Search
Close this search box.

Bible Scholar Rev. Dr William Barboza inaugurates Three-day Bible Exhibition at Jeppu

❤️ Spread the love ❤️ |

MANGALURU, JAN 26: “’Listen to Bible, Read the Bible, Study the Bible, Pray the Bible and Live the Bible.’ I am reminded of these beautiful words from a Bible Library set on Logos Ship arrived in Mangalore port around 40 years ago. These words will make our lives prosper,” said Rev. Dr William Barboza, a retired priest of the Diocese of Mangalore and translator of the English New Testament into Konkani Language. He was the chief guest of the inaugural ceremony of the three day Bible Exhibition held at St Anthony Ashram, Jeppu, Mangalore, here on Thursday, January 26, 2023.

The exhibition was organised by the Commissions for Bible, Proclamation, Social Communication and Small Christian Community of the Diocese of Mangalore along with St Anthony Ashram, St Joseph Seminary, Cascia, Jeppu and Valencia parishes from January 26 to 28 evening.

Rev. Fr J B Crasta, Director of St Anthony Charitable Institutions and the convener of the exhibition, Rev. Dr Ronald Serrao, Rector of St Joseph Seminary, Jeppu, Rev. Fr Joachim Fernandes, Director Small Christian Community, Rev. Fr Anil Fernandes, Director Canara Communication Centre, Rev. Fr Rupesh Tauro, diocesan secretary of Commission for proclamation, Fr Larry Pinto, assistant director, St Anthony Ashram and Sr Doreen UFS were present among the many religious sisters, youth, and residents of St Anthony Ashram Jeppu.

The inauguration ceremony began with the enthronement of the Bible, which was brought in procession from the Chapel to the exhibition hall. Rev. Dr Ronald Serrao, Rev. Dr William Barboza, and Rev. Fr J. B Crasta honoured the Bible with incense and blessed the exhibition premises with the Holy Water. A short prayer session was followed in which a passage from the Bible was read and reflected.

Rev. Fr Larry Pinto, assistant director said, “The exhibition is held in commemoration 125th Anniversary of St Antony Ashram and on the occasion of ‘Bible Sunday’ celebrated universally on the third Sunday of the Liturgical calendar which marked this year on January 22, 2023.

Rev. Fr J. B Crasta welcomed the chief guests and felicitated Rev. Dr William Barboza with a shawl and flowers for his tireless efforts in translating the Bible into Konkani.

Fr Rupesh said “This exhibition includes a public reading of the Sacred Scripture, biblical art, painting, video presentation, quiz, songs, skits and dances. The Bibles and other religious articles are made available for sale. Short Video series on the Bible, produced by Canara Communication Centre are screened continuously in the Sambhram Hall.”

Ms Tressy Dsouza, one of the volunteers said, “Happy to be at the service of those who read God’s Word, love it and live by it. We pray that the Bibles will reach every hand, heart and home! I have never seen such an awesome collection of various versions of the Bible. Extremely well organised.”

The exhibition showcased different translations of the Bible copies which included regional and local languages including Tulu Bible, Bible Commentaries, hand-written Bibles, Big-size Bible, Bible art, Bible paintings, iconography, Indian art, and display of Biblical timeline, Bible verses, Bible paintings and the demonstration of important Bible events.

The organisers noted that the exhibition will be open for the public on all the three days from 9 am in the morning to 7 pm in the evening. There will be a biblical cultural programme every evenings from 4.30 pm to 7 pm. The concluding ceremony of the same is scheduled on Saturday, January 28 at 6 pm.

Report Fr Anil Fernandes, CCC

Photos: Stanly DCunha Bantwal

ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನ: ಬೈಬಲ್ ವಿದ್ವಾಂಸ ಡಾ| ವಿಲಿಯಂ ಬರ್ಬೋಜಾರಿಂದ ಉದ್ಘಾಟನೆ

