MANGALURU, JAN 24: The Commissions for Bible, Proclamation, Social Communication and Small Christian Community of the Diocese of Mangalore along with St Anthony Ashram, St Joseph Seminary, Cascia, Jeppu and Valencia parishes jointly organise a three-day Bile Exhibition at St Anthony Ashram, Jeppu, Mangaluru from Thursday, January 26, 2023.
The exhibition is held on the occasion of ‘Bible Sunday’ celebrated universally on the third Sunday of the Liturgical calendar which marked this year on January 22, 2023.
Rev. Fr J B Crasta, Director of St Anthony Charitable Institutions and the convener of the exhibition said, “The Bible, is the best-selling book of all time, having sold around 5 billion copies to date. It is also the most translated book in human history.”
Fr Crasta further said, “This exhibition intends to draw more people to experience a faith journey while going through a public reading of the Sacred Scripture, biblical art, painting, video presentation, quiz, songs, skits and dances.
He noted that St Anthony of Padua was an ardent preacher of the ‘Word of God’ and showed a great zeal to proclaim it to all. Hence, this exhibition is held in St Anthony’s Ashram, Jeppu.
Rev. Fr Rupesh Tauro, diocesan secretary of Commission for proclamation and the co-ordinator of the programme said, “The exhibition will showcase different translations of the Bible copies, Bible art, Bile paintings, iconography, Indian art, and display of Biblical timeline, Bible verses, Bible paintings and the demonstration of important Bible events.
The inaugural ceremony of the exhibition will be held on Thursday, January 26, 2023 at 10 am in the Ashram Premises. Rev. Dr William Barboza, Bible (NT) translator from English to Konkani, will be inaugurating the exhibition.
The exhibition will be open for the public on all the three days from 9 am in the morning to 7 pm in the evening.
There will be a biblical cultural programme every evenings from 4.30 pm to 7 pm.
The concluding ceremony of the same is scheduled on Saturday, January 28 at 6 pm.
ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನ
ಮಂಗಳೂರು, ಜನವರಿ.24: ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹ-ಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಗುರುವಾರ, ಜನವರಿ 26, 2023 ರಿಂದ ಮೂರು ದಿನಗಳ ಬೈಬಲ್ ಪ್ರದರ್ಶನವನ್ನು ಆಯೋಜಿಸಿವೆ.
ಕಥೊಲಿಕ ಕೈಸ್ತರ ಪೂಜಾವಿಧಿಯ ಕ್ಯಾಲೆಂಡರ್ನ ಮೂರನೇ ಭಾನುವಾರದಂದು ‘ಬೈಬಲ್ ಭಾನುವಾರ’ವನ್ನು ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಜನವರಿ 22, 2023 ರಂದು ಇದನ್ನು ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬೈಬಲ್ ಪ್ರದರ್ಶನವನ್ನು ವಿಶೇಷವಾಗಿ ನಡೆಸಲಾಗುತ್ತದೆ.ಸಂತ ಆಂತೋನಿ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕ ವಂದನೀಯ ಜೆ. ಬಿ. ಕ್ರಾಸ್ತಾ ಮಾತನಾಡಿ, “ಬೈಬಲ್ ಸಾರ್ವಕಾಲಿಕ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ, ಇಲ್ಲಿಯವರೆಗೆ ಸುಮಾರು 5 ಬಿಲಿಯನ್ ಪ್ರತಿಗಳು ಮಾರಾಟವಾಗಿವೆ. ಇದು ಮಾನವ ಇತಿಹಾಸದಲ್ಲಿ ಅತಿ ಹೆಚ್ಚು ಅನುವಾದಿತ ಪುಸ್ತಕವಾಗಿದೆ,” ಹೇಳಿದರು.
“ಈ ಪ್ರದರ್ಶದಲ್ಲಿ ಕ್ರೆöÊಸ್ತ ಪವಿತ್ರ ಗ್ರಂಥ-ಬೈಬಲ್ನ್ನು ಸಾರ್ವಜನಿಕ ಓದುವಿಕೆಯ ಮೂಲಕ ಹಾಗೂ ಬೈಬಲ್ನ ಕಲೆ, ಚಿತ್ರಕಲೆ, ವೀಡಿಯೊ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ನಾಟಕಗಳು ಮತ್ತು ನೃತ್ಯಗಳ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸಿ ಜನರಿಗೆ ವಿಶೇಷ ಆನುಭವ ಹಾಗೂ ವಿಶ್ವಾಸದ ಪ್ರಯಾಣವನ್ನು ನೀಡಲು ಉದ್ದೇಶಿಸಿದೆ” ಎಂದು ವಂದನೀಯ ಕ್ರಾಸ್ತಾರವರು ನುಡಿದರು.
ಪಾದುವಾದ ಸಂತ ಅಂತೋನಿಯವರು ‘ದೇವರ ವಾಕ್ಯ’ದ ಉತ್ಕಟ ಬೋಧಕರಾಗಿದ್ದರು ಮತ್ತು ಅದನ್ನು ಎಲ್ಲರಿಗೂ ಘೋಷಿಸಲು ಹೆಚ್ಚಿನ ಉತ್ಸಾಹವನ್ನು ತೋರಿಸಿದವರು. ಆದ್ದರಿಂದ, ಈ ಪ್ರದರ್ಶನವನ್ನು ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆಸಲಾಗುತ್ತದೆ ಎಂದು ವಂದನೀಯ ಕ್ರಾಸ್ತಾರವರು ನುಡಿದರು.
ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್ ತಾವ್ರೊರವರು ಮಾತಾನಾಡಿ, “ಈ ಪ್ರದರ್ಶನದಲ್ಲಿ ಬೈಬಲ್ ಪ್ರತಿಗಳ ವಿವಿಧ ಭಾಷಾಂತರಗಳು, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಬೈಬಲ್ ಕಲೆ ಮತ್ತು ಬೈಬಲ್ ಘಟನೆಗಳ ಕಾಲಘಟ್ಟಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ ಬೈಬಲ್ ಗೀತೆಗಳು, ನಾಟಕಗಳು, ಬೈಬಲ್ ವರ್ಣಚಿತ್ರಗಳು, ಬೈಬಲ್ ಕ್ವಿಜ್ ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಇರುವುದು” ಎಂದು ಹೇಳಿದರು.
ಪ್ರದರ್ಶನದ ಉದ್ಘಾಟನಾ ಸಮಾರಂಭವು ಗುರುವಾರ, ಜನವರಿ 26, 2023 ರಂದು ಬೆಳಿಗ್ಗೆ 10 ಗಂಟೆಗೆ ಆಶ್ರಮದ ಆವರಣದಲ್ಲಿ ನಡೆಯಲಿದೆ. ಇಂಗ್ಲಿಷ್ನಿoದ ಕೊಂಕಣಿಗೆ ಬೈಬಲ್ (ಹೊಸ ಓಡಂಬಡಿಕೆ) ಅನುವಾದಕ ವಂದನೀಯ ಡಾ. ವಿಲಿಯಮ್ ಬರ್ಬೋಜಾ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನವು ಜ. 26 ರಿಂದ ಜ. 28 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪ್ರದರ್ಶನದ ಸಮಾರೋಪ ಸಮಾರಂಭವನ್ನು ಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.