Centenary Celebration of Marian Apparition at Fatima

❤️ Spread the love ❤️ |

May 10, 2017: It was 1917 time of World War I. On May 13 the three children Lucia (10), Francisco Marto (8) and his sister Jacintha Marto (7) as they were grazing their sheep Mother Mary appeared to them at Fatima of Portugal. There after consecutively on the 13th of every month Mother Mary appeared to the children. Initially people of the place didn’t believe in what the children said. But slowly the crowd swelled to witness the apparition. On October 13th of that year a crowd of one hundred thousand gathered to witness the miracle. It was around midday amidst the pouring rain the children and the people witnessed the apparition along with the unusual dance of Sun.

Message in the apparition: a call to pray continuously for the war to get over, turn back from sinful life, repentance. Mother Mary also revealed that she is Immaculate Heart of Mary and that they should conduct devotion to the Immaculate Heart and thus glorify God.

There afterwards people from every corner of the world flock to Fatima. Many of those who have visited Fatima have experienced physical healing. Many more have gone back home with a change of heart and life. In 1981 when the then Pope John Paul II was going around in an open vehicle in Vatican square to greet the large crowd a young man from Turkey fired bullets at the Pope. Immediately the Pope was rushed to the hospital and he was rescued. One bullet was removed from his intestine. The incident occurred on May 13th. The Pope understood that Our Lady of Fatima had done that miracle for him. Following year on May 13th he went to Fatima and placed the bullet removed from his intestine on the crown of Mother Mary.  Every year around five million people visit Fatima and experience the spiritual grace. This year on May 13th Pope Francis will be visiting Fatima and at that time he will also declare Franscico Marto and Jacintha Marto as Saints.

In Mangalore Diocese preparations have begun a year back for this celebration. The statue of Mother Mary brought from Fatima on the occasion of fiftieth year of apparition and kept in Milagres Church has been taken to all the 117 Churches of the diocese and people have honoured Our Lady of Fatima by conducting prayers. On 13th May the statue will be brought in procession from Bondel Church to Our Lady of Church Tannirbavi. At 4 pm large number of people coming from different places will join the procession at Doast Club Tannirbavi. Most Rev Dr Aloysius Paul D’Souza, Bishop of Mangalore will celebrate the Holy Mass. Around seventy five priests and six thousand people are expected to participate in the celebration. The Bishop will also release a documentary film prepared on Our Lady of Fatima by Rev Fr Stany Montiero of Bambil Church.

Fr Francis D’Souza Convener of the celebration; Fr Onil D’Souza Director St Anthony’s Charity Institutes; Fr Alban Rodrigues Parish Priest, Mr Felix D’Souza Vice President, Clifford Lobo former Vice President of Tannirbavi Parish and Mr Vincent Mascarenhas Media person of the Diocese of Mangalore were present for the press conference held on 10-May-2017 at 10:45 a.m.

 

ಮೇ 13 ರಂದು ಮಾತೆ ಮರಿಯಮ್ಮನವರ ಫಾತಿಮಾ ದರ್ಶನದ ಶತಮಾನೋತ್ಸವ

ಮೇ 10, 2017: 1917 ಇಸವಿ ಮೊದಲನೇ ಜಾಗತಿಕ ಯುದ್ದದ ಸಮಯ. ಪೆÇೀರ್ಚುಗಲ್ ದೇಶದ ಫಾತಿಮಾ ಎಂಬ ಜಾಗದಲ್ಲಿ ಲೂಸಿಯಾ (10), ಫ್ರಾನ್ಸಿಸ್ಕೊ ಮಾರ್ತೊ (8) ಮತ್ತು ಜಸಿಂತ ಮಾರ್ತೊ (7) ಎಂಬ ಮೂರು ಮಕ್ಕಳು ಕುರಿ ಕಾಯುತ್ತಿರುವ ಸಮಯದಲ್ಲಿ ಮಾತೆ ಮರಿಯಮ್ಮನವರು ಆ ಮಕ್ಕಳಿಗೆ ದರ್ಶನದಲ್ಲಿ ಕಾಣಿಸಿಕೊಂಡರು. ನಂತರದ ಐದು ತಿಂಗಳಲ್ಲಿ- ಪ್ರತೀ ತಿಂಗಳ 13ನೇ ತಾರಿಕಿನಂದು ಮಾತೆ ಮರಿಯಮ್ಮನವರು ಮಕ್ಕಳಿಗೆ ಕಾನಿಸಿಕೊಂಡರು. ಆರಂಭದಲ್ಲಿ ಊರಿನ ಜನರು ಈ ದರ್ಶನದ ಬಗ್ಗೆ ನಂಬಲಿಲ್ಲ. ಆದರೆ ಒಕ್ಟೋಬರ್ ತಿಂಗಳ 13ನೇ ತಾರಿಕಿನಂದು ಸುಮಾರು ಒಂದು ಲಕ್ಷದಷ್ಟು ಜನರು ದರ್ಶನವನ್ನು ನೋಡಲು ಸೇರಿದ್ದರು. ಆ ದಿವಸ ಮಧ್ಯಾಹ್ಹನದ ಹೊತ್ತಿಗೆ ಭೊರ್ಗರೆಯುತ್ತಿರುವ ಮಳೆಯಲ್ಲಿ ಸೂರ್ಯನ ನರ್ತನ ನೋಡಿ ಜನ ದರ್ಶನದ ಬಗ್ಗೆ ನಂಬಿದರು.

