Dec 5 : “ಆರಾಧನಾಂಜಲಿ” ಪುಸ್ತಕ ಇಂದು ಲೋಕಾರ್ಪಣೆ ಆಯಿತು. ಸಂತ ಜೋಸೆಫರ ಗುರುಮಠ ಮಂಗಳೂರು- ಜೆಪ್ಪು ,ಇಲ್ಲಿನ ಗುರು ಅಭ್ಯರ್ಥಿಗಳು ಜೊತೆಗೂಡಿ ಆರಾಧನಾವಿಧಿ ವರ್ಷದ ಬಗ್ಗೆ ಪುಸ್ತಕವೊಂದನ್ನು ಸಂಪಾದನೆ ಮಾಡಿದ್ದಾರೆ. ಇದರ ಪ್ರಮುಖ ಸಂಪಾದಕರು ಹಾಗೂ ಅನುವಾದಕರು ಸಹೋದರ ವಿನಯ್ ಕುಮಾರ್ ಚಿಕ್ಕಮಗಳೂರು ಧರ್ಮಕ್ಷೇತ್ರ. ಗುರುಮಠದ ಮುಖ್ಯಸ್ಥರಾದ ಅತಿ .ವಂ. ಸ್ವಾಮಿ ರೊನಾಲ್ಡ್ ಸೆರಾವೋರವರು ದೈವಾರಾಧನಾವಿಧಿಯ ಪ್ರಾಚಾರ್ಯರು ಇವರು ಈ ಪುಸ್ತಕವನ್ನು ಆಗಲೇ ಕೊಂಕಣಿ ಭಾಷೆಯಲ್ಲಿ ಬರೆದಿದ್ದರು. ಇವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಹೋ. ವಿನಯ್ ಕುಮಾರ್, ಸಹೋ. ವಿಶಾನ್ ಮೋನಿಸ್, ಸಹೋ ಕಿರಣ್, ಸಹೋ ವಿವೇಕ್ ಮತ್ತು ಸಹೋ. ಜೋವಿನ್ ರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಸಂತ ಜೋಸೆಫರ ಗುರುಮಠ ತನ್ನ ಗುರುಮಠದ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ , ಇಂದು ಅತಿ. ಪೂಜ್ಯ ಡಾ. ಅಲೋಶಿಯಸ್ ಪೌಲ್ ಡಿ’ಸೋಜ ರವರು ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಇದು ದೈವಾರಾಧನಾವಿಧಿಯ ಕ್ಷೇತ್ರದಲ್ಲಿ ಪ್ರಪ್ರಥಮ ಕನ್ನಡ ಪುಸ್ತಕವಾಗಿ ಹೊರಹೊಮ್ಮಿದೆ. ಕೃತಿ ಪರಿಶೀಲನೆ ಮಾಡಿದ ವಂ. ಸ್ವಾಮಿ ಜೆ. ಬಿ. ಕ್ಸೇವಿಯರ್ ಹಾಗೂ ಅಧಿಕೃತ ಅನುಮತಿ ನೀಡಿದ ಅತಿ. ಪೂಜ್ಯ ಡಾ. ಅಂತೋಣಿ ಸ್ವಾಮಿ ರವರಿಗೆ ಕರ್ನಾಟಕ ಜನತೆ ಆಭಾರಿಯಾಗಿದೆ.