Search
Close this search box.

Diocese of Mangalore rejoices with three newly ordained priests

❤️ Spread the love ❤️ |

MANGALURU, APRIL 20: “I have loved you with an everlasting love, I have called you and you are mine”. These words expressed to Prophet Jeremiah have become true in the lives of five deacons who were ordained priests on Thursday, April 20, 2023 by His Excellency Most Rev. Dr Peter Paul Saldanha, Bishop of Mangalore. The ordination ceremony took place at the Rosario Cathedral in the presence of priests, religious and lay faithful with a meaningful celebration.

ಮಂಗ್ಳುರ್ ದಿಯೆಸೆಜಿಕ್ ತೇಗ್ ನವೆ ಯಾಜಕ್

ಮಂಗ್ಳುರ್, ಎಪ್ರಿಲ್ 20: ಜೆಜು ಕ್ರಿಸ್ತ್ ಭಾಸಾಯ್ಲಲೊ ಸೊಡ್ವೊಣ್ದಾರ್: ತೊ ಮಾಖ್ಲಲೊ, ತೆಲಾಯ್ಲಲೊ ಆನಿ ಧಾಡ್ಲಲೊ. ತ್ಯಾಚ್ ಕ್ರಿಸ್ತಾಕ್ ಸಂಸಾರಾರ್ ಸಾಕ್ರಾಮೆoತಾಂತ್ ಹಾಜರ್ ಕರುಂಕ್,

 ತ್ಯಾಚ್ ಕ್ರಿಸ್ತಾಚೆ ನಾಂವಿo ಲೊಕಾಕ್ ಪವಿತ್ರ್ ಕರುಂಕ್ ಆನಿ ತ್ಯಾಚ್ ಕ್ರಿಸ್ತಾಚಿ ಸುವಾರ್ತಾ ಪರ್ಗಟ್ ಕರುಂಕ್ ಮಂಗ್ಳುರ್‌ಚೊ ಬಿಸ್ಪ್ ಆಧಿಕ್ ಮಾನಾಧಿಕ್ ದೊತೊರ್

 ಪೀಟರ್ ಪಾವ್ಲ್ ಸಾಲ್ಡಾನ್ಹಾ ಹಾಂಣಿo ತೆಗಾಂ ಉಮೆದ್ವಾರಾಂಕ್ ತೆಲಾನ್ ಮಾಖುನ್ ಯಾಜಕೀ ಭೆಸಾಕ್ ಉಬರ‍್ಲೆಂ. ಯಾಜಕೀ ದೀಕ್ಷೆಚೊ ಹೊ ದಬಾಜಿಕ್ ಸಂಭ್ರಮ್ ಮಂಗ್ಳುರ್‌ಚ್ಯಾ ರೊಜಾರ್ ಮಾಯೆಚ್ಯಾ ಕಾಥೆದ್ರಾಲಾಂತ್ 2023 ಎಪ್ರಿಲ್ 20 ತಾರೆಕೆರ್ ಸಾಂಜೆರ್ 3 ವೊರಾಂಚೆರ್ ಜಾಲೊ.

“ಯಾಜಕೀ ಭೆಸ್ ದೆವಾಚೆಂ ಉದಾರ್ಥ್ ದೆಣೆಂ ಆನಿ ಮಿಸ್ತೆರ್. ದೀಕ್ಷಾ ಜೊಡ್ಲಲೊ ಹರೆಕ್ ಯಾಜಕ್ ಪವಿತ್ರ‍್ಪಣಾಕ್ ಆಪಯ್ಲಲೊ. ಯಜಕೀ ದೀಕ್ಷೆ ಮಾರಿಫಾತ್  ರ‍್ಚೊ ವಾವ್ರ್ ಹರೇಕಾ ಯಾಜಕಾಕ್ ಆಪ್ಣಾಹ್ಚಾ÷್ಯ ಪವಿತ್ರ‍್ಪಣಾಕ್ ವಾಟ್ ಜಾತಾ. ಆಜ್ ಮಂಗ್ಳುರ್ ದಿಯೆಸೆಜಿಕ್ ದೆವಾನ್ ವಿಂಚ್ಲಲೆ ಆನಿ ಮಾಖ್ಲಲೆ ತೇಗ್ ಯಾಜಕ್ ನವ್ಯಾನ್ ಫಾವೊ ಜಾಲ್ಯಾತ್ ಆಸ್ತಾಂ, ದೆವಾಕ್ ಆಮಿ ಆರ್ಗಾಂ ದಿಂವ್ಯಾo” ಮ್ಹಣ್ ಮಂಗ್ಳುರ್‌ಚೊ ಬಿಸ್ಪ್ ಅ| ಮಾ| ದೊ| ಪೀಟರ್ ಪಾವ್ಲ್ ಸಲ್ಡಾನ್ಹಾ ಉದ್ಗರ‍್ಲೊ.