ದರ್ಶನದಲ್ಲಿ ಮಾತೆ ಮರಿಯಮ್ಮನವರು ಮಕ್ಕಳಿಗೆ ನೀಡಿದ ಸಂದೇಶಗಳು: ಯುದ್ದ ಕೊನೆಗಾಣಲು ನಿರಂತರ ಪ್ರಾರ್ಥನೆ ಸಲ್ಲಿಸಲು ಕರೆ, ಪಾಪದಿಂದ ದೂರ ಉಳಿಯಲು ನಿರ್ಧಾರ, ಪ್ರಾಯಶ್ಚಿತ ಮತ್ತು ತನ್ನ ನಿರ್ಮಲ ಹøದಯಕ್ಕೆ ಗೌರವ ಸಲ್ಲಿಸುವುದರ ಮುಖಾಂತರ ದೇವರ ಪ್ರೀತಿಯನ್ನು ಅರಿಯುವುದು ಮತ್ತು ಆ ಪ್ರೀತಿಗೆ ಪಾತ್ರರಾಗುವುದು.

ಮಾತೆ ಮರಿಯಮ್ಮನವರು ಕುರಿಕಾಯುವ ಈ ಮಕ್ಕಳಿಗೆ ಕಾಣಿಸಿಕೊಂಡಂದಿನಿಂದ ಇಂದಿನವರೆಗೆ ಪ್ರಪಂಚದ ಮೂಲೆ ಮೂಲೆಗಳಿಂದ ಜನ ಫಾತಿಮಾಕ್ಕೆ ಭೇಟಿ ನೀಡುತ್ತಾರೆ. ಭೇಟಿ ನೀಡಿದ ಜನರಲ್ಲಿ ಹಲವರು ದೇಹದ ಕಾಯಿಲೆಯಿಂದ ಗುಣಪಡುತ್ತಾರೆ ಮತ್ತು ಇನ್ನಷ್ಟು ಜನರು ಆಧ್ಯಾತ್ಮಿಕ ಅನುಭವವನ್ನು ಪಡೆದು ಹಿಂದಿರುಗುತ್ತಾರೆ. 1981 ಮೇ 13 ರಂದು ಅಂದಿನ ಪೆÇೀಪ್ ಯೋಹನ ಪಾವ್ಲ್ ದ್ವಿತೀಯ ಇವರು ವ್ಯಾಟಿಕನ್‍ನಲ್ಲಿ ತೆರೆದ ವಾಹನದಲ್ಲಿ ಜನರತ್ತ ಸಾಗುತ್ತಿರುವಾಗ ತುರ್ಕಿಯ ಯುವಕನು ಪೆÇೀಪ್ ಅವರ ಮೇಲೆಗುಂಡಿನ ದಾಳಿ ಮಾಡಿದ್ದನು. ಆ ದಾಳಿಯಿಂದ ಪೆÇೀಪ್ ಸ್ವಾಮಿಯವರು ಬದುಕುಳಿದಿದ್ದರು ಮತ್ತು ಫಾತಿಮಾ ಮಾತೆಯ ಹಬ್ಬದಂದು ನಡೆದ ಆ ಘಟನೆಯಲ್ಲಿ ಬದುಕಿಳಿದಿದ್ದು ಮಾತೆ ಮರಿಯಮ್ಮ ಮಾಡಿದ ಒಂದು ಪವಾಡ ಎಂದು ಅವರು ತಿಳಿದು ಕೊಂಡರು. ಮರು ವರ್ಷ ಮೇ 13 ರಂದು ಪಾತಿಮಾಕ್ಕೆ ಭೇಟಿ ನೀಡಿ ತನ್ನೆ ಕರುಳಿನಿಂದ ತೆಗೆದ ಗುಂಡನ್ನು ಫಾತಿಮಾ ಮಾತೆಯ ತಲೆ ಮೇಲಿರುವ ಕಿರೀಟದಲ್ಲಿಟ್ಟು ಗೌರವ ಸಲ್ಲಿಸಿದರು. ಪ್ರಸ್ತುತ ಪ್ರತಿ ವರ್ಷ ಐವತ್ತು ಲಕ್ಷ ಜನರು ಈ ಪುಣ್ಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ವರ್ಷ ಪೆÇೀಪ್ ಫ್ರಾನ್ಸಿಸ್‍ರವರು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಫಾತಿಮಕ್ಕೆ ಭೇಟಿ ನೀಡಲಿದ್ದಾರೆ ಮತ್ತು ದರ್ಶನ ಪಡೆದ ಇಬ್ಬರು ಮಕ್ಕಳನ್ನು (ಫ್ರಾನ್ಸಿಸ್ಕೊ ಮಾರ್ತೊ ಮತ್ತು ಜೆಸಿಂತ ಮಾರ್ತೊ) ಇವರನ್ನು ಸಂತರೆಂದು ಘೋಶಿಸಲಿದ್ದಾರೆ.

