Mangalore Diocese officials, leaders, representatives meet and greet Dr Veerendra Heggade

❤️ Spread the love ❤️ |
Report By Fr Anil Fernandes, Pics by Stanly Bantwal

MANGALURU, JULY 15: In a formal meeting held on Friday, July 15, 2022,  the officials of the Diocese of Mangalore, Catholic Sabha  and Youth leaders with a few representatives of priests, nuns and lay faithful met the recently nominated member of Rajya Sabha Dr D. Veerendra Heggade, Dharmadhikari of Sri Kshetra Dharmasthala at his residence in Dharmasthala. 

Msgr Very Rev. Fr Maxim L. Noronha, Vicar General, Very Rev. Dr J. B. Saldanha and Mr Roy Castelino, PR Officers of the diocese, Rev. Fr Rupesh Madtha, Designate Editor of Raknno Weekly, Rev. Fr Anil Fernandes, Director, Canara Communication Centre, Dr John DSilva, Secretary, Diocesan Pastoral  Council, Mr Romans Lobo, member of  the Commission for Inter Religious Dialogue congratulated the nominated Member of Parliament Dr Heggade on behalf of the Bishop and the diocese. 

Dr Heggade was felicitated with boquette of flowers and shawls by Msgr Very Rev. Maxim L. Noronha  Vicar General on behalf of Most Rev. Dr Peter Paul Saldanha, Bishop of Mangalore. 

In his response Dr Heggade said, “Bishop of Mangalore wished me over the phone recently and I was glad to speak to him. Through Rural development projects, self employment and women empowerment, we were able to attract the Central governement and those successful models were replicated across the country. Through my nomination to Rajya Sabha I will extend my service to the country and represent you all.”

The President and office bearers of Catholic Sabha Mangalore Pradesh (R)

Mr Stany Lobo, President, Mr Manohar Cutinho and Mr Vinod Pinto, vice presidents, Mr Alphonse Fernandes, treasurer, Mr Francis Serrao, joint treasurer and Mr Paul Rolphy Dcosta, immediate past president greeted Mr Heggade with flowers and shawls. 

The president and office bearers of Catholic Sabha, Belthangady unit, Mr Edward Rego, president, Mr Jerome Lobo, immediate past President

Mr Arun Fernandes, vice president and Mr Gregory Fernandes, joint secretary greeted Dr Heggade and felicitated him with shawls and flower garland. 

Fr Joseph Cardoza, parish priest, Balthangady, Fr Clifford Pinto, Principal, Belthangady, Mrs Pauline Rego, Belthamgady

Fr James D’Souza, parish Priest Ujire, Fr Vijay Lobo, Principal Anugraha English Medium School, Ujire, Rev. Fr Basil Vas, Parish Priest, Madanthyar, Mr Leo Rodrigues, Mr Vivek Vincent Pais and Mr Jerald Moras Belthangady, 

Religious sisters from Belthangady and Badyar  Sr Flossy, Sr Ramitha, Sr Jyothsna, Sr Sevrine and Sr Valsa congratulated Dr Heggade and offered him a boquette of flowers. 

 

Rev. Fr Ashwin Cardoza, Director,  Indian Catholic Youth Movement (ICYM) Mangalore, president Jaison Lawrence Crasta and Naveen D’Souza were present. 

Mr Romans Lobo addressing the gathered noted that  Dr Heggade is the recipient of the second highest civilian award Padma Vibhushan, which was bestowed on him in 2015 for his philanthropic and charitable works to uplift the masses. 

He further noted that the Rajya Sabha nominated member Mr Heggade would be  representing Karnataka State and  expand the state’s representation in the Rajya Sabha.

He has been a devoted philanthropist for more than five decades. He has led various transformative initiatives for rural development and the promotion of self-employment, Mr Lobo added.

ಮಂಗಳೂರು ಧರ್ಮಪ್ರಾಂತ್ಯದ ಧಾರ್ಮಿಕ ಮುಖಂಡರು ಮತ್ತು ಪ್ರತಿನಿಧಿಗಳಿಂದ ಡಾ. ವೀರೇಂದ್ರ ಹೆಗ್ಗಡೆ  ಭೇಟಿ 

ವರದಿ ಫಾದರ್ ಅನಿಲ್ ಫೆರ್ನಾಂಡಿಸ್, ಚಿತ್ರಗಳು ಸ್ಟ್ಯಾನ್ಲಿ ಬಂಟ್ವಾಳ್

 

ಮoಗಳೂರು, ಜುಲೈ 15: ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಭಾರತ ಸರಕಾರದಿಂದ ನಾಮ ನಿದೇರ್ಶನಗೊಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಾ ಪೂಜ್ಯ ಡಾ ಡಿ. ವಿರೇಂದ್ರ ಹೆಗ್ಗಡೆಯವರನ್ನು ಮಂಗಳೂರು ಧರ್ಮಪ್ರಾಂತ್ಯದ ಧಾರ್ಮಿಕ ಮುಖಂಡರು, ಕೆಥೋಲಿಕ್ ಸಭಾದ ಪದಾಧಿಕಾರಿಗಳು ಮತ್ತು ಯುವ ಮುಖಂಡರು, ಪಾದ್ರಿಗಳು, ಸನ್ಯಾಸಿನಿಯರು ಮತ್ತು ಜನ ಪ್ರತಿನಿಧಿಗಳು ಜುಲೈ 15, 2022, ಶುಕ್ರವಾರದಂದು ಪೂಜ್ಯರ ನಿವಾಸದಲ್ಲಿ ನಡೆದ ಔಪಚಾರಿಕ ಸಭೆಯಲ್ಲಿ ಭೇಟಿಯಾಗಿ ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ಆಭಿನಂದನೆ ಸಲ್ಲಿಸಿದರು. 

ಈ ವೇಳೆ ಧರ್ಮಪ್ರಾಂತ್ಯದ ಶ್ರೇಷ್ಟಗರು ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್ ನೊರೊನ್ಹಾ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಅತೀ ವಂದನೀಯ ಡಾ. ಜೆ ಬಿ ಸಲ್ಡಾನ್ಹಾ ಮತ್ತು ಶ್ರೀ ರೋಯ್ ಕ್ಯಾಸ್ಟೆಲಿನೊ, ‘ರಾಕ್ಣೊ’ ಕೊಂಕಣಿ ವಾರಪತ್ರಿಕೆಯ ನೀಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕರಾದ ವಂದನೀಯ ಅನಿಲ್ ಫೆರ್ನಾಂಡಿಸ್, ಧರ್ಮಾಪ್ರಾಂತ್ಯದ ಪಾಲನಾ ಪರಿಷದ ಇದರ ಕಾರ್ಯದರ್ಶಿ ಡಾ ಜಾನ್ ಡಿಸಿಲ್ವಾ, ಅಂತರ್-ಧರ್ಮಿಯ ಸಂವಾದ ಆಯೋಗದ ಸದಸ್ಯ ಶ್ರೀ ರೋಮನ್ಸ್ ಲೋಬೋ ಬಿಷಪ್ ಮತ್ತು ಧರ್ಮಪ್ರಾಂತ್ಯದ ಪರವಾಗಿ ನಾಮನಿರ್ದೇಶಿತ ಸಂಸದ ಡಾ. ಹೆಗ್ಗಡೆ ಅವರನ್ನು ಅಭಿನಂದಿಸಿದರು.

