Search
Close this search box.

Cardinal Filipe Neri to attend Mangalore Diocesan Pastoral Parishad Golden Jubilee celebration

❤️ Spread the love ❤️ |

MANGALURU, DEC 07: Cardinal Filipe Neri Ferrao of Goa and Daman, Patriarch of the East Indies and the Chairman of the Laity Commission in the Catholic Bishop’s Conference of India will be the Chief Guest for the golden jubilee celebrations of the Mangalore Diocesan Pastoral Parishad (DPP) on Saturday, December 10, 2022 at Father Muller Convention Centre, Kankanady, Mangaluru. Cardinal Filipe Neri is the Indian Prelate who was recently elevated to the rank of Cardinal by Pope Francis.

Along with the Cardinal, Most Rev. Dr Peter Machado, Archbishop of Bangalore, Most Rev. Dr Aloysius Paul Dsouza, Bishop Emeritus, Diocese of Mangalore, Justice John Michael D’Cunha, the retired Judge from the Karnataka High Court, Mr Ronald Colaco, NRI entrepreneur and philanthropist and Mrs Philomena Lobo the former Director of the Department of School Education and Literacy, Government of Karnataka will be the other dignitaries attending the golden jubilee celebrations.  

Advocate Mr M P Noronha, the Convenor of the programme said, “The celebration of the golden jubilee of DPP will be the culmination of all the celebrations which took place in all the parishes of Mangalore Diocese.” 

Dr John E. DSilva, present Secretary of DPP said, “At this Diocesan celebration we intend to bring together the representatives of all the Faithful from all over the Diocese.”

“As a fruit of this Golden Jubilee celebration, we would like to focus on the formation of Laity to bring them to the main stream,” said Mr Noronha.

The programme will be presided over by Most Rev. Dr Peter Paul Saldanha, the bishop of Mangalore. The former secretaries who served the DPP will be felicitated during the programme. 

The programme will commence at 8.45 a.m. with the celebration of the Holy Eucharist. 

A souvenir and a small documentary will be released during the programme. 

ABOUT DPP:

The Second Vatican Council convened by Pope John XXIII, lasted for four sessions from 1962 to 1965. 

The involvement of the Lay Faithful in the Local Church of Mangalore received a renewed prominence soon after the Second Vatican Council. Most Rev. Dr Basil Salvadore D’Souza, the Bishop of Mangalore had attended the last session of the Council. On his return to the Diocese, His Lordship initiated renewal in the Local Church of Mangalore. The participation of the Clergy, Laity and Religious was given utmost importance along with liturgical renewal and missionary impetus.

Way back in 1970s the Pastoral Parishad (= Council) was formed at Parish, Deanery and Diocesan levels. Side by side, Lay participation was strengthened through the formation of Parish Finance Councils, reorganisation of educational and medical apostolates. The Local Church of Mangalore made all-round progress in terms of animating the Faith Community.

ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ: ಕಾರ್ಡಿನಲ್ ಫಿಲಿಪ್ ನೆರಿ, ಆರ್ಚ್ ಬಿಷಪ್ ಪೀಟರ್ ಮಚಾದೊ ಮುಖ್ಯ ಅತಿಥಿಗಳು

ಮಂಗಳೂರು, ಡಿಸೆಂಬರ್ 07: ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವವು ಶನಿವಾರ, ಡಿಸೆಂಬರ್ 10 ರಂದು ನಗರದ ಕಂಕನಾಡಿ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರುಗುವುದು. ಈ ಕಾರ್ಯಕ್ರಮದಲ್ಲಿ ಗೋವಾದ ಮತ್ತು ದಾಮನ್ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಹಾಗೂ ಬೆಂಗಳೂರಿನ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಆತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಜಾನ್ ಮೈಕೆಲ್ ಡಿ’ಕುನ್ಹಾ, ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲೋಕೋಪಕಾರಿ ಶ್ರೀ ರೊನಾಲ್ಡ್ ಕೊಲಾಸೊ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ ಮತ್ತಿತÀರು ಗಣ್ಯರು ಸುವರ್ಣ ಮಹೋತ್ಸವದ ಆಚರಣೆಯಲ್ಲಿ ಭಾಗವಹಿಸುವರು. 

ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಶ್ರೀ ಎಂ. ಪಿ. ನೊರೋನ್ಹಾ ಮಾತನಾಡಿ, “ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಧರ್ಮಕೇಂದ್ರಗಳಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ನಡೆದಿದ್ದವು. ಧರ್ಮಕ್ಷೇತ್ರದ ಮಟ್ಟದಲ್ಲಿ ನಡೆಯುವ ಈ ಸುವರ್ಣ ಮಹೋತ್ಸವ ಕಾರ್ಯಕ್ರಮವು ಎಲ್ಲಾ ಸಂಭ್ರಮಾಚರಣೆಗಳ ಸಮಾರೋಪ ಕಾರ್ಯಕ್ರಮವಾಗಿ ಮೂಡಿಬರುವುದು,” ಎಂದರು. 

ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ ಮಾತನಾಡಿ, “ಧರ್ಮಕ್ಷೇತ್ರದÀ ಈ ಆಚರಣೆಯಲ್ಲಿ ಪ್ರತೀ ಧರ್ಮಕೇಂದ್ರದಿAದ ಎಲ್ಲಾ ಭಕ್ತರ ಪ್ರತಿನಿಧಿಗಳನ್ನು ಒಟ್ಟುಗೂಡಿಸಲು ಉದ್ದೇಶಿಸಿದ್ದೇವೆ”, ಎಂದರು.