ಮಾ| ದೊ| ರಾಜೇಶ್ ರೊಜಾರಿಯೊ, ಸೆಮಿನರಿಚೊ ಪ್ರಾದ್ಯಾಪಕ್ ನವ್ಯಾ ಯಜಾಕಾಂಕ್ ಉಲ್ಲಾಸುನ್, “ಯಾಜಕಾಚೊ ವಾವ್ರ್ ಆನಿ ಮಿಸಾಂವ್ ಪವಿತ್ರ್ ಸಭೆಚಾ ಜಿವಿತಾಕ್ ಗರ್ಜೆಚೊ. ಜಾಯ್ತ್ಯಾ ನಿಸ್ವಾರ್ಥಿ, ಸಾಕ್ರಿಫಿಸಾಚ್ಯಾ ಆನಿ ದೆವಾಚ್ಯಾ ಮೊಗಾನ್ ರ‍್ಲಲ್ಯಾ ಯಾಜಕಾಂ ಮಾರಿಫಾತ್ ಕ್ರಿಸ್ತಾಚಿ ಸುವಾರ್ತಾ ಸಗ್ಳ್ಯಾನ್ ಪರ್ಗಟ್ ಜಾಲ್ಯಾ. ಆಮ್ಚ್ಯಾ ತೆಗಾಂ ನವ್ಯಾ ಯಾಜಕಾಂಕ್ ಆಮ್ಚೆ ದಿಯೆಸೆಜಿಚ್ಯಾ ಗೊವ್ಳಿ ಬಾಪಾಂಚೆ ನಾಂವಿo, ನಿವೃತ್ತ್ ಗೊವ್ಳಿ ಬಾಪಾಂಚೆ ನಾಂವಿ, ಯಾಜಕ್, ಧಾರ್ಮಿಕ್ ಭಾವ್-ಭಯ್ಣಿಂ ಆನಿ ಭಾವಾಡ್ತಿ ಲೊಕಾಚೆ ನಾಂವಿo  ಉಲ್ಲಾಸ್ ಪಾಟಯ್ತಾಂ ಆನಿ ಫಳಾಭರಿತ್ ಯಾಜಕಿ ಮಾಣಿಯಾರ್ಪಣ್ ಮಾಗ್ತಾಂ” ಮ್ಹಣಾಲೊ. 

ನವ್ಯಾ ಯಾಜಾಕಾಂಚಿ ಮಟ್ವಿ ವಳಕ್: 

