MANGALURU, JANUARY 7, 2024: The Catholic Diocese of Mangalore hosted a soul-stirring Eucharistic procession on Sunday, January 7, 2024, from Milagres Church to Rosario Cathedral. Enthusiastic participation was seen from thousands of Catholics across different parishes within the Mangalore Diocese, exhibiting profound devotion and discipline.
Aligned with Pope Francis’s designation of ‘2024’ as the ‘Year of Prayer’ in anticipation of Jubilee 2025, the procession resonated with the theme “Prayer Unites us with God and with our Brothers and Sisters.”
ಮಂಗಳೂರು ಧರ್ಮಕ್ಷೇತ್ರ:
ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯೊಂದಿಗೆ ‘ಪ್ರಾರ್ಥನೆಯ ವರ್ಷ’ ಪ್ರಾರಂಭ
ಮಂಗಳೂರು, ಜನವರಿ 07: ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ 7ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಕ್ರಿಸ್ತ ಜಯಂತಿ-2025ರ ಜುಬಿಲಿ ಪ್ರಯುಕ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ‘2024′ ಅನ್ನು ‘ಪ್ರಾರ್ಥನೆಯ ವರ್ಷ’ ಎಂದು ಘೋಷಿಸಿರುವುದರಿಂದ “ಪ್ರಾರ್ಥನೆ ಮೂಲಕ ದೇವರೊಡನೆ ಮತ್ತು ಪರರೊಡನೆ ಸಂಬoಧ ಬೆಳೆಸೋಣ” ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ “ದೇವರನ್ನು ಮೊದಲು ಪವಿತ್ರ ಗ್ರಂಥಗಳಲ್ಲಿ ಕಂಡುಕೋಳ್ಳೋಣ, ನಂತರ ನಮ್ಮ ಹಾಗೂ ಪರಸ್ಪರರ ಹೃದಯಗಳಲ್ಲಿ ಆತನ ಸಾಮಿಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದ್ದಲ್ಲಿ ಯೇಸುವಲ್ಲಿ ಸೇರುವ ದಾರಿಯು ಗೋಚರಿಸುವುದು. ದೇವರ ವಾಕ್ಯ ನಮ್ಮ ದಾರಿಗೆ ದೀಪವೂ, ಆ ದೀಪದ ಬೆಳಕಿನಲ್ಲಿ ಸದಾ ನಡೆದು ಯೇಸುವನ್ನು ಮಹಿಮೆಪಡಿಸೊಣ”, ಎಂದು ಬೋಧಿಸಿದರು.
ಪೂಜಾಂತ್ಯಕ್ಕೆ ಆರಂಭಗೊoಡ ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೊಯ್ದ ಅಲಂಕೃತ ವಾಹನವು ಮಿಲಾಗ್ರಿಸ್ ಚರ್ಚ್ನಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್ ಟವರ್ ಸರ್ಕಲ್, ಎ.ಬಿ ಶೆಟ್ಟಿ ಸರ್ಕಲ್ ಮತ್ತು ನೆಹರು ವೃತ್ತದ ಮೂಲಕ ಸಾಗಿತು.
ಮೆರವಣಿಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸAಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು.
ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ ಆವರಣದoಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.
ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ಕಾಸರಗೋಡಿನ ವರ್ಕಾಡಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಬಾಸಿಲ್ ವಾಸ್ ಪ್ರವಚನ ಬೋಧಿಸಿದರು. ಅವರು ‘ಪ್ರಾರ್ಥನೆಯ’ ಬಗ್ಗೆ ಒಳನೋಟಗಳನ್ನು ನೀಡುತ್ತಾ ದೈವಿಕ ಮತ್ತು ಮಾನವೀಯ ಸಂಬoಧವನ್ನು ಬೆಳೆಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.