“ಈ ಸುವರ್ಣ ಮಹೋತ್ಸವದ ಆಚರಣೆಯ ಫಲವಾಗಿ, ನಮ್ಮ ಸಮುದಾಯದಲ್ಲಿ ನಾಯಾಕರನ್ನು ರೂಪಿಸಲು ಹಾಗೂ ಅವರನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಲು ಬಯಸುತ್ತೇವೆ” ಎಂದು ಶ್ರೀ ನೊರೊನ್ಹಾ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲನಾ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಗುವುದು.    

ಬೆಳಗ್ಗೆ 8.45ಕ್ಕೆ ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಸುವರ್ಣ ಮಹೋತ್ಸವದ ಸವೆನೆನಪಿಗಾಗಿ ಸ್ಮರಣ ಸಂಚಿಕೆ ಹಾಗೂ ಕಿರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು. 

ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಬಗ್ಗೆ

ಪೋಪ್ ಜಾನ್ XXX III ಕರೆದ ದ್ವಿತೀಯ ವ್ಯಾಟಿಕನ್ ಕೌನ್ಸಿಲ್ 1962 ರಿಂದ 1965 ರವರೆಗೆ ನಾಲ್ಕು ಅವಧಿಗಳವರೆಗೆ ನಡೆಯಿತು. 

ದ್ವಿತೀಯ ವ್ಯಾಟಿಕನ್ ಕೌನ್ಸಿಲ್ ನಂತರ ಮಂಗಳೂರಿನ ಸ್ಥಳೀಯ ಚರ್ಚ್ನಲ್ಲಿ ಶ್ರೀಸಾಮನ್ಯರÀ ಒಳಗೊಳ್ಳುವಿಕೆ ಹೊಸ ಪ್ರಾಮುಖ್ಯತೆಯನ್ನು ಪಡೆಯಿತು. ಪರಿಷತ್ತಿನ ಕೊನೆಯ ಅಧಿವೇಶನದಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಬಾಸಿಲ್ ಸಾಲ್ವದೊರ್ ಡಿಸೋಜಾ ಅವರು ಭಾಗವಹಿಸಿದ್ದರು. ಧರ್ಮಕ್ಷೇತ್ರಕ್ಕೆ ಹಿಂದಿರುಗಿದ ನಂತರ, ಅವರ ಆಡಳಿತಾವಧಿಯಲ್ಲಿ ಮಂಗಳೂರಿನ ಸ್ಥಳೀಯ ಧರ್ಮಸಭೆಯಲ್ಲಿ ನವೀಕರಣವನ್ನು ಪ್ರಾರಂಬಿಸಿದರು. ಧರ್ಮಾಚರಣೆಯ ನವೀಕರಣದ ಜೊತೆಗೆ ಧರ್ಮಸಭೆಯ ಆಡಾಳಿತಾವ್ಯವಸ್ಥೆಯಲ್ಲಿ ಯಾಜಕರು, ಕನ್ಯಾ ಸ್ತಿçÃಯರ ಹಾಗೂ ಸ್ರೀಸಾಮಾನ್ಯರ ಭಾಗವಹಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು.

1970 ರ ದಶಕದಲ್ಲಿ ಪಾಲನಾ ಪರಿಷದ್ (= ಕೌನ್ಸಿಲ್) ಅನ್ನು ಧರ್ಮಕೇಂದ್ರ, ವಲಯ ಮತ್ತು ಧರ್ಮಕ್ಷೇತ್ರದ ಮಟ್ಟದಲ್ಲಿ ರಚಿಸಲಾಯಿತು. ಜೊತೆಜೊತೆಗೆ, ಧರ್ಮಕೇಂದ್ರದ ಹಣಕಾಸು ಮಂಡಳಿಗಳ ರಚನೆ, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳ ಮರುಸಂಘಟನೆಯ ಮೂಲಕ ಶ್ರೀಸಾಮಾನ್ಯರ ಭಾಗವಹಿಸುವಿಕೆಯನ್ನು ಬಲಪಡಿಸಲಾಯಿತು. ಇದರಿಂದಾಗಿ ಕಳೆದ 50 ವರುಷಗಳಲ್ಲಿ ಮಂಗಳೂರಿನ ಸ್ಥಳೀಯ ಧರ್ಮಸಭೆಯು ಸಮುದಾಯವನ್ನು ಕಟ್ಟುವ ಹಾಗೂ ಬಲಪಡಿಸುವ ವಿಷಯದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಲು ಸಾಧ್ಯವಾಯಿತು.

ಸಂಪರ್ಕ:
ಶ್ರೀ ಎಂ.ಪಿ. ನೊರೊನ್ಹಾ, ಸಂಚಾಲಕರು – 9845543531
ಡಾ ಜಾನ್ ಇ ಡಿಸಿಲ್ವಾ, ಕಾರ್ಯದರ್ಶಿ – 9448107667
ರೆ. ಫಾ. ಜೆ. ಬಿ ಸಲ್ಡಾನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿ – 9448038051
ಶ್ರೀ ರಾಯ್ ಕ್ಯಾಸ್ಟೆಲಿನೊ, ಸಾರ್ವಜನಿಕ ಸಂಪರ್ಕಾಧಿಕಾರಿ – 9845084707
Picture of Director CCC Admin
Director CCC Admin

Post a comment