Search
Close this search box.

ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

❤️ Spread the love ❤️ |

ಕಿನ್ನಿಗೋಳಿ, Oct 24, 2018 : ಯುವಜನರನ್ನು ಧಾರ್ಮಿಕ ಶಿಸ್ತು ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಬೇಕು ಎಂದು ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ವಂ. ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಹೇಳಿದರು.

ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಮಾತನಾಡಿದರು.

ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ಫಾ. ಮೆಲ್ವಿನ್ ನೊರೊನ್ಹಾ ಮಾತನಾಡಿ ತ್ಯಾಗಮಯ ವಿಶ್ವಾಸಭರಿತ ಕ್ಷಮಾಗುಣದ ದಾಂಪತ್ಯ ಜೀವನವೇ ನಿಜವಾದ ಸುಖಮಯ ಬದುಕಾಗುತ್ತದೆ ಎಂದರು.

ಪ್ರವೀಣ್ ಸುರತ್ಕಲ್-ಡಯಾನ ಪಾವಂಜೆ, ಜೋಸೆಫ್ ಮಡಿಕೇರಿ-ಬೇಬಿ ಪಾಂಗಳ, ರೋಡ್ನಿ ಮಂಗಳೂರು-ಶೀಲಾ ಕೆರೆಕಾಡು, ಇಗ್ನೇಷಿಯಸ್ ಸಾಸ್ತಾನ-ಜಯಮ್ಮ ಶಿಡ್ಲಗಟ್ಟ, ರೋಜಾರಿಯೋ ಕಾಸ್ಸಿಯಾ-ತಾರ ಕಾಟಿಪಳ್ಳ, ಡೇನಿಯಲ್ ಬಾಗಲಕೋಟ-ಸುಜಾತ ಹಾಸನ, ಸ್ಟೀವನ್ ಪೆರ್ಮನ್ನೂರು-ಬಬಿತಾ ಚಿಕ್ಕಮಗಳೂರು ಒಟ್ಟು 7 ಜೋಡಿಗಳು ದಾಂಪತ್ಯ ಜೀವನ ಸ್ವೀಕರಿಸಿದರು.

ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ಮಾಥ್ಯೂ ವಾಸ್, ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಸಹಾಯಕ ಧರ್ಮಗುರು ಫಾ. ರಾಹುಲ್ ಡಿಸೋಜ, ಭಗಿನಿ ಮಾರ್ಗರೇಟ್, ಪಕ್ಷಿಕೆರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜಾಕ್ಸನ್ ಸಲ್ಡಾನ್ಹ, ಕಾರ್ಯದರ್ಶಿ ಕರೊಲ್ ಮತ್ತಿತರರು ಉಪಸ್ಥಿತರಿದ್ದರು.

ರಾಬರ್ಟ್ ಡಿಸೋಜ ಕಾಯಕ್ರಮ ನಿರೂಪಿಸಿದರು

Picture of Director CCC Admin
Director CCC Admin