ಪತ್ರಿಕಾ ಪ್ರಕಟಣೆ
ಸೇಂಟ್ ಜೆರೋಸಾ ಶಾಲೆಯ ಘಟನೆಯ ಕುರಿತು ಮಂಗಳೂರು ಧರ್ಮಪ್ರಾಂತ್ಯವು ಕಳವಳ ವ್ಯಕ್ತಪಡಿಸಿ ನ್ಯಾಯ ಕೇಳುತ್ತದೆ
ಮಂಗಳೂರು, ಫೆಬ್ರವರಿ 14, 2024
ಸೇಂಟ್ ಜೆರೋಸಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯು ಶನಿವಾರ, ಫೆಬ್ರವರಿ 10, 2024 ರಂದು ಅಲ್ಲಿನ ಇಂಗ್ಲಿಷ್ ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪಗಳ ಮೇಲೆ ದುರದೃಷ್ಟಕರ ಮತ್ತು ದುಃಖಕರ ಘಟನೆಗಳಿಗೆ ಸಾಕ್ಷಿಯಾಗಿದೆ.
7ನೇ ತರಗತಿಯಲ್ಲಿ ಇಂಗ್ಲಿಷ್ ಟೀಚರ್ ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದ ಮೂಲಕ ಎರಡು ಆಡಿಯೋ ಸಂದೇಶಗಳನ್ನು ಪ್ರಸಾರ ಮಾಡುವುದರೊಂದಿಗೆ ಇದು ಪ್ರಾರಂಭವಾಯಿತು. ಸಾಮಾಜಿಕ ಮಾಧ್ಯಮ ಸಂದೇಶಗಳು ಹರಡುತ್ತಿದ್ದಂತೆ, ನಾಲ್ವರು ಪೋಷಕರು ಮುಖ್ಯೋಪಾಧ್ಯಾಯಿನಿಯನ್ನು ಸಂಪರ್ಕಿಸಿದರು, ಅವರು ಸತ್ಯವನ್ನು ಹೊರತರಲು ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಆದರೆ, ಮಧ್ಯಾಹ್ನ 12:30ರ ವೇಳೆಗೆ ವ್ಯಕ್ತಿಗಳ ಗುಂಪು ಶಾಲೆಯ ಸುತ್ತಲೂ ಜಮಾಯಿಸಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಶಿಕ್ಷಕಿ ಭರವಸೆ ನೀಡಿದರು. ಮಧ್ಯಾಹ್ನದ ನಂತರ, ಶಾಲೆಯ ಧರ್ಮ ಭಗಿನಿಯರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಆಡಿಯೋ ಸಂದೇಶಗಳು ಸತ್ಯಕ್ಕೆ ದೂರವಾಗಿವೆ ಮತ್ತು ಯಾವುದೇ ಅಹಿತಕರ ಘಟನೆಯಿಂದ ರಕ್ಷಣೆ ಕೋರಿದರು.
ಸೋಮವಾರ, ಫೆಬ್ರವರಿ 12 ರಂದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಸ್ಥಳೀಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಶಾಲೆಗೆ ಆಗಮಿಸಿದಾಗ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತು, ನ್ಯಾಯಯುತ ತನಿಖೆಯ ಸಾಂವಿಧಾನಿಕ ಪ್ರಕ್ರಿಯೆಯ ಬಗ್ಗೆ ನಿರ್ಲಕ್ಷ್ಯವನ್ನು ಪ್ರದರ್ಶಿಸಿದರು. ಅವರು ಧರ್ಮ ಭಗಿನಿಯರು, ಮಹಿಳೆಯರು ಎಂದೂ ನೋಡದೆ, ಕನಿಷ್ಠ ಸೌಜನ್ಯವನ್ನು ತೋರಿಸದೆ, ಅಲ್ಲಿ ನೆರೆದಿದ್ದ ಧರ್ಮ ಭಗಿನಿಯರು ಹಾಗೂ ಮಹಿಳಾ ಸಿಬ್ಬಂದಿಗಳ ಮೇಲೆ ಹರಿಹಾಯ್ದರು ಮತ್ತು ತಕ್ಷಣವೇ ಲಿಖಿತ ಕ್ಷಮೆ ಯಾಚನೆ ಮತ್ತು ಶಿಕ್ಷಕಿಯನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದರು.
ಸಂಜೆ ವೇಳೆ ಮಕ್ಕಳು ಕ್ಯಾಂಪಸ್‌ನಿಂದ ಹೊರಬರುತ್ತಿದ್ದಂತೆ ಶಾಸಕರು ಧಾರ್ಮಿಕ ಘೋಷಣೆಗಳನ್ನು ಕೂಗಿಸಿ ಶಿಕ್ಷಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಲಾ ಆಡಳಿತ ಮಂಡಳಿಯು ಅಪಾರ ಒತ್ತಡಕ್ಕೆ ಮಣಿದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ವಿದ್ಯಾರ್ಥಿ ಸಮುದಾಯದ ಸುರಕ್ಷತೆಯನ್ನು ಖಾತ್ರಿಪಡಿಸಲು, ವಿಚಾರಣೆಗೆ ಬಾಕಿಯಿರುವ ವರೆಗೂ ಶಿಕ್ಷಕಿಯನ್ನು ಅಮಾನತುಗೊಳಿಸಿತು.
ನಿಜವಾಗಿ ಏನಾಯಿತು ಎಂಬುದರ ಕುರಿತು ಬೆಳಕು ಚೆಲ್ಲುವುದು ಮುಖ್ಯ. ಇಂಗ್ಲಿಷ್ ಟೀಚರ್ ರವೀಂದ್ರನಾಥ ಟ್ಯಾಗೋರ್ ಅವರ “Work is Worship” ಎಂಬ ಕವಿತೆಯನ್ನು ಕಲಿಸುತ್ತಿದ್ದರು ಮತ್ತು ಅವರು “”Whom dost thou worship in this lonely dark corner of the temple with doors all shut?” ” ( “ದೇವಾಲಯದ ಬಾಗಿಲು ಮುಚ್ಚಿರುವ ಈ ಏಕಾಂಗಿ ಕತ್ತಲೆ ಮೂಲೆಯಲ್ಲಿ ಯಾರನ್ನು ಪೂಜಿಸುತ್ತೀರಿ?”) ಎಂಬ ಸಾಲುಗಳನ್ನು ವಿವರಿಸುತ್ತಿದ್ದರು. (7ನೇ ತರಗತಿಯ ರಾಜ್ಯ ಮಂಡಳಿಯ ಇಂಗ್ಲಿಷ್ ಪಠ್ಯಕ್ರಮ, ಕರ್ನಾಟಕ). ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತೆ ಅವರು ಯಾವುದನ್ನೂ ಕಲಿಸಲಿಲ್ಲ ಅಥವಾ ಹೇಳಲಿಲ್ಲ.
ಈ ಘಟನೆಗಳ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಆಯೋಗವು ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಶಾಸಕರಿಂದ ಮಹಿಳಾ ಶಿಕ್ಷಕರು ಮತ್ತು ಮಕ್ಕಳಿಗೆ ಆಘಾತಕಾರಿ ವರ್ತನೆಯ ಬಗ್ಗೆ ತನಿಖೆ ನಡೆಸಬೇಕೆಂದು ಮಂಗಳೂರು ಧರ್ಮಪ್ರಾಂತ್ಯವು ವಿನಂತಿಸುತ್ತದೆ. ಇಂಗ್ಲಿಷ್ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ತನಿಖೆ ಮಾಡಲು ಮತ್ತು ಶಿಕ್ಷಕಿ ಮತ್ತು ಮಹಿಳೆಯಾಗಿ ಅವರ ಘನತೆಯನ್ನು ಕಾಪಾಡಲು ಧರ್ಮಪ್ರಾಂತ್ಯ ಅಧಿಕಾರಿಗಳನ್ನು ಒತ್ತಾಯಿಸುತ್ತದೆ; ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಹಿತಾಸಕ್ತಿಗಳನ್ನು ರಕ್ಷಿಸಲು ಸಂಬಂಧಿಸಿದ ಎಲ್ಲರನ್ನು ಧರ್ಮಪ್ರಾಂತ್ಯ ವಿನಂತಿಸುತ್ತದೆ.
ಮಂಗಳೂರು ಧರ್ಮಪ್ರಾಂತ್ಯವು ಚುನಾಯಿತ ಜನಪ್ರತಿನಿಧಿ ಮತ್ತು ಅವರ ಜನರಿಂದ ಶಿಕ್ಷಕ, ವಿದ್ಯಾರ್ಥಿಗಳು ಮತ್ತು ಶಾಲೆಗೆ ಅನ್ಯಾಯವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತದೆ.
ಹೆಚ್ಚಿನ ವಿಚಾರಣೆಗಾಗಿ, ದಯವಿಟ್ಟು ಸಂಪರ್ಕಿಸಿ:
Fr. J. B. Saldanha Mr. Roy Casteino
Public Relations Officer Public Relations Officer
Mangalore, February 14, 2024
St Gerosa English Higher Primary School witnessed unfortunate and distressing events on Saturday, February 10, 2024 over unfounded allegations against a English Teacher there.
It all started with the circulation of two audio messages via social media accusing English Teacher of making disparaging remarks against Hindu religious practices and political leaders during a class in 7th standard. As the social media messages spread, four parents approached the Headmistress who assured them a thorough investigation on the issue to bring out the truth.
