಪಾತ್ರ್ ಮದರ್ ವೆರೋನಿಕಾ 1860-1862 ಅವ್ದೆಂತ್ ಹಾಂಗಾಸರ್ ಆಸ್ಲ್ಲಿ.
- ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮ್ಮೆಳಾಚೊ ಘಡ್ನಾರ್ ಮಾ.ಬಾ. ಅರ್ಬನ್ ಸ್ಟೇಯ್ನ್ 1878-1888 ಅವ್ದೆಕ್ ಹ್ಯಾ ಫಿರ್ಗಜೆಚೊ ವಿಗಾರ್ ಆಸ್ಲ್ಲೊ
- ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮ್ಮೆಳಾಚಿ ಮಹಾನ್ ತಾಂಡೆಲಿ ಮದರ್ ನಿಂಫಾ ಫೆರ್ನಾಂದೆಝ್ ಹ್ಯಾ ಫಿರ್ಗಜೆಂತ್ ಜನ್ಮುನ್ ವಾಡ್ಲ್ಲಿ
- ಹ್ಯಾ ಕಾಥೆದ್ರಲಾಚ್ಯಾ ಸಾವ್ಳೆಂತ್ ವಾಡ್ಲೆಂ ಭಾರತಾಚ್ಯಾ ಸುಟ್ಕಾಯೆಝುಜಾಂತ್ ಪ್ರಮುಕ್ ಪಾತ್ರ್ ಖೆಳ್ಲ್ಲೆಂ ಅಲ್ಬುಕರ್ಕ್ ಪಯ್ ಕುಟಮ್ ಆನಿ ತ್ಯಾ ಕುಟ್ಮಾಂತ್ಲಿಂ ಫುಡಾರಿ ಥಿಕಾಂ ಭೋವ್ ಮಾನೆಸ್ತ್ ಫೆಲಿಕ್ಸ್ ಪಯ್ ಆನಿ ಭೋವ್ ಮಾನೆಸ್ತಿಣ್ ಅಕ್ಟೇವಿಯಾ ಅಲ್ಬುಕರ್ಕ್ ಪಯ್
ಕನ್ನಡ ಕರಾವಳಿಯ ಮಣಿಮುಕುಟಕ್ಕೆ 450 ರ ಸಂಭ್ರಮ
ಮಂಗಳೂರು ನಗರ ಸಮುದ್ರವನ್ನು ಸಂಧಿಸಲು ಮುಂದೊತ್ತುವಲ್ಲಿ ಬೋಳಾರ ಎಂಬ ಆ ಸಣ್ಣ ಆದರೂ ನಗರಕ್ಕೆ ತೀರಾ ಮಹತ್ವದ ಸ್ಥಳದಲ್ಲಿ ಮನೆಮಾಡಿರುವ ಪವಿತ್ರ ಜಪಮಾಲಾ ಕನ್ನಿಕೆಯ ಮಹಾದೇವಾಲಯ ವಿಚಾರಣೆಗೆ ಇದೇ 2018 ರಲ್ಲಿ 450 ರ ಸಂಭ್ರಮ. ಪವಿತ್ರ ಜಪಮಾಲಾ ಕನ್ನಿಕೆಯ ದೇವಾಲಯವು ಪ್ರಸ್ತುತ ಮಂಗಳೂರು ಧರ್ಮಪ್ರಾಂತ್ಯದ ಮಹಾದೇವಾಲಯವಾಗಿದೆ (ಕೆಥೆಡ್ರಲ್) ಇದು ಕನ್ನಡ ಕರಾವಳಿಯಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿಯೆ ಇಂದಿಗೂ ಸಕ್ರಿಯ ಬಳಕೆಯಲ್ಲಿರುವ ತೀರಾ ಪುರಾತನ ದೇವಾಲಯವಾಗಿದೆ.
ಕನ್ನಡ ಕರಾವಳಿಯಲ್ಲಿ ಕ್ರೈಸ್ತ ಧರ್ಮ ಕ್ರಿಸ್ತಶಖೆಯ ಆರಂಭದಲ್ಲಿಯೇ ಹಬ್ಬಿತ್ತು. ಯೇಸುವಿನ ಹನ್ನೆರಡು ಶಿಷ್ಯರ ಪೈಕಿ ಒಬ್ಬನಾದ ತೋಮನೆಂಬ ತೋಮಾಸನು ಇಂಡೊ-ಪಾರ್ಥಿಯನ್ ದೊರೆ ಗೊಂಡಫೆರ್ನಸನ ಆಹ್ವಾನದಂತೆ ಭಾರತಕ್ಕೆ ಬಂದು ನಂತರ ಪಶ್ಚಿಮ ಕರಾವಳಿಯಲ್ಲಿ ಸುವಾರ್ತಾ ಪ್ರಚಾರಕ್ಕೆ ತೊಡಗಿದನು. ಆತನ ಜತೆ ಬಂದಿದ್ದ ನತನಾಯೇಲನೆಂಬ ಬಾರ್ಥಲೋಮೆಯ ಕರ್ನಾಟಕದ ಕರಾವಳಿಯ ಬಾರ್ಕೂರನ್ನು ಕೇಂದ್ರವಾಗಿರಿಸಿ ಧರ್ಮಪ್ರಚಾರ ಮಾಡಿದನೆಂಬ ಪ್ರತೀತಿಯಿದೆ. 13-14 ನೇ ಶತಮಾನದಲ್ಲಿಯೇ ಈ ಪ್ರದೇಶದಲ್ಲಿ ಪ್ರಭಾವಶಾಲಿ ಕ್ರೈಸ್ತ ಸಮುದಾಯದ ಅಸ್ತಿತ್ವದ ಬಗ್ಗೆ ಮತ್ತು ಸಿರಿಯಾದ ಧರ್ಮಸಭೆಯ ಬಗ್ಗೆ ನಮಗೆ ಉಲ್ಲೇಖಗಳು ಹಲವಾರು ಸಮಕಾಲೀನ ಗ್ರಂಥಗಳಲ್ಲಿ ದೊರೆಯುತ್ತವೆ. ಅದಾಗ್ಯೂ ಪೋರ್ಚುಗೀಸರು ಕನ್ನಡ ಕರಾವಳಿಯ ಮೇಲೆ ತಮ್ಮ ನಿಯಂತ್ರಣ ಸ್ಥಾಪಿಸಿದ ನಂತರವೇ ಇಲ್ಲಿ ಕಥೋಲಿಕ ಕ್ರೈಸ್ತ ಧರ್ಮದ ತ್ವರಿತ ಹಬ್ಬುವಿಕೆಯನ್ನು ನಾವು ಗುರುತಿಸಬಹುದಾಗಿದೆ.
