10 women achievers to be awarded during Canara Catholic Women’s Mega Convention on March 4

❤️ Spread the love ❤️ |

Media Release 

Mangaluru, Feb 23, 2018 : The Pivotal Association of the Catholic Lay faithful of the diocese of Mangalore, Catholic Sabha, Mangalore Pradesh ®, established in the year 1979 will be organising Mega convention of the Canara Catholic women on 4 March, 2018 in collaboration with the Catholic Sabha of Udupi diocese and the Diocesan Council of Catholic Women, diocese of Mangalore. The convention will be held at St Agnes Special school grounds Bendur. The convention is held to coincide with the International Women’s day. Most Rev Dr Aloysius Paul D’souza, Bishop of Mangalore will be presiding over the convention which will be conducted with the objective “Effective Leadership of Canara Catholic Women for a Progressive Society”.

Renowned social activist and the former chairperson of the Karnataka Soaps and Detergents Board Smt. Veronica Cornelio will be delivering the key note address. Shri Ronald Colaco , Non Resident Entrepreneur;  Shri J R Lobo, Member Legislative Assembly, Karnataka;  Shri Ivan Dsouza, Chief Whip, Legislative Council, Karnataka; Very Rev Sr M. Lillis, Vice Provincial General, Bethany Sisters; Very Rev J B Crasta, Dean of the Episcopal Deanery; Adv M P Noronha, Secretary Mangalore Diocesan Pastoral Council; Mishall Queeny Dcosta, IRS will grace the occasion. ‘Striyarigagi Sarakara’ (Government for Women), a hand book compiled by Stephen Quadros Permude will be released during the convention.

At the beginning of the convention a ‘Clean Environment Rally’ based on the ‘Laudate Si’ call of Pope Francis will be held at 8-30 AM starting from Mallikatte to St Agnes Special School.

10 women achievers of the community in 10 different fields will be conferred with the ‘Catholic Sabha Sthree Sadhan Award 2018’. The award consists of a citation, a plaque, a shawl and cash prize of Rs 10000/-.

Anil Lobo, President, Catholic Sabha Mangalore Pradesh; Rev Fr Mathew Vas, Spiritual Director, Catholic Sabha Mangalore Pradesh; Valerian Fernandes , President, Catholic Sabha Udupi Pradesh; Anil Patrao, Convener, Awards Committee Catholic Sabha Mangalore Pradesh; Terry Pais , President, Diocesan Council of Catholic Women Mangalore Diocese and Vincent Mascarenhas , Convener, Media Committee were present in the press meet.

List of Awardees : 

1.  AGRICULTURE
Smt.  PAULINE FLOSSY PINTO, Taccode
Smt. Pauline Flossy Pinto, wife of Sri Leslie Pinto of Taccode is a person who had a great attraction towards agriculture right from her childhood. For the past 25 years she is engaged in agriculture, cultivating paddy and Coconut, Arecanut, Rubber, Pepper, Plantain and other  fruit bearing trees like Mango, Jack, Chikku, Gauva, Cashew and many other  varieties. Other than these she also grows beetle leaves and vegetables. She rears cattle and was the director of Beerav  Milk Society. She takes special interest in organic farming. Her interview has been broadcast in Akashvani, Mangalore. Pauline Flossy, who is a B.A graduate is a multi-talented personality having bagged many laurels  in sports. She also does community service  in between her busy schedule.
2.  DIFFERENTLY ABLED
Smt.  JESSLINE  ELIZABETH MARY LEWIS, Mount Rosary, Kallianpur
Smt. Jessline Elizabeth Mary Lewis who is the daughter of Smt. Cynthia Lewis of Udupi is speech impaired and has only 20% hearing. Her early education took place in various cities including Udupi, Chennai, Bengaluru and Mumbai. After her education, she learnt typing, computers, tailoring, embroidery, flower making, cooking and attained training  in others talents/activities.