1. ಬಾಪ್ ಅವಿನಾಶ್ ಲೆಸ್ಲಿ ಪಾಯ್ಸ್: ಕಾಟಿಪಳ್ಳಾ ಬಾಳೊಕ್ ಮರಿಯೆಚೆ ಫಿರ್ಗಜೆಚ್ಯಾ ಮಾನೆಸ್ತಿನ್ ಆಂಜೆಲಿನ್ ವೇಗಸ್ ಆನಿ ದೆವಾಧೀನ್ ಲುವಿಸ್ ಪಾಯ್ಸಾಚ್ಯಾ ಕುಟ್ಮಾಂತ್ ದೊಗಾಂ ಭುರ್ಗಾ್ಯಂ ಪಯ್ಕಿ ದುಸ್ರೊ. ವ್ಹಡ್ಲಿ ಭಯ್ಣ್ ಕಾಜಾರಿ. ಬಿ.ಎ. ಸನದ್ ಜೊಡ್ಲಲ್ಯಾ ಬಾಪ್ ಅವಿನಾಶಾನ್ ಕಿರೆಂ ಆನಿ ಕೋರ್ಡೆಲ್ ಫಿರ್ಗಜಾಂನಿ ಗೊವ್ಳಿಕ್ ವಾವ್ರ್ ಕೆಲ್ಲೊ ಅನುಭವ್ ಆಸಾ. ಇಸಾಯಿಯಾ ಪ್ರವಾದಿಚಿಂ ಉತ್ರಾಂ: “ಹಾಂವ್ ಹಾಂಗಾ ಆಸಾಂ, ಮ್ಹಾಕಾ ಧಾಡ್” (6:8) ಆಪ್ಣಾಕ್ ದೇಕ್ ಮ್ಹಣ್ ಸಾಂಗ್ತಾ. ಕ್ರಿಯಾಳ್, ಉರ್ಬೆವಂತ್ ಆನಿ ಖಂಚ್ಯಾಯ್ ವಾವ್ರಾಂತ್ ಆಸಕ್ತ್ ದಾಕೊಂವ್ಚೊ ಬಾಪ್ ಅವಿನಾಶ್ ಜಾಯ್ತ್ಯಾ ತಾಲೆಂತಾoನಿ ಭ ರ‍್ಲಲೊ. ಮಾಯ್ಪಾಸಿ ಸ್ವಭಾವಾಚೊ ತೊ, ಸರ್ವಾಂ ಸಂಗಿo  ಭರ್ಸಾತಾ. ನವೊ ಯಾಜಕ್ ಬಾಪ್ ಅವಿನಾಶಾಕ್ ಆಮ್ಚೆ ಉಲ್ಲಾಸ್ ಪಾಟಯ್ತಾಂವ್.

2. ಬಾಪ್ ಲೋಹಿತ್ ಅಜಯ್ ಮಸ್ಕರೇನಸ್: ವೇಣರ‍್ಚ್ಯಾ ಕ್ರಿಸ್ತ್ ರಾಯಾಚೆ ಫಿರ್ಗಜೆಚ್ಯಾ ಮಾನೆಸ್ತ್ ಫ್ರಾನ್ಸಿಸ್ ಮಸ್ಕರೇನಸ್ ಆನಿ ಮಾನೆಸ್ತಿನ್ ಆಪೊಲಿನ್ ಮಸ್ಕರೇನಾಸಾಚ್ಯಾ ಕುಟ್ಮಾಂತ್ಲೊ ಬಾಪ್ ಲೋಹಿತ್, ತೆಗಾಂ ಭುರ್ಗಾ್ಯಂ ಪಯ್ಕಿ ನಿಮಾಣೊ. ತಾಣೆಂ ಬಿ.ಎಸ್ಸಿ. ಸನದ್ ಆಪ್ಣಾಯ್ಲ್ಯಾ. ಬಾಪ್ ಲೋಹಿತ್ ಶಿಕ್ಪಾಂತ್ ಹುಶಾರ್, ಸ್ವಭಾವಾನ್ ಸಾದೊ ಆನಿ ಚಟುವಟಿಕೊ ಮಾಂಡುನ್ ಹಾಡ್ಚ್ಯಾಂತ್ ಪ್ರವೀಣ್. ದಿಯೆಸೆಜಿಚ್ಯಾ ಗೊವ್ಳಿಕ್ ಕೇಂದ್ರಾoತ್ ಆನಿ ಒಮ್ಜೂರ್ ಫಿರ್ಗಜೆಂತ್ ಗೊವ್ಳಿಕ್ ವಾವ್ರ್ ಕೆಲ್ಲೊ ಅನುಭವ್ ತಾಕಾ ಆಸಾ. “ಮ್ಹಜೆಂ ನಾಂವ್ ಪರ್ಗಟುಂಕ್ ಮ್ಹಜೆಂ ಹಾತೆರ್ ಮ್ಹಣ್ ಹಾಂವೆo  ತುಕಾ ವಿಂಚುನ್ ಕಾಡ್ಲಾ” (ಧ.ಕೃ. 9:15) ಮ್ಹಣ್ ಸಾಂ ಪಾವ್ಲಾಕ್ ಸೊಮ್ಯಾನ್ ಸಾಂಗ್ಲಲಿo  ಉತ್ರಾಂ ಆಪ್ಲಾ÷್ಯ ಯಾಜಕಿ ಜಿವಿತಾಕ್ ಮಾರ್ಗದರ್ಶಕ್ ಮ್ಹಣ್ ಬಾಪ್ ಲೋಹಿತ್ ಮಾನುನ್ ಘೆತಾ. ಹೆರಾಂಚ್ಯಾ ಗರ್ಜಾಂಕ್ ಪಾಂವ್ಚೆo  ಬರೆಂ ಮನ್ ತಾಚೆ ಥಂಯ್ ಆಸಾ. ಬಾಪ್ ಲೋಹಿತಾಕ್ ಆಮಿ ಅಭಿನಂದನ್ ಪಾಟಯ್ತಾಂವ್.