1526 ರಲ್ಲಿ ರಾಜಪ್ರತಿನಿಧಿ ಲೋಪೊ ವಾಝ್ ದೇ ಸಂಪಾಯೊನಾ ನಾಯಕತ್ವದಲ್ಲಿ ಪೋರ್ಚುಗೀಸರು ಮಂಗಳೂರು ನಗರವನ್ನು ಬಂಗರಸರ (ಬಂಗೇಲ್) ಕೈಯಿಂದ ಕಿತ್ತುಕೊಂಡರು. ಕ್ರಮೇಣ ಪೋರ್ಚುಗಲ್ ಹಾಗೂ ಇತರ ಐರೋಪ್ಯ ರಾಷ್ಟ್ರಗಳಿಂದ ಕ್ರೈಸ್ತ ಕಥೋಲಿಕರು ಮಂಗಳೂರಿಗೆ ಬಂದು ನೆಲೆ ನಿಲ್ಲತೊಡಗಿದರು. ಇದರ ಫಲವಾಗಿ ಮಂಗಳೂರು ನಗರದಲ್ಲಿ ಕಥೋಲಿಕರ ಬಾಹುಳ್ಯ ಬೆಳೆಯಿತು. ಇದರ ಪರಿಣಾಮವಾಗಿ ಮಂಗಳೂರು ನಗರದ ಬೆಂಗಾರೆಯಲ್ಲಿ ಮತ್ತು ಇಂದಿನ ಬಂದರ್ ಪ್ರದೇಶದಲ್ಲಿ ಪೋರ್ಚುಗೀಸ್ ಸರ್ಕಾರವು ಸಾನ್ ಸಬೆಸ್ತ್ಯಾವೊ (ಸಂತ ಸೆಬೆಸ್ಟಿಯನ್) ವ್ಯಾಪಾರಿ ಠಾಣೆ ಸಂಸ್ಥಾಪಿಸಿತು. ಆ ಕಾಲದ ಐರೋಪ್ಯ ಭಾಷೆಗಳಲ್ಲಿ ವ್ಯಾಪಾರಿ ಠಾಣೆಯನ್ನು ಫಾಕ್ತೋರಿ/ ಫ್ಯಾಕ್ಟರಿ ಎನ್ನುತಿದ್ದರು.
ಜನವರಿ 5, 1568 ರಂದು ಪೋರ್ಚುಗೀಸರು ದಿಯೆಗೊ ದೆ ಸಿಲ್ವೇರಾನಾ ನಾಯಕತ್ವದಲ್ಲಿ ಸಾನ್ ಸಬೆಸ್ತ್ಯಾವೊ (ಸಂತ ಸೆಬೆಸ್ಟಿಯನ್) ವ್ಯಾಪಾರಿ ಠಾಣೆಯ ಒಳಗೆ ಪ್ರಥಮ ದೇವಾಲಯ ಸಂಸ್ಥಾಪಿಸಲಾಯ್ತು. ಆ ಸಂಸ್ಥಾಪನೆಗೆ ಮತ್ತು ಅಲ್ಲಿಂದ ಹೊರಟ ವಿಶ್ವಾಸದ ಹಾಗೂ ದೇವರ ಕೃಪಾಶೀರ್ವಾದದ ಮಹಾನ್ ಕಥನಕ್ಕೆ ಈಗ 450 ವರ್ಷಗಳ ಸಂಭ್ರಮ.
1623 ರಲ್ಲಿ ಇಟಲಿಯಿಂದ ಕೆನರಾಕ್ಕೆ (ಕನ್ನಡ ಕರಾವಳಿಗೆ) ಬಂದ ಪ್ರವಾಸಿಗ ಪಿಯೆತ್ರೊ ದೆಲ್ಲಾ ವಲ್ಲೆ ಕರಾವಳಿ ಕರ್ನಾಟಕದಲ್ಲಿ ಉಳ್ಳಾಲ ಪಾಣೀರ್ನ (ನೊಸ್ಸಾ ಸೆನ್ಹೊರಾ ದೆ ಮೆರ್ಸೆ ದೆ ವೆಲಾಲಾ), ಫರಂಗಿಪೇಟ್ ಮೊಂತೆ ಮಾರಿಯಾಣೊ (ಸಾವೊ ಫ್ರಾನ್ಸಿಸ್ಕೊ ದೆ ಆಸಿಸ್ಸಿ ದೆ ಮೊಂತೆ ಮಾರಿಯಾಣೊ) ಹಾಗೂ ಮಂಗಳೂರಿನ ಬೋಳಾರದ ಜಪಮಾಲೆ ಮಾತೆಯ ದೇವಾಲಯ (ನೊಸ್ಸಾ ಸೆನ್ಹೊರಾ ದೊ ರೊಸಾರಿಯೊ ದೆ ಮಂಗಲೋರೆ) ಗಳ ಉಲ್ಲೇಖ ಮಾಡುತ್ತಾನೆ ಮಾತ್ರವಲ್ಲ ಈ ಮೂರರ ಪೈಕಿ ಬೋಳಾರದ ದೇವಾಲಯವೇ ಮನಮೋಹಕವಾಗಿತ್ತು ಎಂದು ಹೇಳುತ್ತಾನೆ.
ಪದ್ರುವಾದೆ ವ್ಯವಸ್ಥೆಯು (ಪೋರ್ಚುಗೀಸ್ ರಾಜನ ಮುಖಾಂತರ ನಿಯಂತ್ರಿತವಾಗುತ್ತಿದ್ದ ಕಥೋಲಿಕ ಧರ್ಮ ಸಂವರ್ಧನೆ ವ್ಯವಸ್ಥೆ) ಗೋವಾದಿಂದ ಕೆನರಾಕ್ಕೆ ತನ್ನ ವಿಕಾರ್ ಅಪೊಸ್ಟಲಿಕ್ನಾಗಿ (ಸಂದೇಶ ವಿಚಾರಕ) 1681 ರಲ್ಲಿ ಸಂತ ಜೋಸೆಫ್ ವಾಝಾರನ್ನು ವಿಶ್ವಾಸ ವಿಸ್ತರಣೆಗೆ ಕಳುಹಿಸಿಕೊಟ್ಟಾಗ ಆತ ರೊಜಾರಿಯೊದಲ್ಲಿ ನೆಲೆ ನಿಂತರು. ಅವರು ತಮ್ಮ ಇಲ್ಲಿನ ಅನುಭವದಿಂದ ‘ರೊಜಾರಿಯೊ ದೇವಾಲಯವು ಕರಾವಳಿ ಕರ್ನಾಟಕದ ವಿಶ್ವಾಸದ ತೊಟ್ಟಿಲು’ ಎಂದು ಹೇಳುತ್ತಾರೆ. ರೊಜಾರಿಯೊ ದೇವಾಲಯದಿಂದ ಹಲವಾರು ಸಣ್ಣ ಪ್ರಾರ್ಥನಾಲಯಗಳು ಹುಟ್ಟಿ ಬೆಳೆದವೆಂದು ಅವರು ತಿಳಿಸುತ್ತಾರೆ.