She completed her Beautician Course and worked in Kerala for a year. Returning to her native Udupi , she founded her own institute Jess Beauty Spa and Saloon and has been running it successfully for the last nine years. 3 years back she started a Beautician Course in her Institute and has been training differently abled girls among others. Its heartening that among the many students of hers, five persons who were speech and hearing impaired, have successfully completed the course and are gainfully employed.  Jessline has a special talent for western Dance.

3.  EDUCATION CATEGORY
Kum. JULIANA LOBO,  Derebail
Kum. Juliana Lobo was a brilliant student of her times who passed her B.A. (Mathematics) around 70 years back from St. Agnes College, Mangalore. After teaching for 5 years, she earned her B.T. degree.  Coming to know of her exceptional skills in mathematics, the Apostolic Carmel Sisters sent her on teaching missions to Kundapura and Sri Lanka, and later on, she settled at St. Agnes High school, Bendore, Mangalore. She also taught in Capitanio High School, St. Aloysius High School and Rosario High School.  She earned a name as an exceptional Maths Teacher and hundreds of other students from the neighbourhood thronged to her house, especially during Board Examinations for tuitions which she gave free of cost, most of the time.    She was also a social worker and silently helped numerable needy and poor.  She dedicated her entire life in the service of the Community.  Many of her old students who had been taught by her, still visit her at her ripe old age in admiration and gratitude.
4.  ENTREPRENEUR
Smt.  EULALIA D`SOUZA,  Bejai
Smt. Eulalia D`Souza, originally from Kateel, wife of Sri Donnet D`Souza, Bejai,  is a successful Entrepreneur. Her organization “Lia Travels & Tours” is one of the reputed and organized tour operators of Mangalore and Western Karnataka. Apart from the normal business activities of the travel & tourism Industry, her organization is the authorized receivers of the Luxury Cruise Liners visiting the New Mangalore Port Trust attracting almost 20-25 thousand foreign tourists in a season. She is a member of the Advisory board of the Mangalore Airport Authority.

She is a Science Graduate with Professional Diploma in Travel & Tourism from IITC, Mumbai and Air India College, Mumbai.  She has represented the Mangalore University Basket Ball team and the National College team.  She is the Chair Person of the Sub Committee of Women Entrepreneurs of Canara Chamber of Commerce & Industry and Secretary of the RACHANA Management Board.  She is the President of Sunrise Rotary Club of Mangalore and a guest faculty in Mangalore University and other colleges, and an Excellent Master of Ceremony and a reputed Toast Master.  She has bagged many Awards and honours from various organizations.

 

5.  GOVERNMENT SERVICE
Smt. LINET CASTELINO,  Nithyadhar Nagar
Smt. Linet Castelino hails from a poor family.  She completed her studies amidst great difficulties and joined the Karnataka Police Department.  Since 1993, she is serving as a honest and upright officer in the department.  Recognizing her honest and disciplined service, she was promoted a number of times.   Being in the department she has helped hundreds of poor people, irrespective of caste, creed and religion, many a times swimming against the current.

In spite of the work pressure and untimely schedules of the Police Department, she has served in many community and social organizations in a leadership role.  Presently, she is working as Asst. Sub Inspector in the Internal Security Division.

 

6.   HEALTH
Smt. MARY VAS, Derebail
Smt. Mary Vas who hails from Derebail, Mangalore has served in the nursing field for the past 43 years.  After completing her P.U.C. education, she got trained in Nursing and Midwifery. She joined the Karnataka Government Health Department in 1974 as Staff Nurse. After serving 2 years in Chitradurga District, she served at Wenlock Hospital, Mangalore from 1976 to 1990 and later on for 2 years in E.S.I. hospital after which she took Voluntary Retirement.

