MANGALORE, 16 SEPTEMBER 2024 – The Catholic Board of Education (CBE), Diocese of Mangalore, held the Msgr Leslie F. Shenoy Scholarship Distribution Programme at Shanthi Kiran Pastoral Institute, Bajjodi. The event was graced by Chief Guest, Rev. Msgr Leslie F. Shenoy, who personally handed over scholarship cheques to 76 deserving Catholic students pursuing their first year of PU education within the Diocese of Mangalore.
Rev. Fr Antony Shera, Parish Priest of Mulki and former Secretary of CBE, was the Guest of Honour. He offered insights into the inception of the scholarship programme, remarking, “Msgr Leslie Shenoy has always demonstrated a generous spirit, sharing his resources for the betterment of the community. His benevolence extends to all people, and his noble work deserves our utmost appreciation. We remain forever grateful to him for this act of kindness.”
Rev. Dr Praveen Leo Lasrado, Secretary of the CBE and Dr Denis Fernandes, an Associate Professor in the Department of History at St. Aloysius College (Deemed to be University), Mangalore, and a member of the CBE Governing Board, were present.
In his address to the scholarship recipients and their parents, Rev. Msgr Shenoy emphasised the importance of giving back. “This act of kindness is rooted in the commandment of Jesus, ‘Love thy neighbour.’ The scholarships come from my savings during my military service. I expect nothing in return, except your prayers. I encourage you to excel in your studies and remember to share your blessings with others when the opportunity arises.”
Rev. Dr Praveen Leo Lasrado, Secretary of the CBE, welcomed the attendees, while Dr Denis Fernandes delivered the vote of thanks. Prof. Roshan Santhumayor, a member of the CBE Governing Board and Vice Principal of Padua College, Mangalore, compered the programme.
ABOUT THE SCHOLARSHIP
The Msgr Leslie F. Shenoy Scholarship was born out of Rev. Fr Antony Shera’s vision for a student support initiative under the Catholic Board of Education. This vision became a reality through the generous donation of 1 crore rupees by Msgr Shenoy. The funds were placed in a fixed deposit, with the interest used to provide scholarships to deserving Catholic students within the Diocese of Mangalore. Rev. Dr Rev. Dr Praveen Leo Lasrado, Secretary of the CBE initiated the distribution of the scholarships this year.
The programme continues to be a source of hope and support for students in need, furthering the legacy of Msgr Shenoy’s selfless philanthropy.
ಕಥೋಲಿಕ್ ಶಿಕ್ಷಣ ಮಂಡಳಿಯಿಂದ 76 ವಿದ್ಯಾರ್ಥಿಗಳಿಗೆ Msgr ಲೆಸ್ಲಿ ಶೆಣೈ ವಿದ್ಯಾರ್ಥಿವೇತನ ವಿತರಣೆ
ಮಂಗಳೂರು, 16 ಸೆಪ್ಟೆಂಬರ್ 2024 – ಮಂಗಳೂರು ಧರ್ಮಕ್ಷೇತ್ರದ ಕಥೋಲಿಕ್ ಶಿಕ್ಷಣ ಮಂಡಳಿ (CBE) ವತಿಯಿಂದ Msgr ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಬಜ್ಜೋಡಿಯ ಶಾಂತಿ ಕಿರಣ್ ಪಾಲನಾ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಂದನೀಯ. Msgr ಲೆಸ್ಲಿ ಎಫ್. ಶೆಣೈ ಅವರು ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪ್ರಥಮ ಪಿಯು ಶಿಕ್ಷಣವನ್ನು ಪಡೆಯುತ್ತಿರುವ 76 ಅರ್ಹ ಕಥೋಲಿಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿದ್ಯಾರ್ಥಿವೇತನದ ಚೆಕ್‌ಗಳನ್ನು ಹಸ್ತಾಂತರಿಸಿದರು.
ಗೌರವ ಅತಿಥಿಗಳಾದ ಮುಲ್ಕಿಯ ಧರ್ಮಗುರುಗಳಾದ ಮತ್ತು CBE ನ ಮಾಜಿ ಕಾರ್ಯದರ್ಶಿ ಫಾ. ಆಂಟೋನಿ ಶ್ಹೇರಾ ಅವರು ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಾರಂಭದ ಬಗ್ಗೆ ಒಳನೋಟಗಳನ್ನು ನೀಡುತ್ತಾ “Msgr ಲೆಸ್ಲಿ ಶೆಣೈ ಅವರು ಯಾವಾಗಲೂ ಉದಾರ ಮನಸುಳ್ಳವರು. ಸಮುದಾಯದ ಸುಧಾರಣೆಗಾಗಿ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾರೆ. ಎಲ್ಲಾ ವರ್ಗದ ಜನರಿಗೆ ಅವರು ಸ್ಪಂದಿಸುತ್ತಾರೆ ಮತ್ತು ಅವರ ಈ ಉದಾತ್ತ ಕೆಲಸವು ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ದಯಾಮಯ ಕಾರ್ಯಕ್ಕಾಗಿ ನಾವು ಅವರಿಗೆ ಚಿರಋಣಿಯಾಗಿರೋಣ,” ಎಂದು ಹೇಳಿದರು.
CBE ನ ಕಾರ್ಯದರ್ಶಿ ವಂದನೀಯ ಡಾ. ಪ್ರವೀಣ್ ಲಿಯೋ ಲಸ್ರಾದೊ, ಮತ್ತು ಸಂತ ಅಲೋಶಿಯಸ್ ಕಾಲೇಜು (ಪರಿಗಣಿತ ವಿಶ್ವವಿದ್ಯಾನಿಲಯ), ಮಂಗಳೂರು ನಲ್ಲಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ, ಹಾಗೂ CBE ಆಡಳಿತ ಮಂಡಳಿಯ ಸದಸ್ಯರಾದ ಡಾ. ಡೆನಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ವಂದನೀಯ Msgr ಲೆಸ್ಲಿ ಶೆಣೈ ಅವರು ಸ್ಕಾಲರ್‌ಶಿಪ್ ಪಡೆದ ವಿಧ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಉದ್ದೇಶಿಸುತ್ತಾ, “ಈ ದಯೆಯ ಕ್ರೀಯೆಯು ಯೇಸುವಿನ ‘ನಿನ್ನ ನೆರೆಯವರನ್ನು ಪ್ರೀತಿಸು’ ಎಂಬ ಆಜ್ಞೆಯಲ್ಲಿ ಬೇರೂರಿದೆ. ನನ್ನ ಮಿಲಿಟರಿ ಸೇವೆಯ ಉಳಿತಾಯದಿಂದಾಗಿ ಈ ವಿದ್ಯಾರ್ಥಿವೇತನಗಳನ್ನು ನೀಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯನ್ನು ಹೊರತುಪಡಿಸಿ ನಾನು ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ನಿಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ ಮತ್ತು ಅವಕಾಶ ಬಂದಾಗ ನಿಮ್ಮ ಆಶೀರ್ವಾದವನ್ನು ಇತರರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.” ಎಂದು ಹೇಳಿದರು.
ಡಾ. ಪ್ರವೀಣ್ ಲಿಯೋ ಲಸ್ರಾದೊ ಸ್ವಾಗತಿಸಿದರು, ಡಾ.ಡೆನಿಸ್ ಫೆರ್ನಾಂಡಿಸ್ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಮಂಗಳೂರಿನ ಪಾದುವ ಕಾಲೇಜಿನ ಉಪ ಪ್ರಾಂಶುಪಾಲರಾದ ರೋಶನ್ ಸಂತುಮಾಯರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿಧ್ಯಾರ್ಥಿ ವೇತನದ ಬಗ್ಗೆ
ವಂದನೀಯ Msgr ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನವು ಕಥೋಲಿಕ್ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಕಥೋಲಿಕ ವಿದ್ಯಾರ್ಥಿ ಬೆಂಬಲ ಕಾರ್ಯಕ್ರಮಕ್ಕಾಗಿ ಅಂದಿನ ಕಾರ್ಯದರ್ಶಿ ವಂದನೀಯ ಅಂಟೋನಿ ಶೇರಾ ಅವರ ದೂರದೃಷ್ಟಿಯಿಂದ ಹುಟ್ಟಿಕೊಂಡಿತು . ವಂದನೀಯೆ Msgr ಲೆಸ್ಲಿ ಶೆಣೈ ಅವರ 1 ಕೋಟಿ ರೂಪಾಯಿಗಳ ಉದಾರ ದೇಣಿಗೆಯ ಮೂಲಕ ಈ ಕನಸು ಸಾಕಾರಗೊಂಡಿದೆ. ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿ, ಅದರ ಬಡ್ಡಿಯೊಂದಿಗೆ ಮಂಗಳೂರು ಧರ್ಮಪ್ರಾಂತ್ಯದೊಳಗಿನ ಅರ್ಹ ಕಥೋಲಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಬಳಸಲಾಗುತ್ತದೆ. ಈಗಿನ CBE ಯ ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರಾದೊ ಅವರು ಈ ವರ್ಷದಿಂದ ವಿದ್ಯಾರ್ಥಿವೇತನದ ವಿತರಣೆಯನ್ನು ಪ್ರಾರಂಭಿಸಿದರು.