‘Bhuvana Jyothi’ film producer Fr Mathew Vas no more

❤️ Spread the love ❤️ |

Report by Fr Anil Fernandes, CCC

MANGALORE, OCT 22 : Very Rev. Fr Mathew Vas, a well acclaimed producer of ‘Bhuvana Jyothi’-first ever musical film in Kannada and in India on the life of Jesus Christ, breathed his last on Friday, October 22, 2021 due to cardiac arrest. He was 62 when he died. Presently, he was serving as the parish priest of Immaculate Conception Church, Kinnigoli, Mangalore.

The mortal remains of Fr Mathew Vas will be brought to Kinnigoli Church for public viewing between 8.30 and 9.30 a.m. tomorrow Saturday, October 23. The funeral Mass and burial rites of the late priest will be at 10.00 am in Immaculate Conception Church, Kinnigoli

Rev. Fr Mathew Vas hails from Siddakatte, Bantwal. He was born to Mr John Vas and Lucy Rodrigues on July 8, 1960. He was ordained to priesthood on April 30, 1987. After serving as the assistant parish priest in Kinnigoli and Kulshekar Church, he trained himself in mass communication at Patna.

Fr Mathew was interested in mass media and social communication. Hence, he studied a short course on film production in Taiwan. As the director of Canara Communication Centre (CCC) he ventured into film production. ‘Bhuvana Jyothi’ (Jesus, the light of the world) directed by Udupi Vasudeva Bhat of ‘Nadavaibhavam’ production, was his first film to become the first ever musical film in Kannada on the life of Jesus Christ. It was a 35 mm film depicting the life of Christ through Karnatic music, songs and dance which appealed the costal people of South Canara and got dubbed into other languages as well.

Fr Mathew Vas, as the 4th Director of Canara Communication Centre (1991-1998) of Mangalore Diocese, has selflessly served the centre and the diocese, immensely contributing to the work of proclamation, evangelisation, communication and dialogue through media.

Fr Mathew Vas served as the parish priest in Bela (1998), Udupi (2004), Angelore (2011) and Kinnigoli (Since 2018). He was fondly remembered by all for his affection, friendliness, simplicity and jovial. Currently he was also the Spiritual director of Catholic Sabha Mangalore Pradesh (R).

The diocese of Mangalore with Most Rev. Dr Peter Paul Saldanha, priests and nuns and lay faithful mourns the sudden death of Fr Mathew Vas.

‘ಭುವನ ಜ್ಯೋತಿ’ ಚಿತ್ರದ ಖ್ಯಾತ ನಿರ್ಮಾಪಕ ಫಾ. ಮ್ಯಾಥ್ಯೂ ವಾಸ್ ಇನ್ನಿಲ್ಲ

ವರದಿ: ಫಾ ಅನಿಲ್ ಫೆರ್ನಾಂಡಿಸ್

ಮಂಗಳೂರು, ಅಕ್ಟೋಬರ್ 22 : ಯೇಸು ಕ್ರಿಸ್ತನ ಜೀವನದ ಕುರಿತು ಕನ್ನಡ ಮತ್ತು ಭಾರತದಲ್ಲಿ ಮೊಟ್ಟಮೊದಲ ಸಂಗೀತ ಚಲನಚಿತ್ರವಾದ ‘ಭುವನ ಜ್ಯೋತಿ’ಯ ಅತ್ಯಂತ ಮೆಚ್ಚುಗೆ ಪಡೆದ ನಿರ್ಮಾಪಕ ರೆ. ಫಾ. ಮ್ಯಾಥ್ಯೂ ವಾಸ್, ಅಕ್ಟೋಬರ್ 22, 2021 ರಂದು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರು ಸಾಯುವಾಗ ಅವರಿಗೆ 62 ವರ್ಷ. ಪ್ರಸ್ತುತ, ಅವರು ಮಂಗಳೂರಿನ ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್‍ನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಮ್ಯಾಥ್ಯೂ ವಾಸ್ ಅವರ ಪಾರ್ಥಿವ ಶರೀರವನ್ನು ನಾಳೆ ಅಕ್ಟೋಬರ್ 23 ರ ಶನಿವಾರ ಬೆಳಿಗ್ಗೆ 8.30 ರಿಂದ 9.30ರ ತನಕ ಸಾರ್ವಜನಿಕ ದರ್ಶನಕ್ಕಾಗಿ ಕಿನ್ನಿಗೋಳಿ ಚರ್ಚ್‍ಗೆ ತರಲಾಗುತ್ತದೆ. ದಿವಂಗತ ಪೂಜ್ಯನೀಯರ ಅಂತ್ಯಕ್ರಿಯೆ ಪೂಜೆ ಮತ್ತು ಅಂತ್ಯಕ್ರಿಯೆ ವಿಧಿಗಳನ್ನು ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್‍ನಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.

ರೆ. ಫಾ. ಮ್ಯಾಥ್ಯೂ ವಾಸ್ ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಜುಲೈ 8, 1960 ರಂದು ಶ್ರೀ ಜಾನ್ ವಾಸ್ ಮತ್ತು ಲೂಸಿ ರೊಡ್ರಿಗಸ್ ಅವರಿಗೆ ಜನಿಸಿದರು. ಅವರು ಏಪ್ರಿಲ್ 30, 1987 ರಂದು ಗುರು ದೀಕ್ಷೆ ಪಡೆದರು. ಮಂಗಳೂರು ಧರ್ಮಪ್ರಾಂತ್ಯದ ಕಿನ್ನಿಗೋಳಿ ಮತ್ತು ಕುಲಶೇಖರ್ ಚರ್ಚ್‍ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ನಂತರ, ಅವರು ಪಾಟ್ನಾದಲ್ಲಿ ಸಮೂಹ ಸಂವಹನದಲ್ಲಿ ತರಬೇತಿ ಪಡೆದರು.