She served 2 years in the Defense Hospital in Saudi Arabia and returned to serve 15 years in K.M.C. Hospital, Mangalore as Nursing Supervisor.  Presently, she is serving in Yenepoya Hospital, Mangalore as Nursing Superintendent since 10 years. She has secured many Awards and honours for her service in various departments of the Health sector. Apart from her profession, she also does  a lot of social and community service

7.  LITERATURE AND FINE  ARTS
Smt.  MERLYN RASQUINHA , Angelore
Smt. Merlyn Rasquinha from Angelore is famous name in the country, a terracota artist/sculptor. After completing her matriculation she earned her Diploma from the JJ school of Arts, Mumbai. While she was serving in reputed companies in Mumbai and Bangalore as a commercial artist she came in contact with Arthur Rasqinha of Simon & Co. and they united in marriage.
Initially, she earned success in the creation of artistic utensils and decorative items. She continued her market research and ventured into contemporary and attractive artefacts for the market, especially ladies ornamental jewellery, in which she became famous. She is the founder member and vice president of the Karnataka Handicrafts Artisans. She has conducted many painting camps. She has also held fine art exhibition in many cities. She has earned a name in training girls who have discontinued education,  through Terracota art camps.
8.   PROFESSIONAL
Smt. VIOLET J. PEREIRA,  Bendore
Smt. Violet J. Pereira, Bendore has been successfully running her website Mangalorean.com since 2010. Though her profession is Journalism known for her fearlessness and dynamism,  she has a great interest in social service.

“The Parivarthan Charitable Trust” established by Violet in 2016 is a beacon of hope to the transgenders. She is working tirelessly for mitigating the various problems faced by transgenders. She is also working towards getting justice for children who were victims of sexual exploitation. Through Fathima Education Trust, she is helping the children affected by HIV in continuing their education. She has been honoured by many organisations for her social service.

9.   SOCIAL SERVICE 
Kum. REMEDIA D’SOUZA, Belman
Kum. Remedia D’Souza of Belman is a well known figure in the Social Service circles in and around Udupi District.  She has spent the last 40 years, serving among the downtrodden and weaker sections of the society.  She was the first woman President of the Udupi District Panchayat.  As a founder member of the Catholic Sabha and Manasa Rehabilitation Centre, Pambur, she has rendered yeomen service as its Managing Trustee for 9 years.  She has been an active member of St. Vincent De Paul Society.  As a member of the Land Tribunal, Zilla Parishad, Zilla Panchayat, she has given tremendous service to the helpless and needy people irrespective of their caste, creed and religions. She has been honoured by the Rotary Club, Pingara Kannada Daily and other organizations.
10.   SPORTS
Kum.  JOYLINE MURIEL LOBO, Shirthady
Kum. Joyline Muriel Lobo, who is 27 year old, is an international sports person in the Triple jump discipline and a national champion. At the state level, she has won the individual championship in athletics.

Currently working at LIC of India, she is the record holder at national level in LIC sports meets and has been individual champion at national level five times. For her stupendous achievements in sports she has earned a number of awards and honours including the state government honour and cash prize.