3. ಬಾಪ್ ರೊಬಿನ್ ಜೊಯ್ಸನ್ ಸಾಂತುಮಾಯೊರ್: ಗಾಂವಾನ್ ಸಾಂ ರೊಕಿಚಿ ಫಿರ್ಗಜ್, ನೀರುಡೆ, ತರಿ ತಾಚಿಂ ಆವಯ್ ಬಾಪುಯ್ ಮುಂಬೈoತ್ ಆಸ್‌ಲ್ಲ್ಯಾನ್, ಮಂಗ್ಳುರ್ ಆನಿ ಮುಂಬೈoತ್ ಶಿಕಪ್ ಚಲ್ಲೆಂ. ತೊ ಮಾನೆಸ್ತ್ ರಿಚ್ಚರ್ಡ್ ಜೋನ್ ಸಾಂತುಮಾಯೊರ್ ಆನಿ ಮಾನೆಸ್ತಿನ್ ಲಿನೆಟ್ ತೆರೆಜಾ ಸಾಂತುಮಾಯೊರ್ ಹಾಂಚೊ ಏಕ್ಲೊಚ್ ಪೂತ್. ಬಿ.ಎಸ್.ಡಬ್ಲ್ಯು. ಸನದ್ ಜೊಡ್ಲಲೊ ಬಾಪ್ ರೊಬಿನ್ ಸದಾಂಚ್ ಹಾಸ್ತ್ಯಾ ತೊಂಡಾಚೊ, ಶಿಕ್ಪಾಂತ್ ಮುಕಾರ್ ಆನಿ ಸರ್ವಾಂ ಲಾಗಿಂ ಬರೊ ಸಂಬoಧ್ ದವರ್ಚ್ಯಾ ದೆಣ್ಯಾಂನಿ ರ‍್ಲಾ. ಪುತ್ತರ‍್ಚ್ಯಾ ಸಾಂ ಫಿಲೊಮೆನಾ ಕೊಲೆಜ್ ತಶೆಂಚ್ ಕೂಳೂರ್ ಫಿರ್ಗಜೆಂತ್ ತಾಣೆಂ ಗೊವ್ಳಿಕ್ ವಾವ್ರ್ ಕೆಲಾ.  ಸಾಂ ಪಾವ್ಲಾಚಿಂ ಉತ್ರಾಂ: “ಹಾಸ್ತ್ಯಾ ತೊಂಡಾನ್ ದಿತಲೊ ದೆವಾಕ್ ಮೊಗಾಚೊ” (2 ಕೊರಿಂಥ್ 9:7) ಆಪ್ಣಾಕ್ ಪ್ರೇರಣ್ ಮ್ಹಣ್ ತೊ ಮ್ಹಣ್ತಾ. ವಾವ್ರ್ ಕರುಂಕ್ ಸದಾಂಚ್ ಉರ್ಬಾ ದಾಕೊಂವ್ಚೊ ಆಮ್ಚೊ ನವೊ ಯಾಜಕ್, ಸೆವೆಚ್ಯಾ ಮನೋಭಾವಾನ್ ರ‍್ಲಲೊ. ಬಾಪ್ ರೊಬಿನಾಕ್ ಆಮ್ಚೆ ಶುಭಾಶಯ್ ಪಾಟಯ್ತಾಂವ್.