 

ಮAಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರ ಪರವಾಗಿ ಶ್ರೇಷ್ಟಗುರು ಅತೀ ವಂದನೀಯ ಮಾಕ್ಸಿಮ್ ಎಲ್.ನೊರೊನ್ಹಾ ಇವರು ಡಾ. ಹೆಗ್ಗಡೆಯವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಹೆಗ್ಗಡೆಯವರು “ಮಂಗಳೂರು ಬಿಷಪ್ ಇತ್ತೀಚೆಗೆ ನನ್ನೊಂದಿಗೆ ದೂರವಾಣಿ ಮೂಲಕ ಸಂದರ್ಶಿಸಿ ಹಾರೈಸಿದಾಗ ಅವರೊಂದಿಗೆ ಮಾತನಾಡಲು ನನಗೆ ತುಂಬಾ ಸಂತೋಷವಾಯಿತು. ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ವಯಂ ಉದ್ಯೋಗ ಮತ್ತು ಮಹಿಳಾ ಸಬಲೀಕರಣದ ಮೂಲಕ ನಾವು ಕೇಂದ್ರ ಸರ್ಕಾರವನ್ನು ಆಕರ್ಷಿಸಲು ಸಾಧ್ಯವಾಯಿತು ಮತ್ತು ಈ ಯಶಸ್ವಿ ಮಾದರಿಗಳು ದೇಶಾದ್ಯಂತ ಪುನರಾವರ್ತಿಸಲಾಗಿದೆ. ರಾಜ್ಯಸಭೆಗೆ ನನ್ನ ನಾಮನಿರ್ದೇಶನದ ಮೂಲಕ ನಾನು ದೇಶಕ್ಕೆ ನನ್ನ ಸೇವೆಯನ್ನು ವಿಸ್ತರಿಸುತ್ತೇನೆ ಮತ್ತು ನಿಮ್ಮೆಲ್ಲರನ್ನು ಪ್ರತಿನಿಧಿಸುತ್ತೇನೆ” ಎಂದು ನುಡಿದರು

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು; ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷರುಗಳಾದ ಶ್ರೀ ಮನೋಹರ್ ಕುಟಿನ್ಹೊ ಮತ್ತು ವಿನೋದ್ ಪಿಂಟೋ, ಖಜಾಂಚಿ ಶ್ರೀ ಅಲ್ಫೋನ್ಸ್ ಫೆರ್ನಾಂಡಿಸ್, ಜಂಟಿ ಖಜಾಂಚಿ ಶ್ರೀ ಫ್ರಾನ್ಸಿಸ್ ಸೆರಾವೊ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪೌಲ್ ರೊಲ್ಫಿ ಡಿಕೋಸ್ಟಾ ಅವರು ಶ್ರೀ ಹೆಗ್ಗಡೆಯವರಿಗೆ ಹೂಗುಚ್ಚ ಮತ್ತು ಶಾಲು ಹೊದಿಸಿ ಅಭಿನಂದಿಸಿದರು.

 

ಕೆಥೋಲಿಕ್ ಸಭಾ, ಬೆಳ್ತಂಗಡಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಧ್ಯಕ್ಷರಾದ ಶ್ರೀ ಎಡ್ವರ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜೆರೋಮ್ ಲೋಬೋ, ಉಪಾಧ್ಯಕ್ಷ ಅರುಣ್ ಫೆರ್ನಾಂಡಿಸ್ ಹಾಗೂ ಜಂಟಿ ಕಾರ್ಯದರ್ಶಿ ಗ್ರೆಗೊರಿ ಫೆರ್ನಾಂಡಿಸ್ ಇವರು ಡಾ. ಹೆಗ್ಗಡೆಯವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.

 

ಬೆಳ್ತಂಗಡಿ ವಲಯದ ಧರ್ಮಗುರು ಆತೀ ವಂದನೀಯ ಜೋಸೆಫ್ ಕಾರ್ಡೋಜ, ಪ್ರಾಂಶುಪಾಲರಾದ ವಂದನೀಯ ಕ್ಲಿಫರ್ಡ್ ಪಿಂಟೋ ಮತ್ತು ಶ್ರೀಮತಿ ಪಾಲಿನ್ ರೇಗೋ ಕೂಡ ಪೂಜ್ಯರನ್ನು ಅಭಿನಂದಿಸಿದರು.

