Search
Close this search box.

Bishop Peter Paul Saldanha celebrates Christmas with Journalists and Media reporters. Encourages to Spread Hope this Christmas

❤️ Spread the love ❤️ |

MANGALURU, DECEMBER 21, 2023: Most Rev. Dr Peter Paul Saldanha, the Bishop of Mangalore, joined hands with journalists and members of the media in a heartening Christmas celebration at the Bishop’s House in Mangaluru today, December 21, 2023.

During this gathering, Bishop Peter Paul Saldanha conveyed a touching Christmas message emphasizing the essence of peace, forgiveness, and love. He articulated, “Christ, born as the ‘Prince of Peace,’ highlights that true peace flourishes in an environment of forgiveness and love. Discrimination and injustice can never pave the way for peace. It is through love and forgiveness that we find remedies.”

ಕ್ರಿಸ್ಮಸ್ ಸಂದೇಶ 2023: “ಹತಾಶ ಜಗತ್ತಿನಲ್ಲಿ ಭರವಸೆಯನ್ನು ಬಿತ್ತಲು”


ನಮ್ಮ ಜಗತ್ತಿನಲ್ಲಿ ದ್ವೇಷ, ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯ ಹಾಗೂ ಹಿಂಸೆಯು ತಾಂಡವವಾಡುತ್ತಿರುವುದನ್ನು ದಿನನಿತ್ಯವೂ ಕಾಣುತ್ತೇವೆ. ಯುದ್ದ, ಸಾವು ನೋವು ಹಾಗೂ ವಿನಾಶದ ದುರ್ಘಟನೆಗಳು, ಪ್ರಮುಖ ವಾರ್ತೆಗಳಾಗಿ ಹೊರಹೊಮ್ಮುತ್ತಿವೆ. ಪೋಪ್ ಪ್ರಾನ್ಸಿಸ್ ಇವರ ಮಾತುಗಳಲ್ಲಿ ಹೇಳುದಾದರೆ ನಾವು ಭಾಗಶಃ ಮೂರನೇ ಜಾಗತಿಕ ಮಹಾಯುದ್ಧದಲ್ಲಿ ಸದ್ದಿಲ್ಲದೆ ಮುನ್ನಡೆಯುತ್ತಿದ್ದೇವೆ. ಹತಾಶೆ ಹಾಗೂ ಆತ್ಮಹತ್ಯೆಗಳು ಏರಿಕೆಯಾಗುತ್ತಿವೆ. ನಾವೆಲ್ಲರೂ ನಿರಾಶಾದಾಯಕ ವಿಶ್ವದೆಡೆಗೆ ಮುಖ ಮಾಡಿದಂತೆ ಭಾಸವಾಗುತ್ತದೆ. ಧನ ಹಾಗೂ ಅಧಿಕಾರಾದಾಹವೇ, ಪ್ರಮುಖ ಅದ್ಯತೆಗಳಾಗಿರುವಂತೆ ತೋರುತ್ತದೆ. ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಜನ ಸಾಮಾನ್ಯರಲ್ಲಿ ನಿರಾಸಕ್ತಿ ಹಾಗೂ ಅಲಕ್ಷವು ಅತೀರೇಕವಾಗಿದೆ. ಇದು ಸೆಲ್ಫಿಯುಗ ವಾಗಿ ಮಾರ್ಪಟ್ಟು ಪ್ರತಿಯೊಬ್ಬರು ತಮ್ಮದೆ ಒಳಿತಿನತ್ತ ಗಮನ ಹರಿಸುತ್ತಿದ್ದಾರೆ. ಇವೆಲ್ಲವುಗಳಿಂದಲೂ ನಿಜವಾದ ಬಿಡುಗಡೆ ಹಾಗೂ ಪರಿಹಾರ ಕಷ್ಟ ಸಾಧ್ಯವಾಗಿದೆ.


ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ಕ್ರಿಸ್ಮಸ್ ಅಂದರೆ ಯೋಸು ಕ್ರಿಸ್ತರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬವು “ದೇವರು ನಮ್ಮೊಂದಿಗೆ” ಎಂಬ ಅನುಭವವನ್ನು ನಮಗೆ ನೀಡುತ್ತದೆ. ಯೇಸು ಜನಿಸಿದ ಸಮಯದಲ್ಲಿ ದೇವದೂತನು ಕುರಿಗಾಹಿಗಳಿಗೆ ಈ ಸಂದೇಶವನ್ನು ಸಾರಿದನು “ಭಯಪಡಬೇಡಿರಿ, ಇಗೋ ನಾನು ನಿಮ್ಮಗೆಲ್ಲಾ ಸಂತೋಷದ ಸುವಾರ್ತೆಯನ್ನು ತಂದಿರುತ್ತೇನೆ, ಅದೇನೆಂದರೆ, ಇಂದೇ ದಾವಿದಾನ ಊರಿನಲ್ಲಿ ನಿಮಗೋಸ್ಕರ ಲೋಕೊದ್ಧಾರಕ ಜನಿಸಿದ್ದಾರೆ. ಅವರೇ ಯೇಸುಕ್ರಿಸ್ತ (ಲೂಕ: 2:10-11) ಈ ಕುರಿಗಾಹಿಗಳು ರೋಮ್ ಅಧಿಪತ್ಯದ ಶೋಷಿತ ಸಮಾಜದಲ್ಲಿ ಜೀವಿಸುತ್ತಿದ್ದರು. ಸಾವು ನೋವುಗಳಿಂದ ಕತ್ತಲೆ ಹೊಂದಿದ ಸಮಾಜವು ಅದಾಗಿತ್ತು.


ಕುರಿಗಾಹಿಗಳು ಶೋಷಣೆಯಿಂದ ಬಿಡುಗಡೆಗೊಳ್ಳುವ ಶುಭವಾರ್ತೆಯ ನೀರೆಕ್ಷೆಯಲ್ಲಿದ್ದರು. ಅಂಥವರ ಹೃದಯಗಳಲ್ಲಿ ಪ್ರೀತಿ, ಕ್ಷಮೆ ಪ್ರಾರ್ಥನೆ ಹಾಗೂ ತಪಸ್ಸಿನ ಮೂಲಕ ವೈರತ್ವವನ್ನು ಕೊನೆಗೊಳಿಸುವ ಸಾಧನವನ್ನು ಯೇಸು ತೋರಿಸಿದರು. ನುಡಿದಂತೆ ನಡೆದು ಬೋಧಿಸಿದನ್ನು ಅಭ್ಯಾಸ ಮಾಡಿದರು. ವೈರಿಯನ್ನು ಪ್ರೀತಿಯಿಂದ ಗೆಲ್ಲುವ ಹಾದಿಯು ಮಾತ್ರ ನಿತ್ಯವಾದುದು. ಯೇಸುವಿನ ಜನನವು ಅತ್ಯಾನಂದದ ವಿಷಯವಾಗಿದೆ, ಏಕೆಂದರೆ ಅವರು ನಮ್ಮಲ್ಲಿ ನವಜೀವನದ ಭರವಸೆಯನ್ನು ಬಿತ್ತುತ್ತಾರೆ. ನಮ್ಮ ದುಃಖದುಗುಡಗಳಲ್ಲಿ ಜೊತೆಜೊತೆಯಾಗಿ ನಡೆದು ಅರ್ಥಭರಿತ ಜಿವನವನ್ನು ನಡೆಸಲು ನೆರವಾಗುತ್ತಾರೆ. ಸಾವು ನೋವುಗಳಿಂದ ಕೂಡಿದ ನಮ್ಮ ಸನ್ನಿವೇಶದಲ್ಲಿ ಯೇಸುವು “ಶಾಂತಿಯ ಕುವರ” ರಾಗಿ ಕಾಣಿಸುತ್ತಾರೆ. ಕ್ಷಮೆ ಹಾಗೂ ಪ್ರೀತಿ ಇಲ್ಲದೆ, ಶಾಂತಿಯು ಅಸಾಧ್ಯಾವೆಂದು ತೋರಿಸುತ್ತಾರೆ. ಈ ಜಗವನ್ನು ಸರ್ವ ಜನರ ಶಾಂತಿಯ ತೋಟವನ್ನಾಗಿ ಮಾಡಬೇಕಾದರೆ, ನಾವು ನಿರ್ಲಕ್ಷ ಹಾಗೂ ನಿರಾಸಕ್ತಿಯನ್ನು ತೋರಿಸದೆ ಪ್ರೀತಿ ಹಾಗೂ ಕ್ಷಮೆಯನ್ನು ಹೊಂದಿದವರಾಗಿ ಇತರ ಜೀವನದಲ್ಲಿ ಹೊಸ ದೀಪವನ್ನು ಹಚ್ಚೋಣ. ಇವುಗಳಿಂದ ಅಂತರಿಕ ಅನಂದದ ಚಿಲುಮೆಯು ಹರಿಯಲು ಸಾಧ್ಯ. ಜೀವನದಲ್ಲಿ ನಿರಾಶರಾದವರಲ್ಲಿ ಪುನಶ್ಚೇತನ ಮೂಡಿಸಲು ಯೇಸುವು ನಮಗೆ ಕರೆ ಕೊಡುತ್ತಾರೆ. ಕೇವಲ ಒಬ್ಬರಲ್ಲದಾರೂ ಇಂಥಹ ಭರವಸೆಯನ್ನು ಮೂಡಿಸುವುದರಲ್ಲಿ ನಾವು ಯಶ್ವಸಿಯಾದರೆ, ಅದು ದೊಡ್ಡ ಸಾಧನೆಯೇ ಸರಿ. ನಾವು ಜನರ ಹೃನ್ಮನಗಳನ್ನು ಉತ್ತುಂಗಕ್ಕೇರಿಸುವ ವ್ಯಕ್ತಿಗಳಾಗೋಣ. ಹತಾಶ ಜಗತ್ತಿನಲ್ಲಿ ಭರವಸೆಯನ್ನು ಬಿತ್ತೊಣ. ನಿಮಗೆಲ್ಲರಿಗು ಕ್ರಿಸ್ಮಸ್ ಹಾಗೂ ಹೊಸ ವರುಷದ ಹಾರ್ಧಿಕ ಶುಭಾಶಯಗಳು.