 

ಮಂಗಳೂರು ಕಥೊಲಿಕ ಧರ್ಮಕ್ಷೇತ್ರ: ಮೂವರು ಯಾಜಕ ಉಮೇದ್ವಾರರಿಗೆ ಗುರು ದೀಕ್ಷೆ 

ವರದಿ: ಫಾ| ಅನಿಲ್ ಫೆರ್ನಾಂಡಿಸ್, ಅಅಅ, ಚಿತ್ರಗಳು: ಸ್ಟಾನ್ಲಿ ಬಂಟ್ವಾಳ

ಮoಗಳೂರು, ಏಪ್ರಿಲ್ 20: ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಗರದ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ 2023ರ ಏಪ್ರಿಲ್ 20ರ ಗುರುವಾರದಂದು ಮೂವರು ಯಾಜಕ ಉಮೇದ್ವಾರಾರಿಗೆ ಯಾಜಕ ದೀಕ್ಷೆ ನೀಡಿದರು. ಈ ದೀಕ್ಷಾವಿಧಿಯು ನೆರೆದ ನೂರಾರು ಧರ್ಮಗುರುಗಳ, ಧಾರ್ಮಿಕ ಭಗಿನಿಯರ ಹಾಗೂ ವಿಶ್ವಾಸಿಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾಟಿಪಳ್ಳ ಚರ್ಚಿನ ವಂದನೀಯ ಅವಿನಾಶ್ ಲೆಸ್ಲಿ ಪಾಯ್ಸ್, ವೇಣೂರು ಚರ್ಚಿನ ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ಮತ್ತು ನೀರುಡೆ ಚರ್ಚಿನ ವಂದನೀಯ ರಾಬಿನ್ ಜಾಯ್ಸನ್ ಸಾಂತುಮಾಯರ್ ಅವರು ನೂತನವಾಗಿ ದೀಕ್ಷೆ ಸ್ವೀಕರಿಸಿದರು. ಮಂಗಳೂರು ಧರ್ಮಕ್ಷೇತ್ರದ ಸಮಸ್ತರು ಹೊಸದಾಗಿ ದೀಕ್ಷೆ ಪಡೆದ ಈ ಮೂವರು ನವ ಯಾಜಕರೊಂದಿಗೆ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಬಲಿಪೂಜೆಯ ಧರ್ಮೋಪದೇಶದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, “ಯಜಕತ್ವವು ಒಂದು ಕೊಡುಗೆ ಹಾಗೂ ರಹಸ್ಯವು. ದೇವರು ಈ ಭಾಗ್ಯವನ್ನು ಉಚಿತವಾಗಿ ನೀಡುವುದರಿಂದ ಆದು ಒಂದು ಕೊಡುಗೆ. ದೇವರು ಯಾಜಕರ ಆಯ್ಕೆ ಮತ್ತು ಕರೆಯನ್ನು ಹೇಗೆ ಮಾಡುತ್ತಾನೆ ಎಂದು ಯಾರಿಗೂ ತಿಳಿದಿಲ್ಲ. ಆದುದ್ದರಿಂದ ಅದು ನಿಗೂಢವಾಗಿದೆ” ಎಂದರು.