“ನಾವು ಡಿಜಿಟಲ್ ಕ್ಷೇತ್ರಕ್ಕೆ ಗಮನಾರ್ಹ ಸಮಯವನ್ನು ವಿನಿಯೋಗಿಸುವ ಈ ಕಾಲಘಟ್ಟದಲ್ಲಿ, ‘ಪ್ರಾರ್ಥನೆಗೆ ಸಮಯವಿಲ್ಲ’ ಎಂದು ಹೇಳುವುದರಲ್ಲ್ಲಿ ಆರ್ಥವಿಲ್ಲ. ಈ ಆಧುನಿಕ ಸಂವಹನ ತಂತ್ರಜ್ಞಾನವoನ್ನು ಕೇವಲ ಮಾನವ ಸಂಬoಧಗಳನ್ನು ಬೆಳೆಸುವಲ್ಲಿ ಮಾತ್ರ ಉಪಯೋಗಿಸದೆ, ಪರರಿಗೋಸ್ಕರ ಪ್ರಾರ್ಥಿಸುವ ಮೂಲಕ ದೈವರೋಂದಿಗೆ ಸಂಬoಧ ಉಂಟುಮಾಡುವಲ್ಲಿ ಸಹಕಾರಿಯಾಗಬೇಕು” ಎಂದು ಒತ್ತಿ ಹೇಳಿದರು. “ಇಂದಿನ ಡಿಜಿಟಲ್ ಯುಗ ನಾವು ಆನ್‌ಲೈನ್‌ನಲ್ಲಿ ತೊಡಗಿಸಿಕೊಳ್ಳುವ ಪ್ರತಿ ಬಾರಿಯೂ, ತೀವ್ರ ಅಗತ್ಯವಿರುವವರಿಗೆ ವಿಡಿಯೋ ಕರೆ ಮಾಡಿ ಪ್ರಾರ್ಥನೆಗಳನ್ನು ವಿಸ್ತರಿಸಲು ಮತ್ತು ಆಧ್ಯಾತ್ಮಿಕ ಸಂಪರ್ಕಕ್ಕಾಗಿ ಹಲವಾರು ಮಾರ್ಗಗಳನ್ನು ನೀಡುತ್ತದೆ.”
ಫಾದರ್ ಬಾಜಿಲ್ ವಾಸ್ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, “ನಮ್ಮ ಪ್ರಾರ್ಥಿಸುವ ಕೈಗಳು, ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಲು, ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ವಿಸ್ತರಿಸದಿದ್ದರೆ, ಆಂತಹ ಪ್ರಾರ್ಥನೆ ಫಲಹೀನವಾದುದು ಮತ್ತು ಅದು ನಮ್ಮಲ್ಲಿ ದೈವಿಕ ಮತ್ತು ಮಾನವ ಸಂಬoಧಗಳನ್ನು ಒಗ್ಗೂಡಿಸುವಲ್ಲಿ ವಿಫಲಗೋಳಿಸುವುದು” ಎಂದು ಬೋಧಿಸಿದರು.
ರೊಸಾರಿಯೊದಲ್ಲಿ ನಡೆದ ಆರಾಧನೆ ವಿಧಿಯನ್ನು ಕುಲುಶೇಖರ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಮತ್ತು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರಾದ ವಂದನೀಯ ರಾಬರ್ಟ್ ಡಿಸೋಜಾರವರು ಭಕ್ತಿಯುತವಾಗಿ ನಡೆಸಿದರು.
