Search
Close this search box.

Press Release

Stay informed about the latest news and announcements from the Diocese of Mangalore

Diocese of Mangalore disowns unofficial Catholic Representation by Robert Rosario

ರಾಬರ್ಟ್ ರೊಸಾರಿಯೊ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕೃತ ಕ್ಯಾಥೊಲಿಕ್ ಪ್ರತಿನಿಧಿ ಅಲ್ಲ

ಪತ್ರಿಕಾ ಪ್ರಕಟನೆಗಾಗಿ :

ರಾಬರ್ಟ್ ರೊಸಾರಿಯೊ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕೃತ ಕ್ಯಾಥೊಲಿಕ್ ಪ್ರತಿನಿಧಿ ಅಲ್ಲ

ಮಂಗಳೂರು, 04.03.2024 : ತನ್ನನ್ನು ತಾನು ಕ್ಯಾಥೊಲಿಕ್ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಮತ್ತು ಅಧಿಕೃತ ಅನುಮತಿಯಿಲ್ಲದೆ ವಿವಿಧ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಿರುವ ರಾಬರ್ಟ್ ರೊಸಾರಿಯೊ ಅವರಿಂದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಅಂತರ ಕಾಯ್ದುಕೊಳ್ಳುತ್ತದೆ.

ಕ್ಯಾಥೊಲಿಕ್ ಸಮುದಾಯವನ್ನು ಪ್ರತಿನಿಧಿಸಲು ರಾಬರ್ಟ್ ರೊಸಾರಿಯೊರಿಗೆ ಧರ್ಮಪ್ರಾಂತ್ಯದ ಅಧಿಕೃತ ಅಧಿಕಾರಿಗಳು ಅಧಿಕಾರ ನೀಡಿಲ್ಲ ಅಥವಾ ಅವರನ್ನು ವಿನಂತಿಸಿಲ್ಲ ಎಂದು ಡಯಾಸಿಸ್ ಸ್ಪಷ್ಟಪಡಿಸಲು ಬಯಸುತ್ತದೆ. ವ್ಯಕ್ತಿಗಳು ಸ್ವ ನೆಲೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಬಹುದು, ಆದರೆ ರಾಬರ್ಟ್ ರೊಸಾರಿಯೊ ಎಲ್ಲಾ ಕ್ಯಾಥೋಲಿಕರನ್ನು ಪ್ರತಿನಿಧಿಸುವ ನಾಯಕ ಎಂದು ಹೇಳಿಕೊಳ್ಳುವುದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ದಾರಿಗೆಳೆಯುವಂತಿದೆ.

ಈ ಪತ್ರಿಕಾ ಪ್ರಕಟಣೆಯ ಮೂಲಕ ರಾಬರ್ಟ್ ರೊಸಾರಿಯೊ ಅವರು ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯವು ಒತ್ತಿ ಹೇಳುತ್ತದೆ. ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿಯಾಗಿ ಅವರ ಅಭಿಪ್ರಾಯಗಳು ಅಥವಾ ಹೇಳಿಕೆಗಳನ್ನು ಡಯಾಸಿಸ್ ಅನುಮೋದಿಸುವುದಿಲ್ಲ. ಧರ್ಮಪ್ರಾಂತ್ಯದ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಅಧಿಕೃತ ಅನುಮೋದನೆ ಅಥವಾ ಅಧಿಕಾರವನ್ನು ನೀಡಿದ್ದಾರೆ ಎಂಬ ಯಾವುದೇ ಹೇಳಿಕೆಯಲ್ಲಿ ಹುರುಳಿಲ್ಲ. ಇದು ಸಂಪೂರ್ಣ ಸುಳ್ಳು.

ಕ್ಯಾಥೋಲಿಕ್ ಸಮುದಾಯದ ಪರವಾಗಿ ಮಾತನಾಡುವ ಅಧಿಕಾರವನ್ನು ಅಧಿಕೃತ ಧರ್ಮಪ್ರಾಂತ್ಯದ ಅಧಿಕಾರಿಗಳಿಂದ ಸೂಕ್ತವಾಗಿ ನೇಮಿಸಿದ ಮತ್ತು ಗುರುತಿಸಿದ ವ್ಯಕ್ತಿಗಳು ಮಾತ್ರ ಹೊಂದಿರುತ್ತಾರೆ ಎಂಬುದನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ನೆನಪಿಸಲು ಮಂಗಳೂರು ಧರ್ಮಪ್ರಾಂತ್ಯವು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ. ಇದಕ್ಕೆ ವಿರುದ್ಧವಾದ ಯಾವುದೇ ಪ್ರಾತಿನಿಧ್ಯವನ್ನು ತಪ್ಪು ಮಾಹಿತಿ ಎಂದು ಪರಿಗಣಿಸಬೇಕು ಮತ್ತು ಅದನ್ನು ಧರ್ಮಪ್ರಾಂತ್ಯವು ಅಂಗೀಕರಿಸುವುದಿಲ್ಲ.

ರಾಬರ್ಟ್ ರೊಸಾರಿಯೊ ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿ ಎಂದು ಅನಧಿಕೃತವಾಗಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಮಾಧ್ಯಮ ಮತ್ತು ಸಾರ್ವಜನಿಕರು ಅವರಿಂದ ಅಂತರ ಕಾಯ್ದುಕೊಳ್ಳುವಂತೆ ವಿನಂತಿಸಲಾಗಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ತನ್ನ ಸದಸ್ಯರ ಶೃದ್ಧೆ ಮತ್ತು ನಂಬಿಕೆಗಳನ್ನು ಖಚಿತವಾಗಿ ಪ್ರತಿನಿಧಿಸಲ್ಪಡುವ ಅಧಿಕೃತ ವ್ಯಕ್ತಿಗಳ ಮೂಲಕ ಮಾತ್ರ ನಿಖರ ಮಾಹಿತಿಯನ್ನು ಪ್ರಚಾರ ಮಾಡಲು ಬದ್ಧವಾಗಿದೆ ಎಂದು ಈ ಮೂಲಕ ತಿಳಿಯಪಡಿಸುತ್ತದೆ.

ಹೆಚ್ಚಿನ ಮಾಹಿತಿ ವಿಚಾರಣೆ ಅಥವಾ ಸ್ಪಷ್ಟೀಕರಣಕ್ಕಾಗಿ ದಯವಿಟ್ಟು ಸಂಪರ್ಕಿಸಿ:

ಶ್ರೀ ರಾಯ್ ಕ್ಯಾಸ್ಟಲಿನೊ                                                                                     ವಂ. ಡಾ. ಜೆ. ಬಿ. ಸಲ್ಡಾನ್ಹಾ
ಸಾರ್ವಜನಿಕ ಸಂಪರ್ಕ ಅಧಿಕಾರಿ,                                                                       ಮಂಗಳೂರು ಧರ್ಮಪ್ರಾಂತ್ಯ

Press Release on Manela Church Incident

Picture of Director CCC Admin
Director CCC Admin