ವಂದನೀಯ ಮ್ಯಾಥ್ಯೂ ವಾಸ್ ಅವರು ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಸಂವಹನದಲ್ಲಿ ಆಸಕ್ತಿ ಹೊಂದಿದ್ದರು. ಆದ್ದರಿಂದ, ಅವರು ತೈವಾನ್‍ನಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಅಧ್ಯಯನ ಮಾಡಿದರು. ಕೆನರಾ ಸಂಪರ್ಕ ಕೇಂದ್ರದ (ಸಿಸಿಸಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸುವಾಗ ಅವರು ಚಲನಚಿತ್ರ ನಿರ್ಮಾಣಕ್ಕೆ ಮುಂದಾದರು. ‘ನಾದವೈಭವಂ’ ನಿರ್ಮಾಣದ ಉಡುಪಿ ವಾಸುದೇವ ಭಟ್ ನಿರ್ದೇಶನದ ‘ಭುವನ ಜ್ಯೋತಿ’ (ಜೀಸಸ್, ವಿಶ್ವದ ಬೆಳಕು)ಯು, ಯೇಸುಕ್ರಿಸ್ತನ ಜೀವನದ ಕುರಿತು ಕನ್ನಡದ ಮೊಟ್ಟಮೊದಲ ಸಂಗೀತ ಚಿತ್ರ. ಇದು ಕ್ರಿಸ್ತನ ಜೀವನವನ್ನು ಕರ್ನಾಟಿಕ್ ಸಂಗೀತ, ಹಾಡುಗಳು ಮತ್ತು ನೃತ್ಯದ ಮೂಲಕ ಬಿಂಬಿಸುವ 35 ಎಂಎಂ ಚಿತ್ರವಾಗಿದ್ದು, ಇದು ದಕ್ಷಿಣ ಕನ್ನಡದ ಜನರನ್ನು ಆಕರ್ಷಿಸಿತು ಮತ್ತು ಇತರ ಭಾಷೆಗಳಿಗೆ ಡಬ್ ಮಾಡಲಾಯಿತು.

ವಂದನೀಯ ಮ್ಯಾಥ್ಯೂ ವಾಸ್, ಮಂಗಳೂರು ಧರ್ಮಪ್ರಾಂತ್ಯದ ಕೆನರಾ ಸಂವಹನ ಕೇಂದ್ರದ (1991-1998) 4 ನೇ ನಿರ್ದೇಶಕರಾಗಿ, ನಿಸ್ವಾರ್ಥವಾಗಿ ಕೇಂದ್ರ ಮತ್ತು ಧರ್ಮಪ್ರಾಂತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ, ಮಾಧ್ಯಮದ ಮೂಲಕ ಸುವಾರ್ತ ಪ್ರಸಾರ, ಧರ್ಮಪ್ರಚಾರ, ಸಾಮಾಜಿಕ ಸಂಪರ್ಕ ಮತ್ತು ಆಂತರ್ ಧಾರ್ಮೀಯ ಸಂವಾದದ ಕೆಲಸಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಫಾ. ಮ್ಯಾಥ್ಯೂ ವಾಸ್ ಬೇಳಾ (1998), ಉಡುಪಿ (2004), ಆಂಜೆಲೂರು (2011) ಮತ್ತು ಕಿನ್ನಿಗೋಳಿ (2018 ರಿಂದ) ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ಅವರ ಪ್ರೀತಿ, ವಾತ್ಸಲ್ಯ, ಸ್ನೇಹಪರತೆ ಮತ್ತು ಸರಳತೆಯಿಂದ ಎಲ್ಲರ ಮನ ಗೆದ್ದವರು.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಪ್ರಸ್ತುತ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ಮ್ಯಾಥ್ಯೂ ವಾಸ್ ಎಲ್ಲರಿಗೂ ನಲ್ಮೆಯ ಮಾರ್ಗದರ್ಶಕರಾಗಿ, ನಿರಂತರ ಚೇತನ ಚಿಲುಮೆಯಾಗಿದ್ದರು. ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು, ಮಂಗಳೂರು ಧರ್ಮಸಭೆಯ ಸಮಸ್ತ ಯಾಜಕ ವೃಂದ, ಧರ್ಮಭಗಿನಿ ಹಾಗೂ ಶ್ರೀ ಸಾಮಾನ್ಯ ವಿಶ್ವಸಿಗಳ ಪರವಾಗಿ ಆಕಾಲಿಕವಾಗಿ ಆಗಲಿದ ಪೂಜ್ಯನೀಯರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ. ದುಃಖಿತ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರಿಗೆಗೆ ಸಾಂತ್ವನವನ್ನು ಸೂಚಿಸಿದ್ದಾರೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಆಧಿಕಾರಿ ಶ್ರೀ ರೋಯ್ ಕ್ಯಾಸ್ತೆಲಿನೊ ಹೇಳಿದ್ದಾರೆ

 

Webmaster: Diocese of Mangalore
Webmaster: Diocese of Mangalore

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email