ಅರಬ್ಬರಿಗೂ ಪೋರ್ಚುಗೀಸರಿಗೂ ಆಗಾಗ ವ್ಯಾಪಾರಿ ಕಾರಣಕ್ಕಾಗಿ ತಿಕ್ಕಾಟಗಳು ನಡೆಯುತ್ತಿದ್ದವು ಪೋರ್ಚುಗೀಸರ ಕಳ್ಳವ್ಯಾಪಾರ ಹಾಗೂ ಅಕ್ರಮಗಳಿಂದ ಕ್ರುದ್ದಿತರಾಗಿದ್ದ ಅರಬ್ಬರು ಅಂತಿಮವಾಗಿ ಮಂಗಳೂರಿನ ಪೋರ್ಚುಗೀಸ್ ಕೋಟೆಯನ್ನು ಸುಟ್ಟುಬಿಟ್ಟರು. ಇದರ ಪರಿಣಾಮವಾಗಿ ಪೋರ್ಚುಗೀಸರು ಸುಭದ್ರತೆಗಾಗಿ ಬೆಂಗಾರೆಯನ್ನು ಬಿಟ್ಟು ಇಂದಿನ ಮಂಗಳೂರು ನಗರದೊಳಗೆ ನೆಲೆ ಬಂದರು ಹಾಗೂ ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿ ಇರುವ ಪ್ರದೇಶದ ಸುತ್ತಮುತ್ತ ತಮ್ಮ ಕೋಟೆ ಕಟ್ಟಿಕೊಂಡರು. ಕೋಟೆಯ ದಕ್ಷಿಣ ಭಾಗದಲ್ಲಿ ರೊಜಾರಿಯೊ ದೇವಾಲಯ ಕಟ್ಟಲ್ಪಟ್ಟಿತು.
1700 ರಿಂದ 1784 ರ ತನಕ ಈ ದೇವಾಲಯ ಮಗದೊಮ್ಮೆ ಕಥೋಲಿಕ ವೈಭವದ ಕೇಂದ್ರವಾಗಿ ಮೆರೆದಿರುವುದನ್ನು ನಾವು ಗಮನಿಸುತ್ತೇವೆ. 1784 ರಲ್ಲಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನನು ಬ್ರಿಟೀಷರ ಮೇಲಿನ ಹಗೆಯನ್ನು ತೀರಿಸುವ ತನ್ನ ಕಾರ್ಯಾಚರಣೆಯ ಒಂದು ಭಾಗವಾಗಿ ಕೆನರಾದ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಎಳೆದೊಯ್ದಾಗ ಇಲ್ಲಿನ ಕ್ರೈಸ್ತ ದೇವಾಲಯಗಳು ವಿನಾಶದ ದಿನಗಳನ್ನು ಕಂಡವು ಆ ಹೊಡೆತ ರೊಜಾರಿಯೊ ದೇವಾಲಯದ ಮೇಲೂ ಬಿತ್ತು ಮಗದೊಮ್ಮೆ ಈ ದೇವಾಲಯ ಪುಡಿಮಾಡಲ್ಪಟ್ಟಿತು ಮಾತ್ರವಲ್ಲ ಇಲ್ಲಿನ ವಿಚಾರಣೆ ನಿರ್ಗತಿಕವಾಯ್ತು.
1799 ರಲ್ಲಿ ಟಿಪ್ಪುವಿನ ನಿಧನಾನಂತರ ಮೈಸೂರಿನ ಬಂಧನದಿಂದ ಸ್ವತಂತ್ರರಾಗಿ ಬಂದ ಕಥೋಲಿಕ ವಿಶ್ವಾಸಿಗಳು ಇಲ್ಲಿ ತಮ್ಮ ನೆಲೆಯನ್ನು ಮರುಸ್ಥಾಪನೆ ಮಾಡಿದರು. ಆರಂಭದಲ್ಲಿ ಧಾರ್ಮಿಕ ಕಾರ್ಯಗಳು ತತ್ಕಾಲಕ್ಕೆ ನಿರ್ಮಿಸಿದ್ದ ಗುಡಾರದಲ್ಲಿ ನಡೆಯುತ್ತಿದ್ದವಾದರೂ 1813 ರಲ್ಲಿ ಸರ್ಕಾರದಿಂದ ಕೆಲವು ಅನುದಾನಗಳನ್ನು ಸಂಪಾದಿಸಿ ಇಲ್ಲಿನ ಉತ್ತೇಜಿತ ವಿಶ್ವಾಸಿಗಳ ನಾಯಕರು ದೇವಾಲಯದ ಮರುಸ್ಥಾಪನೆಗೆ ಶ್ರಮಿಸತೊಡಗಿದರು. 1813 ರಿಂದ ಇಲ್ಲಿ ವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. 1845 ರಲ್ಲಿ ಕೆನರಾ ಸೀಮೆಯು ಪ್ರಾಂತ್ಯವು ವೆರಾಪೊಲ್ಲಿ (ಕೇರಳ) ಧರ್ಮಪ್ರಾಂತ್ಯದ ಆಧೀನದಲ್ಲಿ ವಿಕಾರಿಯೆಟ್ (ಉಪ ಪ್ರಾಂತ್ಯ) ಆಗಿ ಸಂಸ್ಥಾಪಿಸಲ್ಪಟ್ಟಾಗ ಇಲ್ಲಿಗೆ ಒಂದು ಕೆಥೆಡ್ರಲ್ (ಮಹಾದೇವಾಲಯ) ನಿರ್ಮಾಣ ಅನಿವಾರ್ಯವಾಯ್ತು. ಆ ಸಂದರ್ಭದಲ್ಲಿ ರೊಜಾರಿಯೊ ಚರ್ಚ್ ಕೆಥೆಡ್ರಲ್ ಆಗಿ ಸಂಸ್ಥಾಪಿಸಲ್ಪಟ್ಟಿತು.
