Search
Close this search box.

Bishop Initiates Preparations for Jubilee 2025. ಮಂಗಳೂರು ಧರ್ಮಕ್ಷೇತ್ರದಲ್ಲಿ ‘ಕ್ರಿಸ್ತ ಜಯಂತಿ ಜುಬಿಲಿ 2025’ರ ಸಿದ್ಧತೆಗೆ ವಿಧ್ಯುಕ್ತ ಚಾಲನೆ

❤️ Spread the love ❤️ |

MANGALORE, NOV 26: The Roman Catholic Diocese in Mangalore set the stage for the upcoming Jubilee 2025, commemorating 2025 years since the birth of Jesus Christ, with a ceremonious inauguration on November 26, 2023. Led by Most Rev. Dr Peter Paul Saldanha, the Bishop of Mangalore, the event unfolded at the Our Lady of Holy Rosary Cathedral, Rosario, in Mangalore.

ಮಂಗಳೂರು ಧರ್ಮಕ್ಷೇತ್ರದಲ್ಲಿ ‘ಕ್ರಿಸ್ತ ಜಯಂತಿ ಜುಬಿಲಿ 2025’ರ ಸಿದ್ಧತೆಗೆ ವಿಧ್ಯುಕ್ತ ಚಾಲನೆ
ವರದಿ ಮತ್ತು ಚಿತ್ರಗಳು: ವಂದನೀಯ ಅನಿಲ್ ಫೆರ್ನಾಂಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್, ಮಂಗಳೂರು

ಮoಗಳೂರು, ಸೆ.16:  ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸುಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ‘ಕ್ರಿಸ್ತ ಜಯಂತಿ ಜುಬಿಲಿ 2025’ ಸಂಭ್ರಮಾಚರಣೆಗೆ ಪೂರ್ವ ಸಿದ್ಧತೆಗಳಿಗೆ ಚಾಲನೆ ನಡೆಯುತ್ತಿದ್ದು ಮಂಗಳೂರಿನ ರೋಮನ್ ಕಥೋಲಿಕ್ ಧರ್ಮಕ್ಷೇತ್ರದಲ್ಲಿಯೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಅತೀ ವಂದನೀಯ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಗರದ ಹೋಲಿ ರೋಜರಿ ಕೆಥೆಡ್ರಲ್‌ನಲ್ಲಿ ನವೆಂಬರ್ 26, 2023 ರಂದು “ಭರವಸೆಯ ಯಾತ್ರಿಕರು” ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ ಅನಾವರಣದೊಂದಿಗೆ ವಿಧ್ಯುಕ್ತ ಚಾಲನೆ ನೀಡಿದರು.
ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರು ಜಯಂತ್ಯುತ್ಸವಕ್ಕೆ ಸಮರ್ಪಿತವಾದ ಪ್ರಾರ್ಥನೆಯನ್ನು, ಯಾಜಕರೊಂದಿಗೆ ಮತ್ತು ನೆರೆದ ವಿಶ್ವಾಸಿಗಳೊದಿಗೆ ಪಠಿಸಿದರು. ನಂತರ ಜುಬಿಲಿ ಗೀತೆಯನ್ನು ಹಾಡಲಾಯಿತು.
ಬಿಷಪ್ ಸಲ್ಡಾನ್ಹಾ ಅವರು 2025ರ ಜುಬಿಲಿ ಮಹತ್ವವನ್ನು ಒತ್ತಿಹೇಳುತ್ತಾ “ಇತಿಹಾಸವನ್ನು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ವಿಭಜಿಸಲಾಗಿದೆ. ಪ್ರತಿಯೊಂದು ವರ್ಷವು ಯೇಸುವಿನ ಜನನದಿಂದ ಗುರುತಿಸಲ್ಪಡುತ್ತದೆ. ಯೇಸು ಕ್ರಿಸ್ತರು ಹುಟ್ಟಿ 2025 ವರ್ಸಗಳಾಗುತ್ತಿವೆ. ಮುಂಬರುವ ಈ ಸಾಮಾನ್ಯ ಜುಬಿಲಿಯೊಂದಿಗೆ, ನಾವು ಯೇಸು ಕ್ರಿಸ್ತರನ್ನು, ನಮ್ಮ ಧರ್ಮಸಭೆಯನ್ನು ಮತ್ತ್ತು ನಮ್ಮ ವಿಸ್ವಾಸನ್ನು ಆಚರಿಸುವ ಗುರಿಯನ್ನು ಹೊಂದಿದ್ದೇವೆ. ಈ ಎರಡು ವರ್ಷಗಳ ಪೂರ್ವಸಿದ್ಧತೆಯಲ್ಲಿ 2023 ಅನ್ನು ಕೌನ್ಸಿಲ್ ವರ್ಷ (ಕಲಿಕೆಯ/ಅಧ್ಯಯನದ ವರ್ಷ) ಎಂದು ಮತ್ತು 2024 ಅನ್ನು ಪ್ರಾರ್ಥನೆಯ ವರ್ಷ ಎಂದು ಆಚರಿಸುತ್ತೇವೆ” ಎಂದು ಹೇಳಿದರು.
“ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್‌ರವರು ಕಲಿಕಾ ವರ್ಷದಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್‌ನ ನಾಲ್ಕು ಸಂವಿಧಾನಗಳ ಅಧ್ಯಯನವನ್ನು ನಡೆಸಲು ನಿರ್ದೇಶಿಸಿದ್ದಾರೆ. ಈ ಸಂವಿಧಾನಗಳ ಆಧ್ಯಯನದಿಂದ ನಮ್ಮ ವಿಶ್ವಾಸವನ್ನು ಆಳವಾಗಿ ಆರಿಯಲು ಮತ್ತು ಪ್ರಾರ್ಥನಾಸ್ಪೂರ್ತಿಯಿಂದ ಈ ಜಯಂತಿಯನ್ನು ಆಚರಿಸಲು ನಮಗೆ ಕರೆನೀಡಿದ್ದಾರೆ” ಎಂದು ಬಿಷಪ್ ಒತ್ತಿ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಕೆಥೆಡ್ರಲ್‌ನ ರೆಕ್ಟರ್ ವಂದನೀಯ ಆಲ್ಫೆçಡ್ ಜೆ. ಪಿಂಟೊ, ವಂದನೀಯ ವಿನೋದ್ ಲೋಬೋ, ವಂದನೀಯ ಸಂತೋಷ್ ಡಿಸೋಜ, ವಂದನೀಯ ಹ್ಯಾರಿ ಡಿಸೋಜ, ವಂದನೀಯ ತ್ರಿಶಾನ್ ಡಿಸೋಜ, ಡಾ. ಜೋನ್ ಡಿಸಿಲ್ವರವರು ಹಾಜರಿದ್ದರು.
ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಎಲ್ಲಾ ಚರ್ಚ್ ಗಳಲ್ಲಿ ಏಕಕಾಲದಲ್ಲಿ ಈ ಉದ್ಘಾಟನಾ ಸಮಾರಂಭವನ್ನು ನಡೆಸಿ ಜುಬಿಲಿ ಲಾಂಛನವನ್ನು ಅನಾವರಣಗೊಳಿಸಲಾಯಿತು, ಸಮರ್ಪಿತ ಪ್ರಾರ್ಥನೆಗಳನ್ನು ಪಠಿಸಿ, ಜುಬಿಲಿ ಗೀತೆಯನ್ನು ಹಾಡಿದರು. ಪ್ರತೀ ಚರ್ಚುಗಳಲ್ಲಿ ಯಾಜಕರು ಲಾಂಚನದ ಮಹತ್ವವನ್ನು ಮತ್ತು ಅದರ ಸಂಕೇತವನ್ನು ಸಭೆಗೆ ವಿವರಿಸಿದರು. ಜೊತೆಗೆ, ಜುಬಿಲಿ 2025ರ ಬಗ್ಗೆ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಒಂದು ಕಿರು ವೀಡಿಯೊ ಸಂದೇಶವನ್ನು ಸಭೆಗೆ ನೀಡಲಾಯಿತು.

The inauguration witnessed the unveiling of the Jubilee Logo, marking the beginning of preparations for the Jubilee themed ‘Pilgrims of Hope.’ Bishop Peter Paul Saldanha initiated the proceedings on the auspicious occasion of the Solemnity of Christ the King. He led a prayer dedicated to the Jubilee, joined by priests and the congregation in recitation which was followed by the singing of jubilee song.

In his address, Bishop Saldanha emphasized the significance of the Jubilee 2025, stating, “Every year is marked after Jesus’ birth, signifying a division in history. With the upcoming Ordinary Jubilee in 2025, we aim to celebrate Jesus, the Church, and our faith.” He outlined the two-year preparatory roadmap: 2023 as the Year of the Council (Year of Learning) and 2024 as the Year of Prayer.

Highlighting the Holy Father’s directive, Bishop Saldanha emphasized the study of the Four Constitutions of the Second Vatican Council, stressing their importance in guiding and directing the faithful. To aid this learning, 35 booklets providing insights into the Second Vatican Council and the Four Constitutions have been made available in English and electronic formats, urging individuals to delve into these treasures.

The inaugural ceremony witnessed the presence of Rev.Fr Alfred J. Pinto, Rector of the Cathedral, along with Fr Vinod Lobo, assistant parish priest, Fr Santhosh Dsouza, Fr Harry Dsouza, Fr Trishan Dsouza, and Dr John D Silva, Parish Vice-President.

Simultaneously, all churches across the Mangalore diocese participated in the inauguration, unveiling the Jubilee logo, reciting dedicated prayers, and singing the Jubilee Song. Parish Priests across these churches elucidated the significance of the Logo and its symbolism to the congregations. Additionally, congregants were treated to a short video message from Bishop Peter Paul Saldanha regarding the Jubilee 2025.

Photos & Report by Fr Ani Fernandes, Canara Communication Centre, Mangalore 

Picture of Director CCC Admin
Director CCC Admin

Comment(1)

  1. Dr jessy Maria dsouza says:

    Very meaningful beautiful logo released for the jubilee celebration. Needed to strengthen our unity in today’s world

Post a comment