ಕೆನರಾ ಕಥೊಲಿಕ್ ಮಹಿಳಾ ಬೃಹತ್ ಸಮಾವೇಶ ಮಾರ್ಚ್ 4 ರಂದು , 10 ಮಂದಿ ಮಹಿಳಾ ಸಾಧಕರಿಗೆ ಸನ್ಮಾನ

ಕಥೋಲಿಕ ಸಭಾ ಮಂಗಳೂರು ಪ್ರದೇಶ (ರಿ), ಕಥೋಲಿಕ ಸಭಾ ಉಡುಪಿ ಪ್ರದೇಶ (ರಿ) ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಮಂಡಳಿಯ ಜಂಟಿ ಆಶ್ರಯದಲ್ಲಿ ಮಾರ್ಚ್ 4, 2018 ರಂದು ಪೂರ್ವಾಹ್ನ 9 ರಿಂದ 1.30 ವರೆಗೆ ಮಂಗಳೂರಿನ ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್ ಆವರಣದಲ್ಲಿ ಕೆನರಾ ಕಥೋಲಿಕ ಮಹಿಳಾ ಬೃಹತ್ ಸಮಾವೇಶ ನಡೆಯಲಿದೆ. “ಪ್ರಗತಿಪರ ಸಮಾಜಗೋಸ್ಕರ ಕೆನರಾ ಕಥೋಲಿಕ ಸ್ತ್ರೀಯರ ನಾಯಕತ್ವ” ಧ್ಯೇಯದೊಂದಿಗೆ ಕಥೋಲಿಕ ಸಮಾಜದ ಮಹಿಳೆಯರನ್ನು ಒಗ್ಗೂಡಿಸಿ ಸಮಾಜ ಹಾಗು ಸಮುದಾಯಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದÀ ಹಮ್ಮಿಕೊಂಡಿರುವ ಈ ಸಮಾವೇಶದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ ಸಹಸ್ರಾರು ಮಹಿಳೆಯರು ಭಾಗವಹಿಸಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಅಲೋಶೀಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಬೂನುಗಳು ಮತ್ತು ಮಾರ್ಜಕ ನಿಗಮದ ಮಾಜಿ ಮುಖ್ಯಸ್ಥೆ ಶ್ರೀಮತಿ ವೆರೋನಿಕಾ ಕರ್ನೆಲಿಯೊ ಸಮಾವೇಶದ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಬೆಥನಿ ಸಂಸ್ಥೆಯ ಸಹ ಮುಖ್ಯಸ್ಥೆ ಸಿ. ಲಿಲ್ಲಿಸ್, ವಂ. ಗುರು ಜೆ. ಬಿ. ಕ್ರಾಸ್ತಾ, ಮಿಶಲ್ ಕ್ವೀನಿ ಡಿಕೊಸ್ತಾ, ಎಂ.ಪಿ. ನೊರೊನ್ಹಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ಸಂಗ್ರಹಿಸಿರುವ ಮಹಿಳೆಯರಿಗೆ ಸರಕಾರಿ ಸವಲತ್ತುಗಳ ಕುರಿತು ಮಾಹಿತಿ ನೀಡುವ ‘ಸ್ತ್ರೀಯರಿಗಾಗಿ ಸರ್ಕಾರ’ ಎಂಬ ಪುಸ್ತಕ ಬಿಡುಗಡೆಯಾಗಲಿದೆ. ಪರಿಸರ ರಕ್ಷಣೆ ಹಾಗೂ ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಗದ್ಗುರು ಫ್ರಾನ್ಸಿಸ್ ಅವರ (ಲಾವ್ದಾತೆ ಸೀ) ಸಂದೇಶದಂತೆ ಪೂರ್ವಾಹ್ನ 8.30 ರಿಂದ ಕದ್ರಿ ಮಲ್ಲಿಕಟ್ಟೆಯಿಂದ ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್ ತನಕ ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸಾಧನಾ ಪ್ರಶಸ್ತಿ:: ಕಥೋಲಿಕ ಸ್ತ್ರೀಯರು ಸಮುದಾಯ ಹಾಗೂ ಸಮಾಜದ ಏಳಿಗೆಗಾಗಿ ನೀಡಿರುವ ಕೊಡುಗೆ ಅಪಾರ. ಕಥೋಲಿಕ ಸಮಾಜದ ಚರಿತ್ರೆಯಲ್ಲಿ ಪ್ರಥಮ ಬಾರಿವೆಂಬಂತೆ ಮಹಿಳಾ ಸಮಾವೇಶದ ಸಂದÀರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವ 10 ಮಹಿಳೆಯರನ್ನು ಗುರುತಿಸಿ ‘ಕಥೊಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ 2018’ ನೀಡಿ ಗೌರವಿಸಲಾಗುವುದು. ಸಮಾಜದ ಅಭಿವೃದ್ದಿಗಾಗಿ ಶ್ರಮಿಸಿದ 10 ಹಿರಿಯ ಮಹಿಳೆಯರ/ಸಂಸ್ಥೆಗಳ ಹೆಸರಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು. ಈ ಪ್ರಶಸ್ತಿಯೊಂದಿಗೆ ಶಾಲು, ಮಾನಪತ್ರ, ಸ್ಮರಣಿಕೆ ಹಾಗೂ ರೂ 10000/- ನಗದು ಇರುವುದು.