“ಪ್ರತಿಯೊಬ್ಬ ದೀಕ್ಷೆ ಪಡೆದ ಯಜಕನು ಪವಿತ್ರತೆಗಾಗಿ ಕರೆಯಲ್ಪಟ್ಟವನು. ಯಜಕರು ಸಂಸ್ಕಾರಗಳನ್ನು ಆಚರಿಸುವ ಮೂಲಕ ಪವಿತ್ರರಾಗುತ್ತಾರೆ. ಯಜಕರ ಪವಿತ್ರತೆಯು ಅವನ ದೌರ್ಬಲ್ಯಗಳನ್ನು ತೆಗೆದುಹಾಕುವುದಿಲ್ಲ. ಆದ್ದರಿಂದ, ಅವನು ತನ್ನನ್ನು ತಾನು ದೇವರಿಗೆ ಒಪ್ಪಿಸುವ ಮೂಲಕ ಮತ್ತು ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಮೂಲಕ ತನ್ನ ದೌರ್ಬಲ್ಯಗಳಲ್ಲಿ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ಪವಿತ್ರತೆಯ ಹಾದಿಯಲ್ಲಿರುವ ಪ್ರತಿಯೊಬ್ಬ ಯಾಜಕನ ವೈಯಕ್ತಿಕ ಧ್ಯೇಯವಾಗುತ್ತದೆ” ಎಂದು ಬಿಷಪ್ ಹೇಳಿದರು,

ಬಲಿಪೂಜೆಯ ಕೊನೆಯಲ್ಲಿ ಜೆಪ್ಪು ಸಂತ ಜೋಸೆಫ್ ಸೆಮಿನರಿ ಪ್ರಾಧ್ಯಾಪಕ ವಂದನೀಯ ಡಾ. ರಾಜೇಶ್ ರೊಸಾರಿಯೊ ನೂತನವಾಗಿ ದೀಕ್ಷೆ ಪಡೆದ ಯಜಕರನ್ನು ಅಭಿನಂದಿಸಿದರು. 

ನವಯಾಜಕರಲ್ಲಿ ಒಬ್ಬರಾದ ವಂದನೀಯ ರಾಬಿನ್ ಸಾಂತುಮಾಯರ್ ಅವರು, “ನನ್ನ ಜೀವನದ ಈ ಮಹತ್ತರ ದಿನಕ್ಕೆ ಸಾಕ್ಷಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಯಾಜಕಾಭಿಷೇಕ ನನ್ನ ಜೀವನದಲ್ಲಿ ನಾನು ಪಡೆದ ದೊಡ್ಡ ವರ. ನನ್ನನ್ನು ತನ್ನದಾಗಿಸಿಕೊಂಡ ಸರ್ವಶಕ್ತ ದೇವರಿಗೆ ಕೋಟ್ಯಂತರ ಧನ್ಯವಾದಗಳು.  ನಾನು, ನನ್ನ ಸಹ ದೀಕ್ಷೆ ಪಡೆದ ಯಜಕರೊಂದಿಗೆ, ಬಿಷಪ್ ಮತ್ತು ಸಮಸ್ತ ಧರ್ಮಕ್ಷೇತ್ರಕ್ಕೆ ಕೃತಜ್ಞರಾಗಿರುತ್ತೇನೆ. ನನ್ನ ಸಂಪೂರ್ಣ ಜೀವನವನ್ನು ಯೇಸುವಿಗೆ ಮುಡಿಪಾಗಿಸುತ್ತೇನೆ.”

ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಅವರು ನವ ಯಾಜಕರ ಪೋಷಕರಿಗೆ, ತರಭೇತಿ ನೀಡಿದ ಗುರುಮಠದ ಪ್ರಾದ್ಯಪಕರಿಗೆ ಎಲ್ಲರಿಗೂ ಧನ್ಯವಾದ ಹೇಳಿದರು.

 Live stream Link 

🔴🅻🅸🆅🅴 | Priestly Ordination | Dn Avinash, Dn Lohith & Dn Robin| ಯಾಜಕೀ ದೀಕ್ಷೆಚೊ  ಸಂಭ್ರಮ್- ಮಂಗ್ಳುರ್ ದಿಯೆಸೆಜ್  20.4.2023 | 3PM |  Rosario Cathedral

 Click Here: https://youtube.com/live/Rca3bt-2yEc

Fr Avinash Lesly Pais, Katipalla, Fr Lohith Ajay Mascarenhas, Venur and Fr Robin Joyson Santhumayer were the newly ordained priests. The Diocese of Mangalore (DOM) rejoiced with happiness for the gift of Priesthood and thanked the Lord for anointing these three newly ordained priests.

