ಸಂತ ಆಂತೋನಿ ಆಶ್ರಮದ ವತಿಯಿಂದ ಪತ್ರಕರ್ತರಿಗೆ ಮತ್ತು ಅರ್ಹರಿಗೆ ಆಹಾರ ಕಿಟ್ ವಿತರಣೆ

❤️ Spread the love ❤️ |

Media Release
Photos : Stanly Bantwal

ಮುಂಬಯಿ (ಆರ್ಬಿಐ), ಜೂ. 13, 2021 : ಇಂದಿಲ್ಲಿ (ಬಾನುವಾರ) ಮಂಗಳೂರು ಜೆಪ್ಪು ಇಲ್ಲಿನ ಸಂತ ಆಂತೋನಿ ಅವರ ಆಶ್ರಮದಲ್ಲಿ ವಾರ್ಷಿಕ ಹಬ್ಬ ಸಂಭ್ರಮಿಸಲಾಯಿತು. ಆ ಪ್ರಯುಕ್ತ ಸಂಜೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ (ಬಿಷಪ್) ಅತೀ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪತ್ರಕರ್ತರಿಗೆ ಮತ್ತು ಅರ್ಹರಿಗೆ ಆಹಾರ-ಧಾನ್ಯದ ಕಿಟ್ ವಿತರಿಸಿ ಹರಸಿದರು.

ಸ್ಟೇನ್ಲಿ ಬಂಟ್ವಾಳ್ (ಬಿಕರ್ಣಕಟ್ಟೆ) ಇವರು ಕಿಟ್ ವಿತರಣಾ ನೇತೃತ್ವ ವಹಿಸಿದ್ದರು. ಫಾ| ರೋಶನ್, ಡಿಕೆಕೆಡಬ್ಲ್ಯೂ ಜೆಎಸ್ ಕೇಂದ್ರ ಸಮಿತಿ ಸದಸ್ಯ ಬಾಳ ಜಗನ್ನಾಥ್ ಶೆಟ್ಟಿ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದು ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email