1878 ರಲ್ಲಿ ಇಟಲಿಯ ವೆನಿಸ್ಸಿನಿಂದ ಯೇಸುಸಭೆಯ (ಜೆಸ್ವಿಟ್) ಧಾರ್ಮಿಕರು ಕನ್ನಡ ಕರಾವಳಿಯಲ್ಲಿ ಸೇವಾಕಾರ್ಯಕ್ಕಾಗಿ ಬಂದರು. ಅವರು ಬೋಳಾರದಲ್ಲಿ ಲಂಗರು ಹಾಕಿ ಮಂಗಳೂರು ನಗರ ಪ್ರವೇಶ ಮಾಡಿದರು. ಆ ಸೇವಕರ ಪೈಕಿ ಅರ್ಬನ್ ಸ್ಟೇಯ್ನ್ ಅನ್ನುವ ವೀರವಿರಕ್ತ ಕೆಥೆಡ್ರಲ್ಲಿನ ಪ್ರಧಾನ ಯಾಜಕರಾದರು. ಅವರ ನಾಯಕತ್ವದಲ್ಲಿ ಈ ವಿಚಾರಣೆ ಕ್ರಿಯಾಶೀಲವಾಗಿ ಬೆಳೆಯಿತು. ಅವರ ಕಾಲದಲ್ಲಿಯೇ ಇಲ್ಲಿ ಅರ್ಸುಲಾಯ್ನ್ ಧರ್ಮಭಗಿನಿಯರ ಸೇವಾಸಂಸ್ಥೆ ಹುಟ್ಟಿ ಬೆಳೆಯಿತು.
1910ರಲ್ಲಿ ಕೆಥೆಡ್ರಲಿಗೆ ಹೊಸ ಮಜಭೂತಾದ ನಿರ್ಮಾಣ ರೂಪಿಸುವ ಅನಿವಾರ್ಯತೆ ಕಂಡು ಬಂದಿತು. ಅಂದಿನ ಪ್ರಧಾನ ವಿಚಾರಕ ಸ್ವಾಮಿ ಹೆನ್ರಿಕ್ ಬುಜ್ಜೋನಿ, ಸಹೋದರ ದೀವೊ, ಸ್ವಾಮಿ ಎವ್ಜಿನ್ ರೊಜೆಟ್ಟಿ ಮುಂತಾದವರ ಮುತುವರ್ಜಿಯಿಂದ ‘ಬಯ್ಜಂತಿಯುಮ್ ಹಾಗೂ ರೋಮನ್ ಶೈಲಿಗಳ ಸಮ್ಮಿಶ್ರಣದ ‘ರೊಮನೆಸ್ಕ್’ ಶೈಲಿಯ ವೈಭವದ ಕೆಥೆಡ್ರಲನ್ನು ಕಟ್ಟಲು ಆರಂಭಿಸಲಾಯ್ತು. ಅಂದು ಕಟ್ಟಿದ ಆ ಮಹಾನ್ ನಿರ್ಮಾಣ ನಾಡಿನ ವಾಸ್ತು ಸೊಬಗನ್ನು ಹಾಗೂ ಆಧ್ಯಾತ್ಮ ಸಂಪದವನ್ನು ದಶದಿಕ್ಕುಗಳಿಗೂ ಪಸರಿಸುವಂತೆ ಇಂದಿಗೂ ತಲೆಯೆತ್ತಿ ನಿಂತಿದೆ.
1924 ಎಪ್ರಿಲ್ 3 ರಂದು ಅಂದಿನ ಧರ್ಮಾಧ್ಯಕ್ಷರಾದ ಪಾವ್ಲ್ ಪೆರಿನಿಯವರು ಈ ಹೊಸ ಕಟ್ಟಡವನ್ನು ಆಶೀರ್ವದಿಸಿ ಲೋಕಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಈ ಕಟ್ಟಡ ಬರೆ ಕಟ್ಟಡವಾಗಿರದೆ ನಂಬಿ ಬಂದವರಿಗೆ ಇಂಬುಕೊಡುವ ಮಮತೆಯ ತಾಯಿಯ ಮಹಾಆಲಯವಾಗಿ ಮೆರೆಯುತ್ತಿದೆ. ಈ ಕೆಥೆಡ್ರಲಿನ ಘಂಟಾಗೋಪುರದ ಮೇಲೆ ‘ರುಜಾಯಿಯ ಗಂಟೆಗಳೆಂದೆ’ ಹೆಸರಾಗಿರುವ ನಾಲ್ಕು ಇಟಾಲಿಯನ್ ಗಂಟೆಗಳನ್ನು ಇಡಲಾಗಿದ್ದು ಇದರಿಂದ ಹೊರಹೊಮ್ಮುವ ದಿವ್ಯ ನಿನಾದ ನಾಡಿನ ತುಂಬಾ ಶಾಂತಿ ಪ್ರೀತಿಯ ಶುಭಸಂದೇಶ ಹಂಚುತ್ತದೆ.
ರೊಸಾರಿಯೋ ಮಹಾದೇವಾಲಯ ಶಿಕ್ಷಣದ ವಿಸ್ತರಣೆಗೂ ತನ್ನ ಮಹತ್ವದ ಸೇವೆ ಸಲ್ಲಿಸಿದೆ. ಇಂದಿಗೆ ಸರಿಸುಮಾರು 160 ವರ್ಷಗಳ ಹಿಂದೆ 1858 ರಲ್ಲಿ ಬಿಷಪ್ ಮಾರಿ ಆಂತೋನಿ ಅವರು ಶಿಕ್ಷಣ ಸರ್ವರಿಗೂ ತಲುಪಿ ಆ ಮೂಲಕ ಸಮಾಜದ ಪರಿವರ್ತನೆಯಾಘಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ರೊಜಾರಿಯೊ ಹೈಸ್ಕೂಲಿನಿಂದ ಕಲಿತು ಸಾವಿರಾರು ವಿದ್ಯಾರ್ಥಿಗಳು ನಾಡಿನ ಮೂಲೆಮೂಲೆಯಲ್ಲಿ ಮಿಂಚಿದ್ದಾರೆ. ಇಂದು ಅದು ರೊಜಾರಿಯೋ ಪದವಿಪೂರ್ವ ಕಾಲೇಜಾಗಿ, ಅದರಿಂದ ಮುಂದೆ ರೊಜಾರಿಯೊ ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೆಜ್ಮೆಂಟ್ ಆಗಿ ಬೆಳವಣಿಗೆಯಾಗಿದೆ. 1902 ರಲ್ಲಿಯೇ ಅಂದರೆ ಇಂದಿಗೆ 116 ವರ್ಷಗಳ ಮೊದಲು ಬಡ ವಿದ್ಯಾರ್ಥಿಗಳಿಗಾಗಿ ಸಂತ ಅರ್ಸುಲಾ ಕನ್ನಡ ಶಾಲೆ ಆರಂಭವಾಯ್ತು. 1982 ರಲ್ಲಿ ಆಧುನಿಕ ಪರಿವರ್ತನೆಗೆ ತಕ್ಕಂತೆ ಬೆಳೆಯಲು ರೊಜಾರಿಯೊ ಇಂಗ್ಲೀಷ್ ಮೀಡಿಯಮ್ ಶಾಲೆ ಆರಂಭಿಸಲಾಯ್ತು. ಮಹಾದೇವಾಲಯದ ವತಿಯಿಂದ ನೇರವಾಗಿ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲದೆ ಅದೇ ಪರಿಸರದಲ್ಲಿ ಬೆಳೆದು ಬಂದಿರುವ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಗಳು ಇಂದು ಜಗದ್ವಿಖ್ಯಾತವಾಗಿವೆ. 1890 ರಲ್ಲಿಯೇ ಮದರ್ ವೆರೋನಿಕಾರವರು ಮೆಡ್ರಾಸ್ ಪ್ರೆಸಿಡೆನ್ಸಿಯ ಅಡಿಯಲ್ಲಿ ಸೈಂಟ್ ಆನ್ಸ್ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಯಿಂದ ಸಾವಿರಾರು ಶಿಕ್ಷಕರು ರೂಪುಗೊಂಡಿದ್ದಾರೆ. ಇದೇ ಕ್ರಮೇಣ ಶಿಕ್ಷಣ ಮಹಾವಿದ್ಯಾಲಯವಾಗಿ, ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿತು. ಅದೇ ಪರಿಸರದಲ್ಲಿ ಸೈಂಟ್ ಆನ್ಸ್ ಹೈಸ್ಕೂಲ್, ಪದವಿಪೂರ್ವ ಮಹಾವಿದ್ಯಾಲಯಗಳು ಬೆಳೆದು ನಿಂತು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇದೇ ಪರಿಸರದಲ್ಲಿ ಶ್ರೀಮತಿ ಫ್ರಾನ್ಸೆಸ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ಇನ್ಫೆಂಟ್ ಜೀಸಸ್ ಜೊಯ್ಲ್ಯಾಂಡ್ ಶಾಲೆ ಬೆಳೆದಿದೆ.
