Search
Close this search box.

St Anthony’s Ashram observes Thanksgiving Day

❤️ Spread the love ❤️ |

MANGALURU, APR 23: St Anthony’s Charitable Institutes, Jeppu Mangalore celebrated Thanksgiving Day on the occasion of the Post Centenary Silver Jubilee on Sunday, April 23, 2023 at St Anthony’s Chapel, Jeppu.

ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ

ಮಂಗಳೂರು, ಎ.23: ಮಂಗಳೂರು ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನವನ್ನು 2023ರ ಏಪ್ರಿಲ್ 23ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‌ನಲ್ಲಿ ಆಚರಿಸಲಾಯಿತು.

ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್ ಎಲ್ ನೊರೊನ್ಹಾ ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾದರ್ ರೂಪೇಶ್ ತಾವ್ರೊ ಅವರು ಪ್ರವಚನ ಬೋಧಿಸಿದರು. ಮಂಗಳೂರು ಧರ್ಮಕ್ಷೇತ್ರದ ಕುಲಪತಿಗಳು, ಆತೀ ವಂದನೀಯ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ವಿಲಿಯಂ ಬಾರ್ಬೋಜಾ, ಫಾದರ್ ಲಾರೆನ್ಸ್ ಡಿಸೋಜ, ಫಾದರ್ ಫ್ರಾನ್ಸಿಸ್ ಡಿಸೋಜ, ಫಾದರ್ ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾದರ್ ಲ್ಯಾರಿ ಪಿಂಟೋ ಉಪಸ್ಥಿತರಿದ್ದರು.

‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ಹಿತಚಿಂತಕರಿಗೆ ಕೃತಜ್ಞತೆಯ ಸಂಕೇತವಾಗಿ ಸಂತ ಅಂತೋನಿಯವರ ಪ್ರತಿಮೆಯನ್ನು ಕಾಣಿಕೆ ನೀಡಲಾಯಿತು.

ಕಾರ್ಯಕ್ರಮದ ಆಧ್ಯಕ್ಷರಾಗಿ ಅತೀ ವಂದನೀಯ ಮ್ಯಾಕ್ಸಿಮ್ ಎಲ್ ನೊರೊನ್ಹಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತೀ ವಂದನೀಯ ಮ್ಯಾಕ್ಸಿಮ್ ಎಲ್ ನೊರೊನ್ಹಾ ಆವರು ಮಾತಾನಾಡಿ, “ಯಾವುದೇ ದಾನಿ ಪ್ರತಿಫಲವನ್ನು ನಿರೀಕ್ಷಿಸಿ ದಾನ ಮಾಡುವುದಿಲ್ಲ. ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿ ತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಎಂದು ಹೇಳಿದರು.

ಹಿತಚಿಂತಕರನ್ನು ಸ್ಮರಿಸುವ ಮತ್ತು ದೇವರಿಗೆ ಕೃತಜ್ಞತೆ ಸಲ್ಲಿಸುವ ಈ ದಿನವನ್ನು ಆಚರಿಸುವ ಈ ಹೊಸ ಉಪಕ್ರಮವು ಸಂತ ಅಂತೋನಿ ಆಶ್ರಮದಲ್ಲಿ ಇದೇ ಮೊದಲನೆದು. “ನಿರ್ದೇಶಕರು ಮತ್ತು ಸಹಾಯಕರ ಚಿಂತನಶೀಲತೆಗೆ ನಾನು ಧನ್ಯವಾದ ಮತ್ತು ಪ್ರಶಂಸಿಸುತ್ತೇನೆ” ಎಂದು ಶ್ರೇಷ್ಠಗುರು ಮ್ಯಾಕ್ಸಿಮ್ ಹೇಳಿದರು.

ಸಂಸ್ಥೆಯ ಮರುವಿನ್ಯಾಸಗೊಳಿಸಲಾದ ವೆಬ್‌ಸೈಟ್ ಅನ್ನು ಇದೇ ಸಂದರ್ಭದಲ್ಲಿ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ ಅವರು ಮರುಪ್ರಕಟಿಸಿದರು.

ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯವರ ಸವಿನೆನಪಿಗೆ ಸಂತ ಅಂತೋನಿ ಚಾರಿಟಿ ಸಂಸ್ಥೆಯ ಗಣ್ಯರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳಿಂದ 10 ಫಲ ನೀಡುವ ಗಿಡಗಳನ್ನು ನೆಡಲಾಯಿತು.

ಫಾದರ್ ಲ್ಯಾರಿ ಪಿಂಟೋ ಅವರು ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸಿದರು ಮತ್ತು ಆಶ್ರಮ ಮತ್ತು ಅದರ ನಿವಾಸಿಗಳ ಕೆಲವು ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿದರು.

ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ರೂಪೇಶ್ ತಾವ್ರೊ ವಂದಿಸಿದರು. ಫಾದರ್ ತ್ರಿಶಾನ್ ಡಿಸೋಜಾ ಊಟಕ್ಕೂ ಮುನ್ನ ಪ್ರಾರ್ಥನೆ ಮಾಡಿದರು.

ಶ್ರೀ ಸೈಮನ್ ಪಾಯ್ಸ್, ಬಜಾಲ್ ಮತ್ತು ತಂಡದಿoದ ಬಲಿಪçಜೆಯ ಗಾಯನವನ್ನು ಆಯೋಜಿಸಲಾಗಿತ್ತು.

Very Rev. Msgr Maxim L. Noronha, Vicar General offered the thanksgiving Eucharist Mass. Rev. Fr Rupesh Tauro, Assistant Director of the Institute preached the homily.  Very Rev. Dr Victor George Dsouza, Chancellor, former Directors of the institute Rev. Dr William Barboza, Fr Lawrence DSouza, Fr Francis DSouza, Fr Trishan DSouza, Fr J. B. Crasta, Director and Fr Larry Pinto, Assistant Director were the concelebrants.

 

The former directors, benefactors, donors and well-wishers were honored during the short felicitation programme held in the Sambhram Hall. A statue of St Anthony was handed over as a token of gratitude to all benefactors.

Msgr Maxim Noronha was the chief guest and Mr Marcel Monteiro was the guest of honour for the felicitation programme. Msgr Maxim Noronha said, “No donor or benefactor does charity expecting rewards. Today, you have come to celebrate this day not with the intention to be recognised, but to thank the Lord for the generosity of heart and mind and to show your love towards this institute. Those who contribute willingly and generously towards the little ones of Jesus will find their reward in due time and God will bless them abundantly.”

Msgr Maxim noted that this new initiative of remembering the benefactors and celebrating this day in gratitude to God was the first of its kind in St Anthony Ashram. “I thank and appreciate the director and assistants for their thoughtfulness,” Msgr Maxim said.

 

The redesigned website of the institute was relaunched by Msgr Maxim Noronha on the same occasion.

 

As a tribute to St Anthony of Padua who was a lover of nature, 10 fruit-giving plants were planted by dignitaries, benefactors and students of St Anthony Charity Institutes.

Fr Larry Pinto placed on record a brief report of the activities and listed out a few requirements and needs of the ashram and its residents.

Fr J B Crasta welcomed and Fr Rupesh Tauro rendered the vote of thanks. Fr Trishan Dsouza said the grace before the meals.

The choir was organised by Mr Simon Pais, Bajal and Team.

Report and Pics by: Fr Anil Fernandes, CCC

Picture of Vijay Dsouza
Vijay Dsouza

Post a comment