ಕೊನೆಯಲ್ಲಿ ಧರ್ಮಪ್ರಾಂತ್ಯದ “ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ”ದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವಣಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ವರದಿ: ವಂದನೀಯ ಅನಿಲ್ ಐವನ್ ಫೆರ್ನಾಂಡಿಸ್
ಚಿತ್ರಗಳು: ಸ್ಟಾನ್ಲಿ ಬಂಟ್ವಾಳ್ ಹಾಗೂ ಜೋನ್ ಡಿಸೋಜಾ
❄ DOM: https://shorturl.at/ehCDU
💥 Mangalore Today: https://t.ly/zSczH
⚡ Mangaloean (KN): https://t.ly/99flc
✨ Mangalorean(EN): https://t.ly/D57-r
🪻 ಜನನುಡಿ : https://t.ly/XOCrV
☀ Catholic Time: https://t.ly/IrpTY
💫 Kittal: https://kittall.in/30746/
🌏 Daijiworld: https://t.ly/ty_Hu
⭐ Konkan Catholic: https://shorturl.at/elFY2
🌟 News Karnataka: https://shorturl.at/uGLY7
⛄ Kemmannu: http://surl.li/parna
🌀 Pingara: http://surl.li/parmp
The event commenced with a solemn mass celebrating the ‘Epiphany of Lord Jesus,’ presided over by Most Rev. Dr. Peter Paul Saldanha, Bishop of Mangalore, at Milagres Church. The Eucharistic procession coincided with the solemnity of the Epiphany, also recognized as the Feast of the Epiphany, Theophany, or Three Kings’ Day, commemorating the first revelation of Jesus Christ to the Gentiles symbolized by the Magi, emphasizing his divine manifestation.
In his homily during the mass, Bishop Saldanha stressed the significance of seeking God first in the Holy Scriptures and then within one another’s hearts. “The Word of God in our hands acts as our guiding star directing us to Jesus. When we immerse ourselves in reading and reflecting on the Gospel, our hearts ignite with its message, making us aware of Jesus’s presence in our lives,” he emphasized.
The adorned vehicle carried the Holy Eucharist through city thoroughfares, commencing from Milagres Church and passing through Hampankattta, Clock Tower Circle, A.B Shetty Circle, and Nehru Circle, culminating at Rosario Cathedral. The participants, accompanied by musical bands and choir groups, displayed reverence and orderliness, ensuring minimal disruption to the general public. They filled the atmosphere with hymns of praise and congregated at Rosario Cathedral Grounds to worship the Eucharist and contemplate the Word of God.
Rev. Fr Basil Vas, Parish Priest of Vorkady Church, Kasaragod, delivered insights on prayer, emphasizing its role in fostering relationships with both the divine and humanity. He stressed, “We can’t excuse a lack of time for prayer when we devote significant hours to the digital realm. These modern tools should not just facilitate human interactions but also act as bridges, connecting us with the divine through prayers for others.” He further highlighted, “Each time we engage online, it’s an opportunity to extend prayers to those in dire need. The digital landscape offers a multitude of ways for spiritual connectivity.” Fr Vas emphasized the importance of action in prayer, stating, “If our prayers don’t extend to lifting the fallen, comforting the distressed, and aiding those in need, they remain fruitless in uniting us with the divine and humanity.”
The ceremony at Rosario was animated by Rev. Fr Clifford Fernandes, Parish Priest of Cordel Church, and Rev. Fr. Robert Dsouza, Principal of Lourdes Central School and coordinated by Mangala Jyothi Liturgical Centre. At the end, prizes were awarded to winners of the contest organized as part of the Diocese’s “Anti-Drug Awareness Campaign.” Bishop Saldanha extended gratitude to all participants, acknowledging their contribution to the success of the procession.
Comment(1)
Jennifer and Noel Mascarenhas says:
January 7, 2024 at January 7, 2024 11:48 PMAs far as I remember, this diocesan procession from Milagres church to our Lady of Rosario Cathedral was organised since I was a kid (1950s)and my parents ensured that we all participated in the Eucharistic procession on the first Sunday of the New Year.
Hats off to the diocese of Mangalore for year after year, organising such a solemn and overwhelming catholic solidarity marching in silence and in unity with people from all parishes of the diocese.
We Catholics are a blessing to any society and proud Catholics of Mangalore (the Rome of the East).
God bless our bishop, clergy, religious orders and laiety in spreading the kingdom of Jesus Christ on this earth.