ಫೋಟೋ :ಸ್ಟ್ಯಾನ್ಲೀ ಬಂಟ್ವಾಳ್
ಆಗಸ್ಟ್, 22, 2018: ಇದೇ ಸಪ್ಟೆಂಬರ್ 15ರಂದು ರೊಜಾರಿಯೊ ಚರ್ಚಿನ ಮೈದಾನದಲ್ಲಿ ನಡೆಯುವ ಮಂಗಳೂರು ಧರ್ಮಪ್ಯಾಂತದ ನೂತನ ಧರ್ಮಾಧ್ಯಕ್ಷರ ದೀಕ್ಷೆ, ಪಟ್ಟಾಭಿಷೇಕದ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾದ ಸನ್ಮಾನ್ಯ ಯು. ಟಿ. ಖಾದರ್ರವರು ಮಂಗಳವಾರ 21ರಂದು ಚರ್ಚಿಗೆ ಭೇಟಿ ನೀಡಿ ಕಾರ್ಯಕ್ರಮದ ಸಂಯೋಜಕರಾದ ವಂದನೀಯ ಜೆ. ಬಿ. ಕ್ರಾಸ್ತ ಮತ್ತು ಸಹ-ಸಂಯೋಜಕರಾದ ಎಂ. ಪಿ. ನೊರೊನ್ಹಾರವರೊಂದಿಗೆ ವಿಚಾರಿಸಿ ಮಾತುಕತೆ ನಡೆಸಿದರು.
ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರ ದೀಕ್ಷೆ ಹಾಗೂ ಪಟ್ಟಾಭಿಷೇಕದ ಕಾರ್ಯಕ್ರಮವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ ಇಡೀ ಸಮಾಜದ ಕಾರ್ಯಕ್ರಮವಾಗಿರುವುದರಿಂದ ಜಿಲ್ಲಾಡಳಿತದಿಂದ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲು ತಾವು ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ಇತ್ತರು.
ಕಾರ್ಯಕ್ರಮವು ರೊಜಾರಿಯೊ ಚರ್ಚಿನಲ್ಲಿ ನಡೆಯಲಿದ್ದು, ಸುಮಾರು 15 ಸಾವಿರ ಜನ ಪಾಲುಗೊಳ್ಳುವ ನಿರೀಕ್ಷೆ ಇದೆ. ರೊಜಾರಿಯೊ ಚರ್ಚ್ನ ಸಹಾಯಕ ಗುರುಗಳು ವಂ. ಫ್ಲೇವಿಯನ್ ಲೋಬೊ ಹಾಗೂ ಪಾಲನ ಸಮಿತಿಯ ಉಪಧ್ಯಾಕ್ಷರಾದ ಸಿ.ಜೆ. ಸೈಮನ್ರವರು ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಸಚಿವರಿಗೆ ಆಮಂತ್ರನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು