Search
Close this search box.

Bishop celebrates Christmas with Journalists and Media reporters. Calls to learn the art of loving

❤️ Spread the love ❤️ |

MANGALURU, DEC 23: Most Rev. Dr Peter Paul Saldanha, Bishop of Mangalore celebrated Christmas with journalists and media fraternity  during a press meet held today December 23, 2022 on the occasion of Christmas at Bishop’s House, Mangaluru.  

Delivering his Christmas mesage, Bishop Peter Paul Saldanha said, “Christmas invites us to learn the art of loving.” Further he said, “God became human to teach us the art of loving and self-giving. He has a human face, to help us acquire a divine face. The child born in simplicity and poverty raises up our hope by giving us a call to change our ways towards innocence, and love.” 

Rev. Fr J. B Saldanha and Mr Roy Castelino, the PROs of Mangalore Diocese, Dr John DSilva, Diocesan Pastoral Parishad Secretary, Mr Elias Fernandes, Media representative, Rev. Fr Anil Ivan Fernandes, Director, Canara Communication Centre,  Rev. Fr Maxim Rosario, Estate Manager, Rev. Fr Trishan Dsouza, Bishop’s Secretary and Fr Valerian Fernandes and Fr Rupesh Madtha editors of Raknno weekly were present among the journalists and media reporters.

Click the photos to view them with Full Resoloution

Bishop will be celebrating the Christmas eve mass at Our Lady of Holy Rosary Cathedral, Rosario, Mangaluru on Saturday, December 24, 2022 at 7.30 p.m.

Read the full message of Bishop

CHRISTMAS: A CALL TO LEARN THE ART OF LOVING

My dear Friends,

Warm Greetings of Christmas. Thank you for coming over to share in our joy.  When we say Christmas the first thought that comes to our mind is joy and enthusiasm; colorful lights, stars and decoration draw our attention. Another thing that catches our attention is the little Babe in the crib. There you experience simplicity and Peace. It is said, small is beautiful. Beautiful attracts us. God has become small, a beautiful babe, and he attracts us. He draws us to himself to learn from him the art of love. Contemplating Jesus’ life, Swami Vivekananda said: “Had I lived in Palestine, in the days of Jesus of Nazareth, I would have washed his feet, not with my tears, but with my heart’s blood!”. He founded the Ramakrishna Mission on the eve of Christmas.

Like Swami Vivekananda, Mahatma Gandhi also cherished the person and teaching of Jesus. Gandhi forgave those who hurt him as Jesus forgave those who killed him. For a world beset with many contradictions, Gandhi showed the way of love and forgiveness. He identified seven deadly sins which are rampant even today: wealth without work, pleasure without conscience, science without humanity, knowledge without character, politics without principle, commerce without morality and worship without sacrifice. Divine love alone can raise us up to come out of this chaos and corruption which affects our society.

The effect of corruption “a deadly cancer” is very visible. It deadens conscience. In the print, social and digital media we see every day instances of hatred, violence, injustice and brutality. Desire to become powerful and rich at all costs is the predominant thought on which the world runs. Life seems to be money-centred. God is out of the picture. Religion seems to be a mere superficial show. As a result, people in general do not mourn; they do not shed tears when they see a tragedy and that is a matter of concern. Instead some find comfort only in photographing, videographing, and forwarding brutal messages. Why is the conscience deadened in spite of all religious practices? What message does Lord Jesus give us in these situations?

Jesus asks us to realize our true nature. We are created for love, not for hatred. God is love and the enemy of God promotes hatred. Love is heaven and hatred is hell. God became human to teach us the art of loving and self-giving. He has a human face, to help us acquire a divine face. The child born in simplicity and poverty raises up our hope by giving us a call to change our ways towards innocence, and love. Among all virtues love is supreme and it lasts forever. May Lord Jesus generate true love among us. Christian manifests love and service. Some people misguide the gullible to look at the followers of Christ with suspicion. But a true Christian loves as the Lord loved us. Those who promote hatred are, destroying themselves before they destroy others. They do not have God in them and therefore no hope either.

I warmly greet you for this Christmas. May the birth of Jesus our Saviour fill into your life goodness and love. Remember, love alone is credible. When you love, you become attractive. May this Christmas make you champions of love. Happy Christmas to you and Blessed New Year 2023.