In his homily Bishop Peter Paul Saldanha invited the three ordained ministers to achieve holiness through the order of priesthood.  Bishop said, “Priesthood is a gift and a mystery. It is a gift because God freely gives it. It is a mystery because nobody knows how God makes this choice and call.”

At the end of the Eucharistic Mass, Rev. Dr  Rajesh Rosario, Professor, St Joseph Seminary, Jeppu introduced the newly ordained priests. He said, “Today the Church rejoices with heartfelt gratitude for the immense gift which priests represent through their hidden and tireless service. The Diocese of Mangalore which has grown in leaps and bounds through the dedication of innumerable priests exalts in the Lord today with adding of three more priests with a prayer that they remain faithful to their vocation as “friends of Christ”, whom he has called by name, chosen and sent as witnessed in the rite of Ordination.” 

Rev. Robin Santhumayer, one among the ordained said, “I am extremely glad to witness this great day of my life. Priesthood is the greatest gift that I have received in my life. A trillion thanks to God Almighty who has made me his own. I, along with my fellow ordained priests, remain grateful to the bishop and the diocese. I resolve to dedicate my entire life to Jesus and His mission “

Bishop Peter Paul Saldanha thanked their parents, parish priests, formators, ministry guides and all those involved in their formation. 

Very Rev. Msgr Maxim L. Noronha, Vicar General, Very Rev. Victor George DSouza, Chancellor, Very Rev. Dr Ronald Serrao, Rector of the Seminary, Rev. Fr Alfred J Pinto, Rector of the Cathedral and a band of priests were present.  

Choir was led by the Rosario Church Choir group.  Rev. Fr Vijay Machado, Director, DBCLC, Bajjodi animated the ordination ceremony.

Fr Avinash Leshly Pais was born on 28 November 1994 in the family of Late Luis Pais and Mrs Anjeline Veigas from Infant Mary Church, Katipalla.  He has an older sister and has a graduation in Arts (BA.). He completed his seminary formation at St Joseph’s Seminary, Jeppu.  He did his regency at Our Lady of Remedies Church, Kirem and his diaconal ministry at Holy Cross Church, Cordel. The motto for his priestly life is: “Here am I. Send me!” (Isaiah 6:8). His gentleness and commitment may bring many people to God and to believe in Christ.

Fr Lohith Ajay Mascrenhas was born on 05 November 1994 in the family of Mr Francis Mascarenhas and Mrs Apoline Mascarenhas from Christ the King Church, Venur. He is the youngest among his three siblings and has completed his graduation in Science (B.Sc). He did his regency at Pastoral Institute, Bajjodi and his diaconal ministry at Holy Family Church, Omzoor. He completed his seminary formation at St Joseph’s Seminary, Jeppu. The motto for his priestly life is “”Go, because I have chosen you as my instrument  to serve me and to proclaim my name” (Acts 9:15). His dynamism and service mindedness may become an expression of God’s experience to the people he will serve.

Fr Robin Joyson Santhumayer was born on 29 March 1995 in the family of Mr Richard Santhumayer and Mrs Linet Thersa Santhumayer  from St Roque’s Church, Neerude. He is the only son and has completed his graduation in Social Work (B.S.W). He completed his seminary formation at St Joseph’s Seminary, Jeppu. He did his regency at St Philomena College, Putur  and his diaconal ministry at St Antony’s Church, Kulur,  known for his cheerful and warm nature with leadership qualities, his chosen motto is “for God loveth a cheerful giver” 2 Cor 9:17. The heart of Jesus which was opened on the Cross to enkindle selfless love in his heart may communicate the same passionate love through his priestly ministry.

Report by: Fr Anil Fernandes, CCC

Photos by: Stanly Bantwal

Picture of Director CCC Admin
Director CCC Admin

Comment(1)

  1. cynthiya seema d souza says:

    Congration dear father💐💐💐💐

Post a comment