ಶ್ರೀ ಅನಿಲ್ ಲೋಬೊ (ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ) ,  ವಂ. ಮ್ಯಾಥ್ಯು ವಾಸ್ (ಆಧ್ಯಾತ್ಮಿಕ ನಿರ್ದೆಶಕರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ), ಶ್ರೀ ವಲೇರಿಯನ್ ಫೆರ್ನಾಂಡಿಸ್ (ಅಧ್ಯಕ್ಷರು, ಕಥೊಲಿಕ್ ಸಭಾ ಉಡುಪಿ ಪ್ರದೇಶ), ಶ್ರೀ ಅನಿಲ್ ಪತ್ರಾವೊ (ಸಂಚಾಲಕರು, ಪುರಸ್ಕಾರ ಸಮಿತಿ) , ಶ್ರೀಮತಿ ಟೆರಿ ಪಾಯ್ಸ್ (ಅಧ್ಯಕ್ಷರು, ಮಹಿಳಾ ಮಂಡಳಿ ಮಂಗಳೂರು ಧರ್ಮಪ್ರಾಂತ್ಯ) ಹಾಗೂ ಶ್ರೀ ವಿನ್ಸೆಂಟ್ ಮಸ್ಕರೇನಸ್ (ಸಂಚಾಲಕರು, ಮಾಧ್ಯಮ ಸಮಿತಿ) ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಪಶಸ್ತಿ ವಿಜೇತರ ಪಟ್ಟಿ : 

1. ಕೃಷಿ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ಪಾವ್ಲಿನ್ ಪ್ಲೊಸ್ಸಿ ಪಿಂಟೊ, ತಾಕೊಡೆ


ತಾಕೊಡೆಯ ಲೆಸ್ಲಿ ಪಿಂಟೊರವರ ಪತ್ನಿಯಾದ ಪಾವ್ಲಿನ್ ಪ್ಲೊಸ್ಸಿ ಪಿಂಟೊರವರಿಗೆ ಚಿಕ್ಕಂದಿನಿಂದಲೂ ಕೃಷಿಯೆಂದರೆ ವಿಶೇಷ ಆಸಕ್ತಿ. ಕಳೆದ 25 ವರ್ಷಗಳಿಂದ ಕೃಷಿ ಹಾಗೂ ಸಾಗುವಳಿ ಮಾಡುವ ಅವರು ತೋಟದಲ್ಲಿ ಭತ್ತ, ತೆಂಗು, ಅಡಿಕೆ, ರಬ್ಬರ್, ಕರಿಮೆಣಸು, ಬಾಳೆ ಹಾಗೂ ಹಣ್ಣುಗಳಾದ ಮಾವು, ಹಲಸು, ಚಿಕ್ಕು, ಪೇರಳೆ, ಗೇರು, ನೇರಳೆ ಹಾಗೂ ಇತರ ಜಾತಿಯ ಮರಗಳು ಇವೆ.
ಇದಲ್ಲದೆ ವೀಳ್ಯದೆಲೆ ಹಾಗೂ ಅನೇಕ ತರದ ತರಕಾರಿಗಳನ್ನೂ ಅವರು ಬೆಳೆಸುತ್ತಾರೆ. ಸಾವಯವ ಕೃಷಿಯಲ್ಲಿ ಅವರಿಗೆ ವಿಶೇಷ ಆಸಕ್ತಿ. ಹೈನುಗಾರಿಕೆಯನ್ನು ನಡೆಸುವ ಅವರು 3 ವರ್ಷಗಳ ಕಾಲ ಬಿರಾವ್ ಹಾಲಿನ ಸೊಸಾಯಿಟಿಯ ನಿರ್ದೇಶಕರಾಗಿದ್ದರು. ಮಂಗಳೂರು ಆಕಾಶವಾಣಿಯಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ. ಬಿ.ಎ. ಪದವೀಧರರಾಗಿರುವ ಪ್ಲೋಸ್ಸಿಯವರು ಆಟೋಟಗಳಲ್ಲಿಯೂ ಅನೇಕ ಬಹುಮಾನಗಳನ್ನೂ ಗೆದ್ದಿದ್ದಾರೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಅವರು ಸಮಾಜ ಸೇವೆಯನ್ನು ಮಾಡಿರುತ್ತಾರೆ.