ರೊಜಾರಿಯೊ ಮಹಾದೇವಾಲಯ ಮಂಗಳೂರು ಧರ್ಮಪ್ರಾಂತ್ಯ ಮಾತ್ರವಲ್ಲ ಕರಾವಳಿ ಕರ್ನಾಟಕದ ಧಾರ್ಮಿಕ ಬದುಕಿನಲ್ಲಿ ಅಪಾರವಾದ ಪ್ರಭಾವ ಬೀರಿದೆ. ಇಂದು ಅದು ಒಂದು ಧಾರ್ಮಿಕ ಕೇಂದ್ರವಾಗಿ ಮಾತ್ರ ಅದು ಉಳಿದಿಲ್ಲ ಹೊರತಾಗಿ ಲಕ್ಷಾಂತರ ಜನರ ದುಃಖ ದುಮ್ಮಾನ ಪರಿಹರಿಸುವ ಸಾಂತ್ವಾನ ನೆಲೆಯಾಗಿದೆ. ಅನಿವಾರ್ಯತೆಗಳಲ್ಲಿ ಇಂಬು ನೀಡಿ ಕಾಯುವ ತಾಯಿಯ ಶಕ್ತಿ ಸೆಲೆಯಾಗಿದೆ. ಈಗಾಗಲೇ 450 ವಸಂತಗಳನ್ನು ದಾಟಿ ಮುಂದುವರಿಯುತ್ತಿರುವ ಈ ಮಹಾದೇವಾಲಯ ಮುಂದಿನ ಸಾವಿರ ಕಾಲ ಉಳಿಯಲಿ, ಬೆಳೆಯಲಿ ಎಂದು ಆಶಿಸುವ.
ಪದ್ರುವಾದೊ ಸ್ಮರಣೆಯ ಶಿಲಾಮುದ್ರೆಗಳು- ಪದ್ರುವಾದೆ ಎನ್ನುವುದು ಪೋರ್ಚುಗೀಸ್ ಅರಸರ ಮುಖಾಂತರ ನಡೆಯುತ್ತಿದ್ದ ಕಥೋಲಿಕ ವಿಸ್ತರಣಾ ವ್ಯವಸ್ಥೆ. ಕೆಲವು ಸೀಮೆಗಳಲ್ಲಿ ರೋಮಿನಿಂದ ನೇರವಾಗಿ ಶುಭಸಂದೇಶದ ಪ್ರಚಾರಕ್ಕಾಗಿ ಶ್ರಮಿಸುಲಾಗುತ್ತಿತ್ತು ಇದಕ್ಕೆ ‘ಪ್ರೊಪಗಾಂದ ಫೀದೆ’ ಎನ್ನಲಾಗುತ್ತಿತ್ತು. ರೊಜಾರಿಯೊ ಚರ್ಚ್ ಪದ್ರುವಾದೊ ನಿಯಂತ್ರಣ ವ್ಯವಸ್ಥೆಯ ಮುಖಾಂತರ 1568 ರಲ್ಲಿ ಸ್ಥಾಪಿಸಲ್ಪಟ್ಟು ಪೋರ್ಚುಗೀಸ್ ಅರಸರ ಸನುದಾನ ಪಡೆಯುತ್ತಿದ್ದ ಸಾಕ್ಷಿಯಾಗಿರುವ ಈ ಬೃಹತ್ ಶಿಲಾಮುದ್ರೆಗಳನ್ನು ದೇವಾಲಯದ ಅಂಗಣದಲ್ಲಿ ಕಾಣಬಹುದಾಗಿದೆ.
ಕಥೆದ್ರಾ ಆಂದರೆ ಆಸನ ಎಂದು ಅರ್ಥ. ಕಥೆದ್ರಲ್ ಎನ್ನುವುದು ಆಸನವಿರುವ ಸ್ಥಳ ಎಂದಾಗುತ್ತದೆ. ಧರ್ಮಪ್ರಾಂತ್ಯದ ಮುಖ್ಯಸ್ಥರಾದ ಬಿಷಪ್ಪರು (ಧರ್ಮಾಧ್ಯಕ್ಷರು) ಕೂರುವ ಅಧಿಕಾರ ಪೀಠ ಈ ಮಹಾ ಆಲಯದಲ್ಲಿರುತ್ತದೆ. ಧರ್ಮಪ್ರಾಂತ್ಯಕ್ಕೆ ಸಂಬಂಧಿಸಿದ ಎಲ್ಲಾ ಮಹತ್ವದ ಧಾರ್ಮಿಕ ವಿಧಿಗಳನ್ನು ಅವರು ಇಲ್ಲಿಯೆ ನೆರವೇರಿಸುತ್ತಾರೆ. ಅಭ್ಯಂಜನ ತೈಲಗಳ ಉಸ್ತುವಾರಿಯು ಮಹಾ ದೇವಾಲಯದ ವಿಚಾರಕರಲ್ಲಿರುತ್ತದೆ. ಧಮಾಧ್ಯಕ್ಷರ ಸಂಸ್ಕರಣಾ ವಿಧಿಯು ಇಲ್ಲಿಯೇ ನೆರವೇರುತ್ತದೆ ಹಾಗೂ ಇಲ್ಲಿಯೇ ಅವರ ಮಹಾನಿಕ್ಷೇಪವೂ ನಡೆಯುತ್ತದೆ. ಆದುದರಿಂದ ಧರ್ಮಾಧ್ಯಕ್ಷರ ಬದುಕಿನಲ್ಲಿ ಮಹಾ ದೇವಾಲಯವು ಮಹತ್ವದ ಸ್ಥಳವಾಗಿದೆ.