 

Most Rev. Dr Peter Paul Saldanha

Bishop of Mangalore

ಕ್ರಿಸ್‌ಮಸ್: ಪ್ರೀತಿಸುವ ಕಲೆಯನ್ನು ಕಲಿಯಲು ಕರೆ

ನನ್ನ ಆತ್ಮೀಯ ಸ್ನೇಹಿತರೇ,
ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಿಸ್ಮಸ್ ಎಂದಾಕ್ಷಣ ಮೊದಲ ಅನಿಸಿಕೆ ಸಂತೋಷ ಹಾಗೂ ಉತ್ಸಾಹ. ವಿದ್ಯುತಾಲಂಕಾರಗಳು, ರಂಗುರoಗಿನ ವಾತಾವರಣ. ಇನ್ನೊಂದು ಮನ ಸೆಳೆಯುವ ದೃಶ್ಯವೆಂದರೆ ದನದ ಕೊಟ್ಟಿಗೆಯಲ್ಲಿನ ಗೋದಲಿಯಲ್ಲಿ ಹುಟ್ಟಿದ ಬಾಲಯೇಸು. ಅಲ್ಲಿ ನೆಲೆಸಿದೆ ಸರಳತೆ ಹಾಗೂ ಶಾಂತತೆ. ಈ ದಿನ ನಮ್ಮ ಸಂತೋಷದಲ್ಲಿ ಭಾಗಿಯಾಗಲು ಬಂದಿದ್ದಕ್ಕಾಗಿ ಧನ್ಯವಾದಗಳು. “ಎನಗಿಂತ ಕಿರಿಯರಿಲ್ಲ” ಎಂಬoತೆ ದೇವರು ಆತೀ ಸಣ್ಣವರಾಗಿ ಮಾನವರ ನಡುವೆ ಜನಿಸಿದರು. ಕೊಟ್ಟಿಗೆಯಲ್ಲಿ ಯೇಸುವಿನ ಜನನವು ನಮ್ಮ ಗಮನವನ್ನು ಸೆಳೆಯುತ್ತದೆ. ಚಿಕ್ಕದು, ಸುಂದರ ಎಂದು ಹೇಳಲಾಗುತ್ತದೆ. ಯಾವುದು ಸುಂದರ, ಅದು ನಮ್ಮನ್ನು ಆಕರ್ಷಿಸುತ್ತದೆ. ನಮ್ಮನ್ನು ಆತೀಯಾಗಿ ಆಕರ್ಷಿಸುವ ಸುಂದರವಾದ ಕಂದ- ಬಾಲ ಯೇಸು, ದೇವರು ಸಣ್ಣವನಾಗಿದ್ದಾನೆ. ಅವನಿಂದ ಪ್ರೀತಿಯ ಕಲೆಯನ್ನು ಕಲಿಯಲು ಅವನು ನಮ್ಮನ್ನು ಇಂದು ತನ್ನತ್ತ ಸೆಳೆಯುತ್ತಿದ್ದಾನೆ. ಯೇಸುವಿನ ಜೀವನವನ್ನು ಆವಲೋಕಿಸುತ್ತಾ, ಸ್ವಾಮಿ ವಿವೇಕಾನಂದರು ಹೇಳಿದರು: “ನಜರೇತಿನ ಯೇಸುವಿನ ದಿನಗಳಲ್ಲಿ, ನಾನು ಪ್ಯಾಲೆಸ್ತೀನ್‌ನಲ್ಲಿ ವಾಸಿಸುತ್ತಿದ್ದರೆ, ನಾನು ಅವರ ಪಾದಗಳನ್ನು ನನ್ನ ಕಣ್ಣೀರಿನಿಂದ ಅಲ್ಲ, ನನ್ನ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ!”. ಅವರು ಕ್ರಿಸ್ಮಸ್ ಮುನ್ನಾದಿನದಂದು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಯೇಸುಕ್ರಿಸ್ತರ ಬೋಧನೆಗಳನ್ನು ಸ್ವಾಮಿ ವಿವೇಕಾನಂದರAತೆ, ಮಹಾತ್ಮಾ ಗಾಂಧೀಜಿಯವರು ಇಷ್ಟಪಟ್ಟರು ಮಾತ್ರವಲ್ಲ, ಅವರ “ಅಹಿಂಸಾ” ಚಳುವಳಿಯು ಯೇಸುಕ್ರಿಸ್ತರ ಉಪದೇಶಗಳಿಗೆ ಸರಿಸಮಾನಾಗಿಯೇ ಇತ್ತು. ಯೇಸುವು, ತನ್ನನು ಶಿಲುಬೆಗೇರಿಸಿ ಕೊಂದವರನ್ನು ಕ್ಷಮಿಸಿದಂತೆ, ಗಾಂಧೀಜಿ ಕೂಡ ತನ್ನ ವೈರಿಗಳ ವಿರುದ್ಧ ಪ್ರತೀಕಾರ ಬಯಸಲಿಲ್ಲ. ಪ್ರೀತಿ ಹಾಗೂ ಕ್ಷಮೆಗಳು ಯೇಸುವಿನ ಬೋಧನೆಯಲ್ಲಿ ಪ್ರಾಬಲ್ಯವಹಿಸಿದರೆ, ಅವುಗಳ ನಿಜವಾದ ಪರಿಪಾಲನೆಯನ್ನು ನಾವು ಗಾಂಧೀಜಿಯವರ ಜೀವನದಲ್ಲಿ ಕಾಣುತ್ತೇವೆ. ಗಾಂಧೀಜಿಯವರು ತಮ್ಮ ಸಮಕಾಲೀನ ಸಮಾಜದ ಕುಂದು ಕೊರತೆಗಳನ್ನು ಸಪ್ತ ಪಾತಕಗಳ ಮೂಲಕ ಗುರುತಿಸಿಕೊಟ್ಟರು: ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ÷್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ ಹಾಗೂ ತ್ಯಾಗವಿಲ್ಲದ ಧರ್ಮ. ಅಗಾಧ ಆಧ್ಯಾತ್ಮಿಕ ಶಕ್ತಿಯು ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಬರಲು ನೆರವಾಗಬಲ್ಲದು. ನೈಜ ದೈವಭಕ್ತಿ ಮಾತ್ರ ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಅತಿರೇಕಗಳಿಂದ ರಕ್ಷಿಸಬಲ್ಲುದು.
ನಮ್ಮ ಸುತ್ತಮುತ್ತಲೂ ಭ್ರçಷ್ಟಾಚಾರವು ‘ಕ್ಯಾನ್ಸರ್ ರೋಗ’ ದಂತೆ ತಾಂಡವಾಡುತ್ತಿದೆ. ಇದು ನಮ್ಮ ಆತ್ಮಸಾಕ್ಷಿಯನ್ನು ಸಾಯಿಸುತ್ತಿದೆೆ. ದೃಶ್ಯ ಮಾಧ್ಯಮ, ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ನಾವು ದ್ವೇಷ, ಅನ್ಯಾಯ ಹಾಗೂ ಕ್ರೂರತೆಗಳ ನಿದರ್ಶನಗಳನ್ನು ಕಾಣುತ್ತಾ ಇದ್ದೇವೆ. ಬಲಾಢ್ಯರು ಹಾಗೂ ಧನಾಡ್ಯರಾಗುವುದೇ ನಮ್ಮ ಧ್ಯೇಯ ಎಂದು ಭಾಸವಾಗುತ್ತಿದೆ. ಎಲ್ಲವು ಧನಲಾಭದ ಸುತ್ತಮುತ್ತ ಕೇಂದ್ರೀಕ್ರತವಾಗಿದೆ. ಧರ್ಮವು ಕೇವಲ ಬಾಹ್ಯಾಚಾರಣೆಗಳಿಗೆ ಸೀಮಿತವಾಗಿ, ನಮ್ಮ ಮನ: ಪರಿವರ್ತನೆಗೋಳಿಸುವಲ್ಲಿ ವಿಫಲವಾಗಿದೆ. ಇದಕ್ಕೂ ಮಿಗಿಲಾಗಿ ದುಃಖ ಹಾಗೂ ಹತಾಶೆಯ ವಿಷಯವೇನೆಂದರೆ, ಸುತ್ತಮುತ್ತಲಿನ ಅತಿರೇಕಗಳು ನಮ್ಮನ್ನು ವಿಚಲಿತಗೊಳಿಸದೆ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೇವಲ ಫಾರ್ವರ್ಡ್ ಮಾಡುವುದರಲ್ಲಿ ನಾವು ಸೀಮಿತರಾಗಿದ್ದೇವೆ. ನಮ್ಮ ಆತ್ಮ ಸಾಕ್ಷಿಗಳು ನಿಷ್ಕ್ರಿಯವಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡತನ ಹಾಗೂ ಸರಳತೆಯಲ್ಲಿ ಜನಿಸಿದ ಯೇಸುವು ನೀಡುವ ಸಂದೇಶವಾದರೂ ಏನು?
ನಮ್ಮ ನಿಜವಾದ ಸ್ವಭಾವವನ್ನು ಅರಿತುಕೊಳ್ಳುವಂತೆ ಯೇಸು ಇಂದು ಬಯಸುತ್ತಾರೆ. ನಾವು ಪ್ರೀತಿಗಾಗಿ ರಚಿಸಲ್ಪಟ್ಟಿದ್ದೇವೆ, ದ್ವೇಷಕ್ಕಾಗಿ ಅಲ್ಲ. ದೇವರು ಪ್ರೀತಿ ಸ್ವರೂಪರು. ಅವರನ್ನು ದ್ವೇಷಿಸುವವರು, ದ್ವೇಷವನ್ನೆ ಉತ್ತೇಜಿಸುತ್ತಾರೆ. ಪ್ರೀತಿಯೇ ಸ್ವರ್ಗ ಮತ್ತು ದ್ವೇಷವೇ ನರಕ. ಪ್ರೀತಿಸುವ ಮತ್ತು ಸ್ವ-ತ್ಯಾಗ ಕೊಡುವ ಕಲೆಯನ್ನು ನಮಗೆ ಕಲಿಸಲು ದೇವರು ಮಾನವನಾದನು. ದೈವಿಕ ಮುಖವನ್ನು ಪಡೆಯಲು ನಮಗೆ ಸಹಾಯ ಮಾಡಲು ಅವರು ಮಾನವ ಮುಖವನ್ನು ಹೊಂದಿದ್ದಾರೆ. ಸರಳತೆ ಮತ್ತು ಬಡತನದಲ್ಲಿ ಜನಿಸಿದ ಮಗು ಮುಗ್ಧತೆ ಮತ್ತು ಪ್ರೀತಿಯ ಕಡೆಗೆ ನಮ್ಮ ಮಾರ್ಗಗಳನ್ನು ಬದಲಾಯಿಸಲು ಕರೆ ನೀಡುವ ಮೂಲಕ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಸದ್ಗುಣಗಳಲ್ಲಿ ಪ್ರೀತಿಯು ಸರ್ವಶ್ರೇಷ್ಠವಾಗಿದೆ ಮತ್ತು ಅದು ಶಾಶ್ವತವಾಗಿರುತ್ತದೆ. ಯೇಸು ಸ್ವಾಮಿ ನಮ್ಮಲ್ಲಿ ನಿಜವಾದ ಪ್ರೀತಿಯನ್ನು ಹುಟ್ಟುಹಾಕಲಿ. ಪ್ರತಿಯೊಬ್ಬ ಕ್ರೆಸ್ತ ಪ್ರೀತಿ ಮತ್ತು ಸೇವೆಯನ್ನು ವ್ಯಕ್ತಪಡಿಸುತ್ತಾನೆ. ಕೆಲವು ಜನರು ಕ್ರಿಸ್ತನ ಅನುಯಾಯಿಗಳನ್ನು ಅನುಮಾನದಿಂದ ನೋಡಲು ಮೋಸಗಾರರಾಗಿ ದಾರಿ ತಪ್ಪಿಸುತ್ತಾರೆ. ಆದರೆ ಕರ್ತನು ನಮ್ಮನ್ನು ಪ್ರೀತಿಸಿದಂತೆ ನಿಜವಾದ ಕ್ರೈಸ್ತನು ಪ್ರೀತಿಸುತ್ತಾನೆ. ದ್ವೇಷವನ್ನು ಉತ್ತೇಜಿಸುವವರು ಇತರರನ್ನು ನಾಶಮಾಡುವ ಮೊದಲು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅವರಲ್ಲಿ ದೇವರಿಲ್ಲ ಮತ್ತು ಆವರಲ್ಲಿ ಭರವಸೆಯೂ ಇಲ್ಲ.
ಈ ಕ್ರಿಸ್ಮಸ್ ಹಬ್ಬಕ್ಕೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಸಮಾಜಕ್ಕೆ ಮಾಡುವ ಸತ್ಯವನ್ನು ಎತ್ತಿ ಹಿಡಿಯುವ ಸೇವೆಗೆ ಋಣಿಯಾಗಿದ್ದೇನೆ. ನಮ್ಮ ರಕ್ಷಕನಾದ ಯೇಸುವಿನ ಜನನವು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯತನ ಮತ್ತು ಪ್ರೀತಿಯನ್ನು ತುಂಬಲಿ. ನೆನಪಿಡಿ, ಪ್ರೀತಿ ಮಾತ್ರ ವಿಶ್ವಾಸಾರ್ಹವಾಗಿದೆ. ನೀವು ಪ್ರೀತಿಸಿದಾಗ, ನೀವು ಆಕರ್ಷಕರಾಗುತ್ತೀರಿ. ಈ ಕ್ರಿಸ್ಮಸ್ ನಿಮ್ಮನ್ನು ಪ್ರೀತಿಯ ದ್ಯೋತಕಗಳನ್ನಾಗಿ ಮಾಡಲಿ. ನಿಮಗೆ ಕ್ರಿಸ್ಮಸ್ ಹಬ್ಬದ ಮತ್ತು ಹೊಸ ವರ್ಷ 2023 ಶುಭಾಶಯಗಳು.

ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಕ್ಷೇತ್ರ

Picture of Director CCC Admin
Director CCC Admin

Post a comment