ಮಂಗಳೂರು ಧರ್ಮಪ್ರಾಂತ್ಯದಲ್ಲಿ ಈ ಶತಮಾನೋತ್ಸವಕ್ಕೆ ಒಂದು ವರ್ಷದ ತಯಾರಿ ನಡೆದಿದೆ. 2016 ಮೇ 29 ರಿಂದ ಇಂದಿನವರೆಗೆ ಫಾತಿಮಾ ಮಾತೆಯ ಪ್ರತಿಮೆ (ಫಾತಿಮಾದಿಂದ ತರಿಸಲ್ಪಟ್ಟದ್ದು, ಮಿಲಾಗ್ರಿಸ್ ಚರ್ಚ್‍ನಲ್ಲಿ ಇರುವಂತದ್ದು) ಧರ್ಮ ಪ್ರಾಂತ್ಯದ ಎಲ್ಲಾ 117 ಧರ್ಮಕೇಂದ್ರಗಳಿಗೆ ಕೊಂಡೊಯ್ದು ಧರ್ಮ ಪ್ರಾಂತ್ಯದ ಎಲ್ಲಾ ಜನರು ಪ್ರಾರ್ಥನೆ ಸಲ್ಲಿಸಿದ್ದಾರೆ. ಶತಮಾನದ ಆಚರಣೆ ತನ್ನಿರ್ ಬಾವಿಯ ಫಾತಿಮಾ ಮಾತೆಗೆ ಸಮರ್ಪಿಸಲ್ಪಟ್ಟ ದೇವಾಲದಲ್ಲಿ ಮೇ 13 ರಂದು ಜರಗಲಿರುವುದು. ಫಾತಿಮಾ ಮಾತೆಯ ಪ್ರತಿಮೆಯನ್ನು ಬೋಂದೆಲ್ ಚರ್ಚ್‍ನಿಂದ ಮೆರವಣಿಗೆಯಲ್ಲಿ ತನ್ನೀರ್ ಬಾವಿ ಚರ್ಚ್‍ಗೆ ತರಲಾಗುವುದು. ತನ್ನೀರ್‍ಬಾವಿ ದೋಸ್ತ್ ಕ್ಲಬ್ ಮೈದಾನದಿಂದ 4 ಗಂಟೆಗೆ ಮೆರವಣಿಗೆ ನಡೆಯಲಿದೆ. ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜರವರು ಬಲಿಪೂಜೆ ಅರ್ಪಿಸಲಿರಿವರು. ಈ ಆಚರಣೆಯಲ್ಲಿ ಸುಮಾರು 75 ಧರ್ಮಗುರುಗಳು ಮತ್ತು 6000 ಜನರು ಪಾಲ್ಗೊಳ್ಳಲಿರುವರು. ಬಾಂಬಿಲ್ ಚರ್ಚ್‍ನ ಫಾ. ಸ್ಟೇನಿ ಮೊಂತೇರೊರವರು ಫಾತಿಮಾ ಮಾತೆಯ ಬಗ್ಗೆ ತಯಾರಿಸಿದ ಚಲನ ಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು.

ಮೇ 10, 2017 ರಂದು 10:45 ಗಂಟೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಆಚರಣೆ ಸಮಿತಿಯ ಸಂಚಾಲಕರಾದ ಫಾ. ಫ್ರಾನ್ಸಿಸ್ ಡಿ’ಸೋಜ, ಸಂತ ಆಂತೋನಿ ಆಶ್ರಮದ ಫಾ. ಒನಿಲ್ ಡಿ’ಸೋಜ, ತನ್ನೀರ್ ಬಾವಿ ಚರ್ಚ್‍ನ್ ಫಾ. ಆಲ್ಬನ್ ರೊಡ್ರಿಗಸ್, ಉಪಾಧ್ಯಕ್ಷ ಫೆಲಿಕ್ಸ್ ಡಿ’ಸೋಜ, ಮಾಜಿ ಉಪಾಧ್ಯಕ್ಷ ಕ್ಲಿಫರ್ಡ್ ಲೋಬೊ, ಧರ್ಮ ಪ್ರಾಂತ್ಯದ ಮಾಧ್ಯಮ ಸಂಚಾಲಕ ವಿನ್ಸೆಂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

Director CCC Admin
Director CCC Admin
Share on facebook
Share on twitter
Share on linkedin
Share on pinterest
Share on telegram
Share on whatsapp
Share on email