ವರದಿ: ವಂದನೀಯ ಅನಿಲ್ ಫೆರ್ನಾಂಡಿಸ್,
ಚಿತ್ರಗಳು: ಸ್ಟ್ಯಾನ್ಲಿ ಡಿಕುನ್ಹಾ ಬಂಟ್ವಾಳ

ಮoಗಳೂರು, ಜ 26: “’ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‌ನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‌ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನನಗೆ ನೆನಪಿಗೆ ಬರುತ್ತವೆ. ಈ ಮಾತುಗಳು ಖಂಡಿತವಾಗಿಯೂ ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ,” ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್ ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ವಂದನೀಯ ಡಾ. ವಿಲಿಯಂ ಬರ್ಬೋಜಾ ಹೇಳಿದರು. ಅವರು ಗುರುವಾರ, ಜನವರಿ 26, 2023 ರಂದು ಮಂಗಳೂರಿನ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ಗÀಳು ಜಂಟಿಯಾಗಿ ನಗರದ ಜೆಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28ರ ಸಂಜೆಯವರೆಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತುಪ್ರದರ್ಶನದ ಸಂಚಾಲಕ ವಂದನೀಯ ಜೆ.ಬಿ.ಕ್ರಾಸ್ತಾ, ಜೆಪ್ಪುವಿನ ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂದನೀಯ ಡಾ.ರೊನಾಲ್ಡ್ ಸೆರಾವೊ, ಸಣ್ಣ ಕ್ರೈಸ್ತ ಸಮುದಾಯದ ಸಂಚಾಲಕ ವಂದನೀಯ ಜೋಕಿಮ್ ಫೆರ್ನಾಂಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂದನೀಯ ಅನಿಲ್ ಫೆರ್ನಾಂಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್ ತಾವ್ರೊ, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂದನೀಯ ಲ್ಯಾರಿ ಪಿಂಟೊ, ಮತ್ತು ಮತ್ತು ಆರ್ಸುಲಾಯ್ನ್ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿAದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ವಂದನೀಯ ಡಾ. ರೊನಾಲ್ಡ್ ಸೆರಾವೊ, ವಂದನೀಯ ಡಾ. ವಿಲಿಯಂ ಬರ್ಬೋಜಾ ಮತ್ತು ವಂದನೀಯ ಜೆ. ಬಿ ಕ್ರಾಸ್ತಾ ಅವರು ಬೈಬಲ್‌ಗೆ ಹಾರಾರ್ಪಣೆಗೈದು, ಧೂಪ ಹಾಕಿ ಗೌರವಿಸಿದರು ಮತ್ತು ಪ್ರದರ್ಶನದ ಆವರಣವನ್ನು ಪವಿತ್ರ ಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‌ನ ಒಂದು ಭಾಗವನ್ನು ಓದಲಾಯಿತು.
ಸಹಾಯಕ ನಿರ್ದೇಶಕರಾದ ವಂದನೀಯ ಲ್ಯಾರಿ ಪಿಂಟೋ ಮಾತನಾಡಿ, “ಕಥೊಲಿಕ ಕ್ರೆöÊಸ್ತರ ಪೂಜಾವಿಧಿಯ ಕ್ಯಾಲೆಂಡರ್‌ನ ಮೂರನೇ ಭಾನುವಾರ- ಈ ವರ್ಷ ಜನವರಿ 22 ರಂದು ಸಾರ್ವತ್ರಿಕವಾಗಿ ಆಚರಿಸಲಾದ ‘ಬೈಬಲ್ ಭಾನುವಾರ’ದ ಪ್ರಯುಕ್ತ ಹಾಗೂ ಸಂತ ಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ” ಎಂದರು.
ವoದನೀಯ ಜೆ. ಬಿ. ಕ್ರಾಸ್ತರವರು ಮುಖ್ಯ ಆತ್ತಿಥಿಗಳನ್ನು ಸ್ವ್ವಾಗತಿಸಿದರು. ಈ ಸಂಧರ್ಭ ಬೈಬಲನ್ನು ಕೊಂಕಣಿಗೆ ಭಾಶಾಂತರಿಸಲು ಜೀವನಪೂರ್ತಿ ಶ್ರಮಿಸಿದ ವಂದನಿಯ ಡಾ. ವಿಲಿಯಂ ಬರ್ಬೊಜಾರವನ್ನು ಅಭಿನಂದಿಸಿ ಗೌರವಿಸಿದರು.
ಈ ಪ್ರದರ್ಶನವು ಪವಿತ್ರ ಗ್ರಂಥದ ಸಾರ್ವಜನಿಕ ಓದುವಿಕೆ, ಬೈಬಲ್ ಕಲೆ, ಚಿತ್ರಕಲೆ, ವಿಡಿಯೋ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ಸ್ಕಿಟ್‌ಗಳು ಮತ್ತು ನೃತ್ಯಗಳನ್ನು ಒಳಗೊಂಡಿದೆ ಹಾಗೂ ಬೈಬಲ್‌ಗಳು ಮತ್ತು ಇತರ ಧಾರ್ಮಿಕ ವಸ್ತುಗಳು ಮಾರಾಟಕ್ಕೆ ಲಬ್ಯವಿದೆ. ಕೆನರಾ ಸಂಪರ್ಕ ಕೇಂದ್ರದ ವತಿಯಿಂದ 30 ನಿಮಿಷಗಳ ಬೈಬಲ್ ಸಾಂದರ್ಬಿಕ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ವಂದನೀಯ ರೂಪೇಶ್ ಹೇಳಿದರು. ತಿಳಿಸಿದರು.
ಸ್ವಯಂಸೇವಕರಲ್ಲಿ ಒಬ್ಬರಾದ ಶ್ರೀಮತಿ ಟ್ರೆಸ್ಸಿ ಡಿಸೋಜಾ, “ದೇವರ ವಾಕ್ಯವನ್ನು ಓದುವ, ಅದನ್ನು ಪ್ರೀತಿಸುವ ಮತ್ತು ಅದರಂತೆ ಬದುಕುವವರ ಸೇವೆಯಲ್ಲಿರಲು ಸಂತೋಷವಾಗಿದೆ. ಬೈಬಲ್‌ಗಳು ಪ್ರತಿಯೊಬ್ಬರ ಕೈ, ಹೃದಯ ಮತ್ತು ಮನೆಯನ್ನು ತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆೆ! ಬೈಬಲ್‌ನ ವಿವಿಧ ಆವೃತ್ತಿಗಳ ಅಂತಹ ಅದ್ಭುತ ಸಂಗ್ರಹವನ್ನು ನಾನು ನೋಡಿಲ್ಲ. ಅತ್ಯಂತ ಉತ್ತಮವಾಗಿ ಆಯೋಜಿಸಲಾಗಿದೆ” ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಪ್ರದರ್ಶನದಲ್ಲಿ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‌ಗಳು, ದೊಡ್ಡ ಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಿತು ಹಾಗೂ ಪದ್ಯಗಳು, ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಮೆರಗನ್ನು ನೀಡುತಿತ್ತು.
ಪ್ರದರ್ಶನವು ಎಲ್ಲಾ ಮೂರು ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸದೆ, ಎಂದು ಸಂಘಟಕರು ತಿಳಿಸಿದರು.

Picture of Director CCC Admin
Director CCC Admin

Post a comment