2. ವಿಶೇಷ ಸಾಮಥ್ರ್ಯದ ಸ್ತ್ರೀ ಸಾಧಕಿ : ಶ್ರೀಮತಿ ಜೆಸ್ಲಿನ್ ಎಲಿಜಾಬೆತ್ ಮೇರಿ ಲುವಿಸ್ : ಕಲ್ಯಾಣಪುರ


ಬಾಲ್ಯದಿಂದಲೆ ಭಿನ್ನ ಸಾಮಥ್ರ್ಯದ ಶಿಶುವಾಗಿ ಬೆಳೆದು ಬಂದ ಜೆಸ್ಲಿನ್ ಎಲಿಜಾಬೆತ್ ಮೇರಿ ಲುವಿಸ್ ಬರೇ 20 ಶೇಕಡದಷ್ಟೇ ಶ್ರವಣ ಸಾಮಥ್ರ್ಯ ಹೊಂದಿರುವ ಇವರು ಮೌಖಿಕ ಶಕ್ತಿಯನ್ನು ಹೊಂದಿರುವುದಿಲ್ಲ. ಅದಾಗ್ಯೂ ಚೆನ್ನೈ, ಕಲ್ಯಾಣುಪುರ, ಬೆಂಗಳೂರು, ಮುಂಬಾಯಿ ಮುಂತಾದ ಕಡೆ ಅವರು ತಮ್ಮ ಶಿಕ್ಷಣ ಪೂರೈಸಿದರು. ಟೈಪಿಂಗ್, ಕಂಪ್ಯೂಟರ್, ಟೇಲರಿಂಗ್, ಎಂಬ್ರೋಯ್ಡರಿ, ಫ್ಲವರ್ ಮೇಕಿಂಗ್, ಅಡುಗೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ಸಂಪಾದಿಸಿದರು.
ತನ್ನ ತರಬೇತಿಯನ್ನು ಪೂರೈಸಿದ ನಂತರ ಕೇರಳದಲ್ಲಿ ಬ್ಯೂಟೀಶಿಯನ್ ಆಗಿ ಸೇವೆ ಸಲ್ಲಿಸಿದರು. ಉಡುಪಿ ಹಾಗೂ ಮಣಿಪಾಲದಲ್ಲಿ ಜೆ’ಸ್ ಬ್ಯೂಟಿ ಸ್ಪಾ ಎಂಡ್ ಸೆಲೂನ್ ನಲ್ಲಿ 9 ವರ್ಷದಿಂದ ಬ್ಯೂಟೀಶಿಯನ್ ಆಗಿ ದುಡಿಯುತ್ತಿದ್ದಾರೆ. ಈ ಕೇಂದ್ರದಿಂದ ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ 5 ಜನರು ಭಿನ್ನ ಸಾಮಥ್ರ್ಯದವರಾಗಿರುತ್ತಾರೆ. ಎನ್ನುವುದು ಅಭಿಮಾನದ ವಿಷಯವಾಗಿದೆ.

