Search
Close this search box.

Christians in Mangalore submit memorandum to DC to withdraw Anti conversion bill

❤️ Spread the love ❤️ |

Report & pics by: Fr Anil Ivan Fernandes, CCC

MANAGLURU, NOV 19 : At the call of All Karnataka United Christian Forum for Human Rights (AKUCFHR), Christians in Mangalore, submitted a memorandum to the Deputy Commissioner against the Anti-Conversion Bill proposed by Karnataka Government, on November 19, 2021 here in the city.

Fr J B Saldanha, PRO & Spiritual Director Catholic Sabha; Mr Roy Castelino, PRO, Mangalore Catholic Diocese; Mr J R Lobo, Ex MLA; Mr Stany Lobo, President, Catholic Sabha; Fr Ashwin Cardoza, Director, ICYM; Fr J B Crasta, Secretary, Laity Commission; Mr Jaison Crasta, President, ICYM; Fr Anil Ivan Fernandes, Director, CCC; Mr John D’Silva, Secretary, Diocesan Pastoral Parishad Mangalore; Fr Onil D’Souza, Director, St Anthony Ashram; Fr Mani, Belthangady Diocese, Pastor Donald Menezes & Pastor Ivan Monteiro, New Life, Bishop Demetrius, Believers Church, Rev. Mathew Marthoma Church, Sr Mariette BS, Mr Alfred Manohar, CSI, Rev. Winfred Ammanna, CSI, Rev Prabhuraj, Area Chairman CSI KSD, Rev. Sandeep Theophil, Secretary MCC, Fr Jose, Syrian Orthodox and Secretary, Karnataka United Christian Forum For Human Rights, were present as delegates from all Christian denominations and institutions.

In the absence of the District Commissioner, they urged the Additional Deputy Commissioner Manikya, to appeal the C.M. not to table the Anti-conversion Bill and to withdraw the orders on the survey of Christian Missionaries and the establishments.

Fr J B Saldanha, PRO & Spiritual Director Catholic Sabha, Diocese of Mangalore said, “The entire Christian Community in Mangalore opposes the proposal of Anti-Conversion Bill in one voice and questions the need for such an exercise when sufficient laws and court directives are in place to monitor any aberration of the existing laws.”

Ex MLA J R Lobo emphasising the constitutional right said, “The Indian Constitution Article 25 guarantees freedom of conscience and free profession, practice and propagation of religion subject to public order, morality and health. Further, Article 26 gives, ‘Freedom to manage religious affairs’. And, therefore, introducing such laws would infringe the rights of the citizens, especially of the minority communities.”

Mr Stany Lobo, President, Catholic Sabha said, “The false allegation of conversions on Christian communities have disturbed the peace and unity among all Christians in Karnataka. The Government must never try to bring enmity between Christian denominations by generalising a few incidents and branding our actions as conversions.”

Bishop Demetrius, Believers Church and Rev. Winfred Ammanna, CSI said that Christians are known for peace, unity and social service. Thousands of schools, colleges and hospitals are run and managed by Christian Community across the State. When lakhs of students are graduating from these institutions year after year and thousands of patients irrespective of caste, creed and colour receive the best medical attention from our hospitals and care centers, not one of them has ever been influenced, compelled or coerced to change his or her religion

ಮಂಗಳೂರು ಕ್ರೈಸ್ತ ಸಮುದಾಯದಿಂದ ಮತಾಂತರ ವಿರೋಧಿ ಮಸೂದೆ ಹಾಗೂ ಸಮೀಕ್ಷೆಯನ್ನು ಹಿಂತೆಗೆಯಲು ಜಿಲ್ಲಾಧಿಕಾರಿಗೆ ಮನವಿ

ವರದಿ ಮತ್ತು ಚಿತ್ರಗಳು: ವಂ. ಅನಿಲ್ ಐವನ್ ಫೆರ್ನಾಂಡಿಸ್

ಮಂಗಳೂರು, ನವೆಂಬರ್ 19 : ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟದ ಕರೆಗೆ, ನವೆಂಬರ್ 19 ರಂದು, ಮಂಗಳೂರಿನ ಕ್ರೈಸ್ತರು, ಮಂಗಳೂರಿನ ಜಿಲ್ಲಾಧಿಕಾರಿಯವರಿಗೆ, ಕರ್ನಾಟಕ ಸರಕಾರವು ಪ್ರಸ್ತಾಪಿಸಿದ ಮತಾಂತರ ವಿರೋಧಿ ಮಸೂದೆಯನ್ನು ಹಿಂತೆಗೆಯಲು ಹಾಗೂ ಸಮೀಕ್ಷೆಯನ್ನು ಹಿಂತೆಗೆಯಲು ಜಿಲ್ಲಾಧಿಕಾರಿಯವರಿಗೆ ಜ್ಞಾಪಕ ಪತ್ರದ ಮುಕಾಂತರ ಮನವಿಯನ್ನು ಮಾಡಿದರು.

ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಕಥೊಲಿಕ್ ಸಭೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಜೆ.ಬಿ ಸಲ್ಡಾನ್ಹ, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀ ರೋಯ್ ಕ್ಯಾಸ್ತಲಿನೊ, ಕಥೊಲಿಕ್ ಸಭೆಯ ಅಧ್ಯಕ್ಷರು ಶ್ರೀ ಸ್ಟ್ಯಾನಿ ಲೋಬೊ, ಮಾಜಿ sಎಮ್.ಎಲ್.ಎ, ಶ್ರೀ ಜೆ.ಆರ್ ಲೋಬೊ, ಮಂಗಳೂರು ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್ ನಿರ್ದೇಶಕರಾದ ವಂ. ಅಶ್ವಿನ್ ಕಾರ್ಡೊಜಾ, ಶ್ರೀಸಾಮಾನ್ಯರ ಆಯೋಗದ ಕಾರ್ಯದರ್ಶಿ ವಂ. ಜೆ.ಬಿ ಕ್ರಾಸ್ತ, ಐ.ಸಿ.ವೈ,ಎಮ್, ಅಧ್ಯಕ್ಷರು, ಶ್ರೀ ಜೈಸನ್ ಕ್ರಾಸ್ತ, ಕೆನಾರಾ ಸಂಪರ್ಕ ಕೇಂದ್ರದ ನಿರ್ದೇಶಕರು ವಂ. ಅನಿಲ್ ಐವನ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಕಾರ್ಯದರ್ಶಿ ಶ್ರೀ ಜೋನ್ ಡಿಸಿಲ್ವಾ, , ವಂ. ಒನಿಲ್ ಡಿಸೋಜಾ, ಸೈಂಟ್ ಅ್ಯಂಟನಿ ಆಶ್ರಮದ ನಿರ್ದೇಶಕರು, ವಂ. ಮನಿ, ಬೆಳ್ತಂಗಡಿ ಧರ್ಮಪ್ರಾಂತ್ಯ, ಪಾಸ್ಟರ್ ಡೊನಾಲ್ಡ್ ಮಿನೆಜಸ್ ಮತ್ತು ಪಾಸ್ಟರ್ ಐವನ್ ಮೊಂತೆರೊ, ನ್ಯೂಲೈಫ್, ಬಿಷಪ್ ಡೆಮೆಟ್ರಿಯುಸ್, ಬಿಲಿವರ್ಸ್ ಚರ್ಚ್, ವಂ. ಮ್ಯಾಥ್ಯೂ, ಮಾರ್ಥೊಮ ಚರ್ಚ್, ಬೆಥನಿ ವಿದ್ಯಾಸಂಸ್ಥೆಗಳ ಪರವಾಗಿ ಸಿ| ಮಾರಿಯೆಟ್ ಬಿ. ಎಸ್., ಶ್ರೀ ಆಲ್ಫ್ರೆಡ್ ಮನೊಹರ್, ಸಿ.ಎಸ್.ಐ, ವಂ. ವಿನ್‍ಫ್ರೆಡ್ ಅಮ್ಮಣ್ಣ, ಸಿ.ಎಸ್.ಐ, ವಂ. ಪ್ರಭುರಾಜ್, ಪ್ರಾದೇಶಿಕ ಅಧ್ಯಕ್ಷರು, ಸಿ.ಎಸ್.ಐ ಕೆ.ಎಸ್.ಡಿ, ವಂ. ಸಂದೀಪ್ ಥಿಯೊಫಿಲ್, ಕಾರ್ಯದರ್ಶಿ, ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್, ವಂ. ಜೋಸ್, ಸಿರಿಯನ್ ಒರ್ಥೊಡೊಕ್ಸ್ ಮತ್ತು ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಕಾರ್ಯದರ್ಶಿ ಹಾಗೂ ಇತರರು, ಕ್ರೈಸ್ತ ಸಮುದಾಯ ಹಾಗೂ ಸಂಸ್ಥೆಗಳ ಪರವಾಗಿ ಉಪಸ್ಥಿತರಿದ್ದರು.