However, a group of individuals gathered around the school at 12:30 p.m. The Headmistress assured them also that proper inquiry would be conducted to address the matter. Later that afternoon, the sisters from the school wrote to the district administration stating that the audio messages were far from the truth, and they sought protection from any untoward incident.
On Monday, February 12, the situation escalated when officials from the Education Department visited the school in the morning. Local MLA Mr. Vedavyas Kamath led a protest against the school exhibiting disregard for the constitutional process of a fair inquiry. He insisted on an immediate apology and suspension of English Teacher; he started harassing women staff, creating an atmosphere of hostility.
During the evening, as children were leaving the campus, the MLA prompted them to chant religious verses and raise slogans against the teacher. The school management, under immense pressure, suspended the teacher, pending an inquiry, to maintain law and order and ensure the safety of the student community.
It is important to throw light on what actually happened. English Teacher was teaching Rabindranath Tagore’s poem “Work is Worship” and she was explaining the lines “Whom dost thou worship in this lonely dark corner of the temple with doors all shut?” (English Syllabus of 7th Standard State Board, Karnataka). She neither taught nor stated anything of the sort as went viral on social media.
In the light of these events, the Diocese of Mangalore requests the Minority Department officials, Child Welfare Department, and Women’s Commission to conduct a fair inquiry into the matter and investigate the traumatic treatment meted out to the women teachers and children by the MLA. The Diocese urges the authorities to probe into the false allegations against English Teacher and safeguard her dignity as a teacher and a woman; the diocese also requests all concerned to protect the interests of minorities, women, and children.
The Diocese of Mangalore expresses deep concern over the unfair treatment of the teacher, students and the school by an elected people’s representative and his people.
For further inquiries, please contact:
Fr. J. B. Saldanha Mr. Roy Casteino
Public Relations Officer Public Relations Officer
Comments(11)
Maria s l DSouza says:
February 14, 2024 at February 14, 2024 11:01 PMOur Christian institutions are targeted, Just for the political gain of the opposition party MLAs and their members. The unfair treatment to the teacher and to the management is condemnable. No one can take Law in their hands. There is a way to deal,investigate and find solution in a dignified way. Thus edify others.
Stephen santhosh Dsouza says:
February 15, 2024 at February 15, 2024 7:10 AMMy opinion is must be enquiry with school management actually what is matter what teacher teach and explain or given example like that another thing we should request immediately effect to they should disqualified MLA Mr Vedavyas kamath who teaches children to protest against school without any proper evidence and this not right way did vedavyas kamath teaching children to go wrong way so my request vedavyas kamath MLA membership immediately need to disqualified until proper investigation
Fr Benedict Gomes OFM says:
February 15, 2024 at February 15, 2024 9:18 AMGiven an opportunity I would like to join any protest against this unbecoming incident and stand by the Diocese of Mangalore and the Church
Sophia Saldanha says:
February 15, 2024 at February 15, 2024 10:04 AMThis kind of humiliation and insult by an MLA and Hindu groups against a Christian teacher and generalising all Christian missionaries institutions is highly unacceptable and condemnable. Through inquiry is must.
Lancy D Costa says:
February 15, 2024 at February 15, 2024 10:39 AMDear Rev Father,
On behalf of Diocese of Mangalore, kindly lodge a complaint against MLA, who has spoiled the discipline of the school children. Kindly send your representative to the school to see the current situation of the students in the school which is uncontrollable due to misbehaviour of MLA and this should be brought to the notice of authorities and public. Immediate action is required to support the school.
Divya Spoorthi says:
February 15, 2024 at February 15, 2024 1:03 PMIts unfair to mistreat any teaching faculty without proper investigation. I hope that lecturer will get justice she deserves.
K. R. Ballal says:
February 15, 2024 at February 15, 2024 4:13 PMWhen the school had agreed to conduct enquiry and take appropriate action the aggrieved party, s should have waited for the outcome. Christian missionaries are credited for nurturing many Educational Institutions of highest standard in in earstwhile South Canara district and thousands of people have benefitted. A stray incident should not be allowed to discredit the Institution.
Jerome says:
February 15, 2024 at February 15, 2024 4:57 PMMay divine justice prevail…
Nancy Lasrado says:
February 15, 2024 at February 15, 2024 5:52 PMTruth can not be hidden it will come out to open . God is true he will show the truth
Roque Lobo says:
February 16, 2024 at February 16, 2024 11:26 AMIt’s so disgusting that the local MLA is trying spoil the name of a reputed minority educational institution which has served 60 years for the upliftment of coastal children and worked hard, and has achieved remarkable reputation in the field of education. The conduct of the local MLA needs to be investigated and punished for his unruly behaviour with the school staff.
Ravi says:
February 16, 2024 at February 16, 2024 9:07 PMThe teachers in the present day society need to be cautious in this highly ‘biased’ religious environment as teachers in France had to face a few years ago..