ಉಜಿರೆ ಚರ್ಚ್ನ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜಾ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ  ವಿಜಯ್ ಲೋಬೊ, ಮಡಂತ್ಯಾರು ಚರ್ಚಿನ ಧರ್ಮಗುರು ವಂದನೀಯ ಬಾಸಿಲ್ ವಾಸ್, ಶ್ರೀ ಲಿಯೋ ರೋಡ್ರಿಗಸ್, ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಮತ್ತು ಶ್ರೀ ಜೆರಾಲ್ಡ್ ಮೊರಾಸ್ ಇವರು ಪೂಜ್ಯ ಡಾ. ಹೆಗ್ಗಡೆಯವರಿಗೆ ಅಭಿನಂದಿಸಿದರು.

ಬೆಳ್ತAಗಡಿ ಮತ್ತು ಬದ್ಯಾರ್‌ನ ಧರ್ಮ ಭಗಿನಿಯರು ಸಿಸ್ಟರ್ ಫ್ಲೊಸ್ಸಿ, ಸಿಸ್ಟರ್ ರಮಿತಾ, ಸಿಸ್ಟರ್ ಜ್ಯೋತ್ಸ್ನಾ, ಸಿಸ್ಟರ್ ಸೇವ್ರಿನ್ ಮತ್ತು ಸಿಸ್ಟರ್ ವಲ್ಸಾ ಅವರು ಡಾ. ಹೆಗ್ಗಡೆಯವರನ್ನು ಅಭಿನಂದಿಸಿ ಪುಷ್ಪಗುಚ್ಚವನ್ನು ಅರ್ಪಿಸಿದರು.

ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ICYM) ಮಂಗಳೂರು ಇದರ ಸಂಚಾಲಕರಾದ ವಂದನೀಯ ಅಶ್ವಿನ್ ಕಾರ್ಡೋಜ, ಅಧ್ಯಕ್ಷ ಜೈಸನ್ ಲಾರೆನ್ಸ್ ಕ್ರಾಸ್ತಾ ಮತ್ತು ನವೀನ್ ಡಿಸೋಜಾ ಪೂಜ್ಯರನ್ನು ಅಭಿನಂದಿಸಿದರು.

 

ಶ್ರೀ ರೋಮನ್ಸ್ ಲೋಬೋ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, “ಡಾ ಹೆಗ್ಗಡೆಯವರು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಪಡೆದಿದ್ದಾರೆ, ಇದನ್ನು 2015 ರಲ್ಲಿ ಜನಸಾಮಾನ್ಯರ ಏಳಿಗೆಗೆ ಅವರ ಪರೋಪಕಾರಿ ಸೇವೆಗಳಿಗೆ ಮತ್ತು ದತ್ತಿ ಕಾರ್ಯಗಳಿಗಾಗಿ ಅವರಿಗೆ ನೀಡಲಾಯಿತು” ಎಂದರು. ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಶ್ರೀ ಹೆಗ್ಗಡೆಯವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ರಾಜ್ಯದ ಪ್ರಾತಿನಿಧ್ಯವನ್ನು ವಿಸ್ತರಿಸುತ್ತಾರೆ. ಎಂದು ಅವರು ಉಲ್ಲೇಖಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ನಿಷ್ಠಾವಂತ ಪರೋಪಕಾರಿಯಾದ ಪೂಜ್ಯರು ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗದ ಮತ್ತು ಸ್ತಿç-ಸಬಲೀಕರಣದ ಉಪಕ್ರಮಗಳನ್ನು ರಾಷ್ಟçಮಟ್ತದಲ್ಲಿ ವಿಸ್ತರಿಸುವ ಮೂಲಕ ಆವರ ಸೇವೆ ದೇಶದೆಲ್ಲೆಡೆ ವಿಸ್ತರಿಸಲಿ ಎಂದು ಶ್ರಿ ಲೋಬೊ ಹಾರೈಸಿದರು. 

 
Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email