ಹಿಂದಿನ ಧಮಾಧ್ಯಕ್ಷರ ನಿಕ್ಷೇಪ ಶಿಲೆ
ಈ ಮಹಾದೇವಾಲಯದಲ್ಲಿ ಮಂಗಳೂರಿನ ಧರ್ಮಾಧ್ಯಕ್ಷರಾದ ಮಾರಿ ಎಫ್ರೆಮ್, ನಿಕೋಲಸ್ ಮರಿಯಾ ಪಗಾನಿ, ಅಬುಂದಿಯಾಸ್ ಕವಾದೀನಿ, ವಲೇರಿಯನ್ ಡಿಸೋಜಾ, ವಿಕ್ಟರ್ ಫೆರ್ನಾಂಡಿಸ್, ಬೇಜಿಲ್ ಪೆರಿಸ್ ಹಾಗೂ ಬೇಜಿಲ್ ಡಿಸೋಜಾ ಅವರನ್ನು ಸಮಾಧಿ ಮಾಡಲಾಗಿದೆ.
ಏಳು ಪೀಠಗಳ ಸೊಬಗು : ದ್ವಿತೀಯ ವ್ಯಾಟಿಕನ್ ಮಹಾಸಭೆಯ ಪೂರ್ವದಲ್ಲಿ ಯಾಜಕರು ಜನರಿಗೆ ಬೆನ್ನುಹಾಕಿ ಬಲಿಪೂಜೆಗಳನ್ನು ನೆರವೇರಿಸುತ್ತಿದ್ದರು. ಆಗ ಏಕಕಾಲಕ್ಕೆ ಹಲವಾರು ಬಲಿಪೂಜೆಗಳನ್ನು ಸಂಭ್ರಮಿಸುವ ಮತ್ತು ತಮ್ಮ ನಂಬಿಕೆಯ ಸಂತರ ಪೀಠದಲ್ಲಿ ಬಲಿಪೂಜೆ ಅರ್ಪಿಸುವ ಪದ್ಧತಿಯಿದ್ದು ಈ ಮಹಾದೇವಾಲಯದಲ್ಲಿ ಮಹಾಬಲಿಪೀಠದ ಹೊರತಾಗಿ ಆರು ಇತರ ಪೀಠಗಳನ್ನು ಕಾಣಬಹುದಾಗಿದೆ. ಆ ಪೈಕಿ ಎರಡನ್ನು ಈಗ ಮುಚ್ಚಲಾಗಿದೆಯಾದರೂ ಕ್ರಿಸ್ತರ ತಿರು ಹೃದಯದ, ಸಂತ ಅಂತೋನಿಯವರ, ಸಂತ ಯೋಸೇಫರ ಹಾಗೂ ಸಂತ ಫ್ರಾನ್ಸಿಸ್ ಸಾವೇರಿಯರ ಹೀಗೆ ನಾಲ್ಕು ಬಲಿಪೀಠಗಳು ಬಳಕೆಯಲ್ಲಿದ್ದು ಮಹಾದೇವಾಲಯದ ಸೊಬಗನ್ನು ಹೆಚ್ಚಿಸುತ್ತಿವೆ.
ಪೋರ್ಚುಗೀಸರು ತಾಂಡ್ರೆಬಯ್ಲ್ ಈ ಸ್ಥಳದಲ್ಲಿ ತಮ್ಮ ಮೊದಲ ದೇವಾಲಯ ಯಾಕೆ ನಿರ್ಮಿಸಿದರು?
ಅವರು ಕೇರಳದಿಂದ ಗೋವೆಯತ್ತ ಸಾಗುವ ಸಂದರ್ಭದಲ್ಲಿ ಇಲ್ಲಿ ವಿಸ್ಮಯಕಾರಿ ಶಿಲುಬೆಯ ಆರಾಧನೆ ನಡೆಯುತ್ತಿತ್ತೆಂದು ಪ್ರತೀತಿಯಿದೆ. ಈ ಶಿಲುಬೆ 1493 ನೇ ಇಸವಿಯಲ್ಲಿ ಈ ಸ್ಥಳದಲ್ಲಿ ಬೆಸ್ತರಿಗೆ ಅವರು ಮೀನು ಸೆಳೆಯುತ್ತಿರುವ ಬೃಹತ್ ಬಲೆಗೆ ಸಿಲುಕಿತಂತೆ. ಬೆಸ್ತರು ಆ ಶಿಲುಬೆಯನ್ನು ಬಂಗ ಅರಸನಿಗೆ ನೀಡಿದಾಗ ಆತನು ಅದಕ್ಕೊಂದು ಕಟ್ಟೆ ಕಟ್ಟಿ ಆರಾಧನೆ ಆರಂಭಿಸಿದನಂತೆ. ಅಲ್ಲಿ ನಡೆಯುತ್ತಿದ್ದ ಶಿಲುಬೆಯ ಆರಾಧನೆಯಿಂದ ಆಕರ್ಷಿತರಾಗಿ ಪೋರ್ಚುಗೀಸರು ತಮ್ಮ ಮೊದಲ ದೇವಾಲಯ ಅಲ್ಲಿಯೇ ಕಟ್ಟಿದರಂತೆ.
ಜಪಮಾಲಾಮಾತೆಯ ಕೃಪಾಶೀರ್ವಾದದಾಯಕ ವಿಸ್ಮಯ ಪ್ರತಿಮೆ
ಸುಮಾರು 1560 ರ ಹೊತ್ತಿಗೆ ಬೋಳಾರದ ಬೆಸ್ತರು ಸಮುದ್ರದಲ್ಲಿ ಮೀನು ಸೆಳೆಯುವಾಗ ತಮ್ಮ ಬಲೆಯಲ್ಲಿ ಬೃಹತ್ತಾದ ಮರದ ಪ್ರತಿಮೆಯೊಂದನ್ನು ಕಂಡರು ಆ ಮರದ ಪ್ರತಿಮೆ ಅಲ್ಲಿಯೆ ಪಕ್ಕದ ಮಹಾದೇವಾಲಯದಲ್ಲಿದ್ದ ಜಪಮಾಲಾಮಾತೆಯ ಚಿತ್ರದಂತಿದ್ದ ಕಾರಣ ಆ ಪ್ರತಿಮೆಯನ್ನು ಈ ಮಹಾದೇವಾಲಯಕ್ಕೆ ಒಪ್ಪಿಸಿದರು. ಕೊಂಕಣಿಯಲ್ಲಿರುವ ಒಂದು ಸಾಂಪ್ರದಾಯಿಕ ಗುಮಟೆ ಹಾಡಿನಂತೆ ‘ಗೋವೆ ಬಿಟ್ಟು ಬಂದ ಜಪಮಾಲಾಮಾತೆಯು ಮುಕ್ತಕೇಶಿಯಾಗಿ ಸಮುದ್ರ ಇಳಿದು ಮಂಗಳೂರಿಗೆ ಬಂದು ಬೋಳಾರಕ್ಕೆ ತಲುಪಿದಳೆಂದು..’ (ಗೋಂಯ್ ಸಾಂಡುನ್ ಆಯ್ಲಿ ಮಾಂಯ್ ದೆಂವ್ಲಿ ಸಮ್ದಿರಾಕ್, ಹೇಳಲಾಗಿದೆ. ಅದೇರೀತಿ ಅವಸರವಸರವಾಗಿ ಗೋವೆ ಬಿಟ್ಟು ಬಂದ ಮಾತೆಯ ಈ ಕಾಷ್ಟಪ್ರತಿಮೆ ಪ್ರಸ್ತುತ ಸಂತ ಎಲೋಶಿಯಸ್ ಕಾಲೇಜಿನ ವಸ್ತುಸಂಗ್ರಹಾಲಯದಲ್ಲಿದೆ.
ಜೀವನ ಪರಿವರ್ತನೆಯ ಸಂದೇಶ ನೀಡುವ ಪ್ರವಚನ ಪೀಠ
ಇಲ್ಲಿರುವ ಪೋರ್ಚುಗೀಸ್ ಶೈಲಿಯ ಕಾಷ್ಟ ಪ್ರವಚನ ಪೀಠ ಸುತ್ತಲಿನ ಯಾವ ದೇವಾಲಯಗಳಲ್ಲಿಯೂ ಕಂಡುಬರುವುದಿಲ್ಲ. ಇಂದಿಗೂ ಬಳಕೆಯ ಸ್ಥಿತಿಯಲ್ಲಿರುವ ಇದು ನಾಲ್ಕು ಕಂಭಗಳ ಮೇಲೆ ನೆಟ್ಟು ನಿಲ್ಲಿಸಿದಂತಿದೆ. ಕಳೆದ ನೂರಾರು ವರ್ಸಗಳಿಂದ ಜನರ ಬದುಕಿಗೆ ದಿವ್ಯದರ್ಶನ ಇದು ನೀಡಿರುವ ಈ ಪೀಠದ ಕಂಭಗಳ ಮೇಲೆ ನಾಲ್ವರು ಶುಭಸಂದೇಶಿಗರ (ಮತ್ತಾಯ, ಮಾರ್ಕ, ಲೂಕ ಹಾಗೂ ಯೊಹಾನ್ನಾ) ಚಿತ್ರಗಳಿದ್ದು ಅವರನ್ನು ಮಾತೆ ಮರಿಯಾಳು ಹರಸಿ ಹಾರೈಸುವಂತೆ ಚಿತ್ರಿಸಲಾಗಿದೆ. ಪೀಠದ ಒಂದು ಕೊನೆಗೆ ಧರ್ಮಸಭೆಯ ಸಂತ ಅಂಬ್ರೋಜರ ಹಾಗೂ ಸಂತ ಅಗುಸ್ತಿನಿಯರ ಚಿತ್ರಗಳಿವೆ.
ಗೋಪುರ, ಕಮಾನುಗಳು ಮತ್ತು ಸ್ಥಂಭಗಳ ಸೊಬಗಿನ ಸಂಗಮ,
ಜಪಮಾಲಾಮಾತೆಯ ಮಹಾದೇವಾಲಯದ ವೈಭವ ಹಾಗೂ ವಾಸ್ತು ಸಂಪತ್ತು ದೂರದೂರದಿಂದ ಭಕ್ತಾದಿಗಳನ್ನು ಹಾಗೂ ರೊಮಾನೆಸ್ಕ್ ವಾಸ್ತು ಮಾದರಿಗಳ ಅಧ್ಯಯನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಇದರ ಮಹಾಗೋಪುರ ನಿಜವಾಗಿಯೂ ವಾಸ್ತುವಿಸ್ಮಯವೂ, ವಿಶಿಷ್ಟವೂ ಆಗಿದೆ. ರೋಮಿನ ಸಂತ ಪೇತ್ರರ ಬಾಜಿಲಿಕಾದ ಗೋಪುರವನ್ನೇ ಇದು ಹೋಲುತ್ತಿದೆ. ಗ್ರೇಕೊ-ರೋಮನ್ ಶೈಲಿಯ ಪ್ರಧಾನ ಧ್ವಾರ, ಒಳಾಂಗಣದ 12 ಕೇಂದ್ರ ಕಮಾನುಗಳು, 48 ಪ್ರಧಾನ ಕಮಾನುಗಳು ಹಾಗೂ ಅವುಗಳ ಮೇಲೆ ನಿಲ್ಲಿಸಲಾಗಿರುವ 50 ಕಿರು ಕಮಾನುಗಳು ಕಾಣುವ ಕಣ್ಣುಗಳಿಗೆ ಹಬ್ಬವೇ ಸರಿ.
