­
Search
Close this search box.

ನಾರಾವಿ ಐ.ಸಿ.ವೈ.ಎಮ್ ಘಟಕದ ಬೆಳ್ಳಿಹಬ್ಬ ಸಂಭ್ರಮ

❤️ Spread the love ❤️ |

April 4, 2017: ಸಂತ ಅಂತೋನಿ ಚರ್ಚ್ ನಾರಾವಿ, ಇಲ್ಲಿನ ಭಾರತೀಯ ಕಥೋಲಿಕ ಯುವ ಸಂಚಲನ (ಐ.ಸಿ.ವೈ.ಎಮ್) ಇದರ ಬೆಳ್ಳಿಹಬ್ಬ ಸಮಾರೋಪ ಕಾರ್ಯಕ್ರಮವು ನಡೆಯಿತು. ಇದರ ಅಧ್ಯಕ್ಷತೆಯನ್ನು ಧರ್ಮಗುರುಗಳಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹೊರವರು ವಹಿಸಿ, ಯುವಜನರು ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳದೆ ಸದಾ ಆಶಾವಾದಿಗಳಾಗಿ ಬಾಳಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್. ನಿರ್ದೇಶಕರಾದ ವಂದನೀಯ ಸ್ವಾಮಿ ರೊನಾಲ್ಡ್ ಡಿ’ಸೋಜರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇನ್ನೋರ್ವ ಅತಿಥಿ ಶ್ರೀ ಜೋಯೆಲ್ ಮೆಂಡೋನ್ಸ, ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯರು ಆಗಮಿಸಿ ಯುವಜನರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿ ಕರೆ ನೀಡಿದರು. ವೇದಿಕೆಯಲ್ಲಿ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹ, ಐ.ಸಿ.ವೈ.ಎಮ್.ನ ಕೇಂದ್ರೀಯ ಅಧ್ಯಕ್ಷ ಶ್ರೀ ಜಾಕ್ಸನ್ ಡಿ’ಕೋಸ್ತ ಮತ್ತಿತರರು ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಘಟಕದ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ಸ್ವಾಗತಿಸಿ, ಐ.ಸಿ.ವೈ.ಎಮ್. ಅಧ್ಯಕ್ಷ ಶ್ರೀ ರೋವಿನ್ ಕಡೋಝ ವಂದಿಸಿದರು. ಶ್ರೀ ಜೋವೆಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯುವಜನರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಐಟಿ ದೇವದಾಸ್ ಕಾಪಿಕಾಡ್‍ರವರ ‘ಬಂಗಾರ್’ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.

Picture of Director CCC Admin
Director CCC Admin