ಮಂಗಳೂರು, ಜು. 19: ಉಡುಪಿಯ ಶೀರೂರು ಮಠದ ಸ್ವಾಮೀಜಿ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದ ಅವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಮತ್ತು ನಿಯೋಜಿತ ಬಿಷಪ್ ರೆ|ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರ ಅಸಾಮಾನ್ಯ ಸ್ವಾಮೀಜಿ ಎಂಬುದಾಗಿ ಜನಪ್ರಿಯರಾಗಿದ್ದ ಅವರು ತಮ್ಮ ಪರ್ಯಾಯದ ಅವಧಿಯಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದರು. ಶೀರೂರು ಸ್ವಾಮೀಜಿ ಅವರು ಎಲ್ಲಾ ಸಮುದಾಯದವರ ಜತೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಹೊಂದಿದ್ದು, ಸಾಮಾಜಿಕ ಸೌಹಾರ್ದತೆಗೆ ಶ್ರಮಿಸಿದ್ದರು ಎಂದು ಬಿಷಪ್‍ದ್ವಯರು ಸ್ಮರಿಸಿದ್ದಾರೆ.