ಈ ಥಳದಲ್ಲಿ ಹುಟ್ಟಿ ಬೆಳೆದ 2 ಧರ್ಮಸೇವಾಪಂಗಡಗಳು
- 1887 ನೇ ಇಸವಿಯಲ್ಲಿ ಇಲ್ಲಿನ ಧರ್ಮಗುರುಗಳಾಗಿದ್ದ ಜೆಸ್ವಿಟ್ ಅರ್ಬನ್ ಸ್ಟೇಯ್ನ್ರವರ ಮಾರ್ಗದರ್ಶನದಡಿಯಲ್ಲಿ ಮದರ್ ನಿಂಫಾ ಫೆರ್ನಾಂಡಿಸ್ ಅವರ ನಾಯಕತ್ವದಲ್ಲಿ 12 ಯುವತಿಯರು ಸ್ತ್ರೀಯರಿಗಾಗಿ ‘ಪಾಯಸ್ ಅಸೋಸಿಯೇಶನ್ ಆಫ್ ಸೇಂಯ್ಟ್ ಅರ್ಸುಲಾ’ ಆರಂಭವಾಯ್ತು.ಈ ಸಂಘಟನೆಯಿಂದ ಬೆಳೆದ ‘ಅರ್ಸುಲಾಯ್ನ್ ಧರ್ಮಸೇವಾಪಂಗಡ’ ವಿಶ್ವದಾದ್ಯಂತ ಜನಸೇವೆಯಲ್ಲಿ ವಿಶೇಷವಾಗಿ ನಿರ್ಗತಿಕರ ಸೇವೆಯಲ್ಲಿ ತೊಡಗಿದೆ.
- ಕಾರ್ಮಲಾಯ್ಟ್ ಪಂಗಡದ ಮಾರಿ ಎಫ್ರೇಮ್ ಮಂಗಳೂರಿನ ಧರ್ಮಾಧ್ಯಕ್ಷರಾಗಿದ್ದ ಕಾಲದಲ್ಲಿ ಅವರು ಫ್ರಾನ್ಸಿನ ಪೋ ನಗರದಲ್ಲಿ ಶ್ರಮಿಸುತ್ತಿದ್ದ ಕಾರ್ಮಲಾಯ್ಟ್ ಭಗಿನಿಯರನ್ನು ಮಂಗಳೂರಿಗೆ ಸೇವೆಗೆಂದು ಕರೆದರು ಪುನೀತೆ ಮದರ್ ವೆರೋನಿಕಾರವರ ನಾಯಕತ್ವದಲ್ಲಿ 9 ಭಗಿನಿಯರು ಈ ದೇವಾಲಯದ ನೆರಳಿನಲ್ಲಿರುವ ಸೈಂಟ್ ಆ್ಯನ್ಸ್ ಕೇಂದ್ರದಲ್ಲಿ ಸೇವೆಗೆ ನೆಲೆ ನಿಂತರು. ಇವರಿಂದಲೇ ಮುಂದೆ ಅಪೊಸ್ಟಲಿಕ್ ಕಾರ್ಮಲಾಯ್ಟ್ ಧರ್ಮಭಗಿನಿಯರ ಸಭೆ ಬೆಳೆಯಿತು. ಈ ಸಭೆ ನಾಡಿನಾದ್ಯಂತ ಮಹಿಳಾ ಉನ್ನತ ಶಿಕ್ಷಣದ ಬೆಳಕು ಚೆಲ್ಲುವ ಬೆಳಕಿನ ದೀವಿಗೆ ಆಯ್ತು.
ಈ ಮಹಾದೇವಾಲಯದ ನೆರಳಿನಲ್ಲಿ ನೆಲೆಯಾದ ಮಹಾನ್ ಚೇತನಗಳು
ಇದೊಂದು ಮಹಾನ್ ಶಕ್ತಿಸ್ಥಳ ಎನ್ನುವುದಕ್ಕೆ ಆಗಾಗ ದೇವರು ನೀಡಿದ ನಿದರ್ಶನಗಳೆಂಬಂತೆ ಹಲವಾರು ಪಾನವವ್ಯಕ್ತಿಗಳು ಈ ವಠಾರದಲ್ಲಿ ವಸತಿಯಾಗಿರುವುದನ್ನು ನಾವು ಕಾಣುತ್ತೇವೆ.
- ಮರಿಯಾ ಮಾತೆಯ ಖಾಸಾ ಸೇವಕ ಎಂದೇ ತನ್ನನ್ನೇ ಕರೆದುಕೊಂಡ ಕೆನರಾಧ ಮಣಿದರ್ಪಣ ಎಂದು ಹೆಸರಾದ ಸಂತ ಜೋಸೆಫ್ ವಾಝ್ 1678-1681 ಅವಧಿಯಲ್ಲಿ ಇಲ್ಲಿ ನೆಲೆಯಾಗಿದ್ದರು.
- ಕಥೋಲಿಕ ಧರ್ಮಸಭೆಯು ಪಾವನ ಸಂತ ಪದವಿಗೇರಿಸಿರುವ ಶಿಲುಬೆಗೇರಿಸಲ್ಪಟ್ಟ ಸ್ವಾಮಿ ಯೇಸುವಿನ ಅನುಭಾವಿ ಮರಿಯಾ ಬೊವಾರ್ದಿ 1870-1872 ರ ಅವಧಿಗೆ ಇಲ್ಲಿದ್ದರು.
- ಅಪೊಸ್ಟಲಿಕ್ ಕಾರ್ಮಲಾಯ್ಟ್ ಧರ್ಮಭಗಿನಿಯರ ಸಭೆಯ ಸ್ಥಾಪಕಿ ಪುನೀತೆ ಮದರ್ ವೆರೋನಿಕಾ 1860-1862 ಕಾಲಕ್ಕ ಇಲ್ಲಿದ್ದರು.
- ‘ಪಾಯಸ್ ಅಸೋಸಿಯೇಶನ್ ಆಫ್ ಸೇಂಯ್ಟ್ ಅರ್ಸುಲಾ’ ಆರಂಭಿಸಿ ‘ಅರ್ಸುಲಾಯ್ನ್ ಧರ್ಮಸೇವಾಪಂಗಡ’ದ ಬೆಳವಣಿಗೆಗೆ ಕಾರಣರಾದ ಅರ್ಬನ್ ಸ್ಟೇಯ್ನ್ 1878-1888 ರ ತನಕ ಈ ಮಹಾದೇವಾಲಯದ ಪ್ರಧಾನ ಗುರುಗಳಾಗಿದ್ದರು.
- ಅರ್ಸುಲಾಯ್ನ್ ಧರ್ಮಸೇವಾಪಂಗಡದ ಮಹಾಣ್ ನಾಯಕಿ ಮದರ್ ನಿಂಫಾ ಫೆರ್ನಾಂದೆಝ್ ಈ ಪರಿಸರದಲ್ಲಿ ಹುಟ್ಟಿ ಬೆಳೆದವರು.
- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಅಲ್ಬುಕರ್ಕ್ ಪಯ್ ಕುಟುಂಬ, ಆ ಮನೆತನದ ಧೀಮಂತ ನಾಯಕರಾದ ಫೆಲಿಕ್ಸ್ ಪಯ್ ಅಲ್ಬುಕರ್ಕ್ ಹಾಗೂ ಅಕ್ಟೇವಿಯಾ ಅಲ್ಬುಕರ್ಕ್ ಪಯ್ ಇಲ್ಲಿಯವರು.