 

Bishop Peter Paul Saldanha.

Bishop of Mangalore

Highlighting the need to infuse hope into a world often devoid of it, the Bishop remarked, “Jesus calls upon us to nurture hope within the hearts of those who feel hopeless. Even by uplifting one person’s spirit and extending help, we make a substantial difference. Let us aspire to be beacons of hope, elevating the spirits of individuals in a world longing for hope.”

The event saw the presence of Msgr Rev. Fr Maxim Noronha, (Vicar General) Rev. Fr J. B Saldanha, Mr Roy Castelino (the PRO of Mangalore Diocese), Dr John DSilva (Diocesan Pastoral Parishad Secretary), Mr Elias Fernandes (Media representative), Rev. Fr Anil Ivan Fernandes (Director, Canara Communication Centre), Fr Rupesh Madtha (editor of Raknno weekly), Rev. Fr Trishan Dsouza (Bishop’s Secretary), Rev. Fr Ronald Dsouza (Financial Administrator), and Mr Alwyn Dsouza (President, Catholic Sabha Mangalore) among the gathering of journalists and media representatives.

Christmas Message 2023: Instill Hope in a Hopeless World

The daily news tells us that hatred, caste based, religion based discrimination and violence are reigning in our world. Wars, destruction, pain, death and misery are hitting headlines. As Pope Francis calls it, we are having the “Piecemeal World War III”. The desperation and suicides are on the increase. Everything seems to be pointing to hopeless world.Only money and hunger for power seems to be the only concern. Indifference is rampant everywhere. It is a world of selfies, each one is concentrating on oneself. A true remedy and liberation is not visible.

In this context we celebrate Christmas, the feast of the birth of Jesus Christ. It is the “Feast of God-with-us.” At his birth the angel announced to the shepherds: “Fear not, for behold, I bring you good news of great joy that will be for all the people. For unto you is born this day in the city of David a Saviour, who is Christ the Lord” (Lk 2: 10-11). Those shepherds were living in a society oppressed by the Roman army. Death and darkness was everywhere.

The shepherds expected good news of freedom from oppression. But with his birth, now the focus is changed. It is not any more on the Roman emperor and his kingdom, but on one who will bring down the mighty from their thrones and raise up the lowly. Jesus will do it not by weapons but by winning the hearts of enemies through love and forgiveness, prayer and penance. He use the powerful spiritual weapons. He will live by what he teaches. He will walk the talk.

Jesus teaches us that violence and oppression, hatred, injustice and discrimination cannot rule the world. Even if one wins power for some time by hook or crook, after his death, he will be conveniently forgotten or not loved. Only the method of winning over the enemy by loving him has eternal eternal. Jesus’ birth is a matter of great joy because he instills

hope of new life. He accompanies us even today in all difficulties, to live life meaningfully.

In our painful context, Christ is born as the “Prince of Peace”. Let us be sure, no peace is possible without forgiveness and love. No peace is possible in discrimination and injustice. Only love and forgiveness is the remedy. Anyone who acts on these latter ones are on the side of God. In them joy dawns from within. Jesus invites us to instill hope in the hopeless people. If we instill hope in any one person and help him or her, then we have done much. Let us be persons who lift the spirit of the people higher and higher. Let us fill hope in a hopeless world. Happy Christmas and Joy-filled New Year 2024.    

                     

Bishop Peter Paul Saldanha.

Bishop of Manglaore

Report and Pics by:

Fr Anil Fernandes, CCC

Picture of Director CCC Admin
Director CCC Admin

Post a comment