ಕರ್ನಾಟಕ ಸರ್ಕಾರ ಜಾರಿಗೆ ತರಲಿಚ್ಛಿಸುವ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚುಗಳು ಮತ್ತು ಸಂಘ-ಸಂಸ್ಥೆಗಳ ಗಣತಿಯನ್ನು ಹಿಂತೆಗೆಯುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮನಿವಿ ಮಾಡುವಂತೆ ಕ್ರೈಸ್ತ ಸಮುದಾಯದ ಮುಖಂಡರು, ಮಂಗಳೂರಿನ ಜಿಲ್ಲಾಧಿಕಾರಿಯೊಡನೆ ವಿನಂತಿ ಮಾಡುವಂತೆ ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಸಹಾಯಕ ಜಿಲ್ಲಾಧಿಕಾರಿಯಾದ ಶ್ರೀ ಮಾಣಿಕ್ಯರೊಂದಿಗೆ ಮನವಿಯನ್ನು ಹಸ್ತಾಂತರಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ವಂ. ಜೆ.ಬಿ ಸಲ್ಡಾನ್ಹರವರು ಉದ್ದೇಶಿಸಿ, “ರಾಜ್ಯದಲ್ಲಿ ಸರ್ಕಾರವು ‘ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಕರ್ನಾಟಕದ ಸಮಸ್ತ ಕ್ರೈಸ್ತ ಸಮುದಾಯವು ಒಮ್ಮನಿಸಿನಿಂದ ವಿರೋಧಿಸುತ್ತದೆ.” ಎಂದು ಹೇಳಿದರು.

ಬಿಲಿವರ್ಸ್ ಚರ್ಚಿನ ಬಿಷಪ್ ಡೆಮೆಟ್ರಿಯುಸ್ ಹಾಗೂ ಚರ್ಚ್ ಆಫ್ ಸೌತ್ ಇಂಡಿಯಾ (ಸಿ.ಎಸ್.ಐ) ಪರವಾಗಿ, ವಂ. ವಿನ್‍ಫ್ರೆಡ್ ಅಮ್ಮಣ್ಣರವರು, ಕ್ರೈಸ್ತ ಭಾಂದವರು ಧಾರ್ಮಿಕ ಹಾಗೂ ಸೇವಾ ಕಾರ್ಯಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ, ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಾ ಇದ್ದಾಗ ಬಲವಂತದ ಮತಾಂತರವು ನಡೆಯುತ್ತದೆ ಎನ್ನುವುದು ಸುಳ್ಳು ಆರೋಪ” ಎಂದು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸಭೆಯ ಅಧ್ಯಕ್ಷರು, ಶ್ರೀ ಸ್ಟ್ಯಾನಿ ಲೋಬೊರವರು, “ಎಲ್ಲಾ ಕ್ರೈಸ್ತ ಸಮುದಾಯದವರು ಮತ್ತು ಪಂಗಡದವರು ಒಗ್ಗಟ್ಟಿನಿಂದ ಮತ್ತು ಅನ್ಯೋನ್ಯತೆಯಿಂದ ಧರ್ಮವನ್ನಾಚರಿಸುವಾಗ ಮತಾಂತರ ಕುರಿತ ಸುಳ್ಳು ಆರೋಪಗಳು ನಮ್ಮ ನಡುವಿನ ಸಂಭಂದಗಳನ್ನು ಬಿರುಕುಗೊಳಿಸುತ್ತವೆ ಮತ್ತು ಅಶಾಂತಿ ಮತ್ತು ದ್ವೇಷದ ಭಾವನೆಗಳನ್ನು ಬಿತ್ತಲು ಕಾರಣವಾಗುತ್ತವೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಕೈಬಿಡಬೇಕಾಗಿ ಒತ್ತಾಯಿಸಿದರು.

ಮಾಜಿ ವಿಧಾನ ಸಭೆಯ ಸದಸ್ಯರಾದ, ಶ್ರೀ ಜೆ.ಆರ್ ಲೋಬೊ ಮಾತಾಡುತ್ತ, “ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಪರಿಚ್ಚೇದ 25 (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು): ಇತರ ಮೂಲಭೂತ ಹಕ್ಕಗಳು, ಸಾರ್ವಜನಿಕ ಸ್ವಾಸ್ಥ್ಯ ಹಾಗೂ ನೆೃತಿಕತೆ ಸಂರಕ್ಷಸಿ ಅಂತಃಕರಣದ ಸ್ವಾತಂತ್ರ್ಯ ಮತ್ತು ಧರ್ಮವನ್ನು ಸ್ವೀಕರಿಸುವ, ಅನುಸರಿಸುವ ಮತ್ತು ಪ್ರತಿಪಾದಿಸುವ ಸ್ವಾತಂತ್ರ್ಯ.” ಎಂದು ಹೇಳಿದರು.

Picture of Webmaster: Diocese of Mangalore
Webmaster: Diocese of Mangalore