3. ಶಿಕ್ಷಣ ಕ್ಷೇತ್ರದ ಸ್ತ್ರೀ ಸಾಧಕಿ : ಕುಮಾರಿ ಜುಲಿಯಾನಾ ಲೋಬೊ : ದೇರೆಬೈಲ್


ಸೈಂಟ್ ಅಗ್ನೇಸ್ ಕಾಲೇಜ್ ಮಂಗಳೂರಿನಿಂದ ಗಣಿತಶಾಸ್ತ್ರದಲ್ಲಿ ಬಿ ಎ ಪದವಿಯನ್ನು ಪಡೆದ ಇವರು ವೃತ್ತಿ ಜೀವನದ ಆರಂಭದಲ್ಲಿ 5 ವರ್ಷ ಶಿಕ್ಷಕಿಯಾಗಿ ಅಪಾರ ಪರಿಶ್ರಮ ತೋರಿಸಿ ಬ್ಯಾಚಲರ್ ಆಫ್ ಟೀಚಿಂಗ್ ಪದವಿ ಸಂಪಾದಿಸಿದರು. ನಂತರ ಇವರು ಅಪೊಸ್ತಲಿಕ್ ಕಾರ್ಮೆಲ್ ಭಗಿನಿಯರಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸೆಳೆಯಲ್ಪಟ್ಟರು. ಕುಂದಾಪುರ, ಶ್ರೀಲಂಕಾ ಹಾಗೂ ಮಂಗಳೂರು ಬೆಂದೂರಿನ ಕಾರ್ಮೆಲ್ ಶಿಕ್ಷಣ ಸಂಸ್ಥೆಗಳಲ್ಲಿ ನಿಷ್ಟಾವಂತ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಕಿಯಾಗಿ ಹೆಸರಾಂತರಾದರು. ನಂತರ ಕಪಿತಾನಿಯೊ ಹೈಸ್ಕೂಲ್ ಆಂಜೆಲೊರ್, ಸೈಂಟ್ ಎಲೋಶಿಯಸ್ ಕೊಡಿಯಾಲ್‍ಬಯ್ಲ್ ಹಾಗೂ ರೊಜಾರಿಯೊ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕಿಯಾಗಿ ಪ್ರಖ್ಯಾತರಾದರು. ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ ಶಿಕ್ಷಣ ನೀಡಿರುವ ಇವರು ಪ್ರಸ್ತುತ 92 ವರ್ಷಗಳ ಪ್ರಾಯದ ಸಂಜೆ ಜೀವನವನ್ನು ನಡೆಸುತ್ತಿದ್ದು. ಹಲವಾರು ವಿದ್ಯಾರ್ಥಿಗಳಿಂದ ಸುತ್ತುವರೆದು ಸುಖಜೀವನ ನಡೆಸುತ್ತಿದ್ದಾರೆ.

4. ಉದ್ಯಮ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ಇವ್ಲಾಲಿಯ ಡಿ`ಸೋಜಾ : ಬಿಜೈ

ಮಂಗಳೂರಿನ ಇವ್ಲಾಲಿಯಾ ಡಿ`ಸೋಜಾರವರು ನಾಡಿನ ಒಬ್ಬ ಯಶಸ್ವಿ ಉದ್ಯಮಿ ಆಗಿರುತ್ತಾರೆ. ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಹಾಗೂ ಅತ್ಯುತ್ತಮ ಟೂರ್ ಆಪರೇಟರುಗಳ ಪಯ್ಕಿ ಇವರ ಸಂಸ್ಥೆ ‘ಲಿಯಾ ಟ್ರಾವೆಲ್ಸ್ ಆಂಡ್ ಟೂರ್ಸ್’ ಒಂದು. ಸಾಮಾನ್ಯ ಪ್ರಯಾಣದ ಎಲ್ಲಾ ರೀತಿಯ ವ್ಯವಹಾರಗಳೊಂದಿಗೆ ನವ ಮಂಗಳೂರು ಬಂದರಿಗೆ ಆಗಮಿಸುವ ಐಷಾರಾಮಿ ಕ್ರೂಸ್ ಹಡಗುಗಳ ಆಧಿಕೃತ ಪ್ರತಿನಿಧಿಗಳಾಗಿ ವಾರ್ಷಿಕ ಸುಮಾರು 20-25 ಸಾವಿರ ವಿದೇಶಿ ಪ್ರವಾಸಿಗರನ್ನು ನಾಡಿಗೆ ಆಕರ್ಷಿಸುತ್ತಾರೆ. ಇವರು ವಿಮಾಣ ನಿಲ್ದಾಣ ಪ್ರಾಧಿಕಾರದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.

