Search
Close this search box.

5 Days Communicative English course for CBE teachers begins at Padua College

❤️ Spread the love ❤️ |

MANGALURU, APR 17: The Catholic Board of Education (CBE), owned and managed by the Diocese of Mangalore, organised a 5-days course on Communicative English for the English Medium Teachers on April 17, 2023 at Padua College, Mangaluru.

ಕಥೊಲಿಕ ಶಿಕ್ಷಣ ಮಂಡಳಿ ಶಿಕ್ಷಕರಿಗೆ 5 ದಿನಗಳ ಕಮ್ಯುನಿಕೇಟಿವ್ ಇಂಗ್ಲಿಷ್ ಕೋರ್ಸ್ ಪ್ರಾರಂಭ

ಮoಗಳೂರು: ಮಂಗಳೂರು ಧರ್ಮಪ್ರಾಂತ್ಯದ ಆಧೀನದ ಕಥೊಲಿಕ್ ಶಿಕ್ಷಣ ಮಂಡಳಿ (ಸಿಬಿಇ)ಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಭೋಧಿಸುವ ಶಿಕ್ಷಕರಿಗಾಗಿ 5 ದಿನಗಳ ಕಮ್ಯುನಿಕೇಟಿವ್ ಇಂಗ್ಲಿಷ್ ಕೋರ್ಸ್ ಅನ್ನು ಏಪ್ರಿಲ್ 17, 2023 ರಂದು ಮಂಗಳೂರಿನ ಪಾದುವಾ ಕಾಲೇಜಿನಲ್ಲಿ ಪ್ರಾರಂಭಿಸಲಾಯಿತು.

ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾದರ್ ಆ್ಯಂಟನಿ ಸೆರಾ ಅವರು ಮಾತಾನಾಡುತ್ತಾ, “ಇಂಗ್ಲಿಷ್ ಮಾಧ್ಯಮ ಶಿಕ್ಷಕರಲ್ಲಿ ಸಂವಹನ ಕೌಶಲ್ಯವನ್ನು ಹೆಚ್ಚಿಸುವುದು, ಮತ್ತು ವಿದ್ಯಾರ್ಥಿಗಳೊಂದಿಗೆ ಮತ್ತು ಅವರ ಪೋಷಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುಕೂಲವಾಗುವಂತಹ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.” ಎಂದು ಹೇಳಿದರು.

“ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ, ಶಿಕ್ಷಕರು ಇಂಗ್ಲಿಷ್‌ನಲ್ಲಿ ಮುಕ್ತ ಸಂವಹನವು ಮಾಡುವುದರಿಂದ ಕಷ್ಟಕರವಾದ ತರಗತಿಯ ವಾತಾವರಣವನ್ನು ಧನಾತ್ಮಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.” ಎಂದು ಫಾದರ್ ಸೆರಾ ಹೇಳಿದರು.

ಬೆಂದೂರು ಚರ್ಚ್ನ ಧರ್ಮಗುರು ಮತ್ತು ಪಾದುವ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ವಂದನೀಯ ಫಾದರ್ ವಿನ್ಸೆಂಟ್ ಮೊಂತೇರೊ, ಪಾದುವ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾದರ್ ಅರುಣ್ ಲೋಬೊ ಮತ್ತು ಪಾದುವ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ಲಾಡಿಸ್ ಅಲೋಶಿಯಸ್ ಮತ್ತು ಸಂಪನ್ಮೂಲ ತಂಡದ ಮುಖ್ಯಸ್ಥ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಇಂಗ್ಲಿಷ್ ವಿಭಾಗದ ಡಾ. ಅನುಪ್ ಡೆನ್ಜಿಲ್ ವೇಗಸ್ ಉಪಸ್ಥಿತರಿದ್ದರು
ಮೊದಲ ಬ್ಯಾಚ್‌ಗೆ ಜಿಲ್ಲೆಯ 200ಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಿಕ್ಷಕರು ಉಪಸ್ಥಿತರಿದ್ದರು.

ಡಾ. ಅನುಪ್ ಡೆನ್ಜಿಲ್ ವೇಗಾಸ್ ಮಾತನಾಡಿ, “ತರಗತಿಯಲ್ಲಿ ಸಂವಹನವು ಮುಖ್ಯ ಕೀಲಿಯಾಗಿದೆ. 50% ಜ್ಞಾನ ಮತ್ತು 50% ಸಂವಹನ ಕೌಶಲ್ಯಗಳು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಬೋಧನೆಯನ್ನು ಪ್ರಸ್ತುತಪಡಿಸಲು ಸಾಕಷ್ಟು ಸಹಕಾರಿಯಾಗಿವೆ. ಒಬ್ಬ ಶಿಕ್ಷಕನು ಕೇಳುವ, ಓದುವ, ಮಾತನಾಡುವ ಮತ್ತು ಬರೆಯುವ ನಾಲ್ಕು ಸಂವಹನ ವಿಧಾನಗಳಲ್ಲಿ ಪ್ರವೀಣನಾಗಿರಬೇಕು ಮತ್ತು ಶಾಲೆಯ ಪರಿಸರದಲ್ಲಿ ಈ ಪ್ರಾವೀಣ್ಯತೆಯನ್ನು ಪರಿಣಾಮಕಾರಿಯಾಗಿ ಅನ್ವಯಿಸಲು ಉತ್ಸುಕನಾಗಿರಬೇಕು.

“ಇಂದು, ಹೆಚ್ಚಿನ ಪೋಷಕರು ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ನಾವು, ಶಿಕ್ಷಕರಾಗಿ, ಆ ವಿದ್ಯಾವಂತ ಪೋಷಕರೊಂದಿಗೆ ಮತ್ತು ಅವರ ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವಲ್ಲಿ ವಿಫಲರಾಗಿದ್ದೇವೆ” ಎಂದು ಡಾ. ಅನುಪ್ ಹೇಳಿದರು.

“ಕಥೊಲಿಕ್ ಶಿಕ್ಷಣ ಮಂಡಳಿಯು ನೋಂದಾಯಿತ ಶಿಕ್ಷಣ ಸಂಸ್ಥೆಯಾಗಿದ್ದು, ಸತತ 90 ವರ್ಷಗಳ ಫಲಪ್ರದ ಸೇವೆಯನ್ನು ಪೂರ್ಣಗೊಳಿಸುತ್ತದೆ. ಇದು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು 1932 ರಲ್ಲಿ ಪ್ರಾರಂಭವಾಯಿತು. ಇತ್ತೀಚೆಗೆ, ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳನ್ನು ವಿಭಜಿಸಿ ಪ್ರತ್ಯೇಕವಾಗಿ ನಿರ್ವಹಿಸಲಾಗಿದೆ” ಎಂದು ಫಾದರ್ ಆ್ಯಂಟನಿ ಸೆರಾ ತಿಳಿಸಿದರು.

ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ಜೋನ್ ಶೀತಲ್ ಮತ್ತು  ಸಂತ ಆಗ್ನೆಸ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಪ್ರಮೀಳಾ ಡಿಸೋಜಾ,ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಮ್ಯೂರಲ್ ಹಾಗೂ ಡೈನಾ  ಸಂಪನ್ಮೂಲ ತಂಡದಲ್ಲಿದ್ದರು.

Rev. Fr  Antony Serra, Secretary, CBE in his opening remarks said, “The purpose of the training is to enhance the communication skills among English Medium teachers, thereby facilitating them to communicate efficiently with students and their parents.”

Further Fr Seraa said, “In the modern education system, seamless and hassle free communication in English will help teachers  to engage themselves with various kinds of learners and maintain a difficult classroom environment positively.”

Rev. Fr Vincent Monteiro, Parish Priest, Bendur Church and Correspondent of  Padua Educational Institutions, Rev. Fr Arun Lobo, Principal, Padua College and Mrs GLADYS ALOYSIUS, Principal, Padua PU College and the head of the resource team, Dr Anup Denzil Veigas, Department of English, St Aloysius College (Autonomous), Mangaluru were the dignitaries.

More than 200 English medium teachers from DK were present for the first batch.  

 Dr Anup Denzil Veigas said, “Communication is the main key in the classroom. 50% of knowledge and 50% of communicative skills are complete enough to present impressive and effective teaching. A teacher should be proficient in four modes of communication that is listening, reading, speaking and writing, and should also be keen to apply this proficiency effectively in a school environment.”

 “Today, most of the parents are either graduates or postgraduates. We, as teachers, fail to communicate efficiently with these parents and their children.” Dr Anup added.

Catholic Board of Education is a registered society which completes 90 years of fruitful service to the Society. It was started in 1932 to impart quality education in the districts of Dakshina Kannada, Udupi and Kasargod. Recently, Educational institutions in Udupi district were bifurcated and separately managed by Udupi diocese” Fr Shera noted.

Mrs Joanne Sheethal, Lecturer in English,  St Agnes PU College, Mangaluru and  Mrs Pramila D’Souza, Lecturer in English, St Agnes College, Mangaluru and St Aloysius College lecturers Mural and Daina  were among the resource team. 

Picture of Director CCC Admin
Director CCC Admin

Post a comment