ತಮ್ಮ ಬಿಎಸ್‍ಸಿ ಪದವಿ ಶಿಕ್ಷಣದ ನಂತರ ಮುಂಬಾಯಿಯ ಐಐಟಿಸಿ ಹಾಗೂ ಏರ್ ಇಂಡಿಯಾ ಕಾಲೆಜ್‍ನಿಂದ ‘ಟ್ರಾವೆಲ್ ಹಾಗೂ ಟೂರಿಸಂ’ನಲ್ಲಿ ವೃತ್ತಿಪರ ಡಿಪ್ಲೊಮಾ ಪಡೆದರು. ಆಥ್ಲೆಟಿಕ್ಸ್ ಹಾಗೂ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಕಾಲೆಜ್ ತಂಡವನ್ನೂ ಪ್ರತಿನಿಧಿಸಿದ್ದಾರೆ, ಕೆನರಾ ಚೇಂಬರ್ ಆಫ್ ಕಾಮರ್ಸ್‍ನಲ್ಲಿ ಮಹಿಳಾ ಉದ್ಯಮಿಗಳ ಉಪ ಸಮಿತಿಯ ಅಧ್ಯಕ್ಷರು ಹಾಗೂ ರಚನಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಇತರ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಉತ್ತಮ ಕಾರ್ಯ ನಿರ್ವಾಹಕಿಯಾಗಿರುವ ಅವರು ಹೆಸರುವಾಸಿ ಟೋಸ್ಟ್ ಮಾಸ್ಟರ್ ಕೂಡಾ ಆಗಿದ್ದಾರೆ. ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

5. ಸರ್ಕಾರಿ ಸೇವೆಯ ಕ್ಷೇತ್ರದ ಸಾಧಕಿ: ಶ್ರೀಮತಿ ಲಿನೆಟ್ ಕ್ಯಾಸ್ತೆಲಿನೊ ನಿತ್ಯಾಧರನಗರ 


ತೀರಾ ಬಡ ಮತ್ತು ಸಾಮಾನ್ಯ ಸಾಮಾಜಿಕ ಹಿನ್ನಲೆಯಿಂದ ಬೆಳೆದು ಬಂದ ಇವರು ಹಲವು ಸಂಘರ್ಷಗಳ ನಡುವೆಯೂ ಉನ್ನತ ಶಿಕ್ಷಣ ಸಂಪಾದಿಸಿದರು. ಮಹಿಳೆಯರು ಪೋಲೀಸು ಖಾತೆಗೆ ಆಕರ್ಷಿತರಾಗದೆ ಇದ್ದ ಆ ಕಾಲದಲ್ಲಿ ಜೀವನದ ಪಂಥಾಹ್ವಾನ ಸ್ವೀಕರಿಸಿ 1993 ರಲ್ಲಿ ಪೋಲೀಸು ಖಾತೆಗೆ ಸೇವೆಗೆ ಸೇರಿದರು. ಇವರ ಪ್ರಾಮಾಣಿಕ ಮತ್ತು ನಿಷ್ಟಾವಂತ ಸೇವೆಯನ್ನು ಗೌರವಿಸಿ ಅವರಿಗೆ ವಿವಿಧ ಭಡ್ತಿಗಳನ್ನು ನೀಡಲಾಯ್ತು. ಪ್ರಸ್ತುತ ಎಸಿಸ್ಟೆಂಟ್ ಸಬ್ ಇನ್‍ಸ್ಪೆಕ್ಟರ್ ಆಗಿ ಶ್ರಮಿಸುತ್ತಿರುವ ಇವರು ತಮ್ಮ ಹುದ್ದೆಯಲ್ಲಿರುತ್ತಾ ಕಾನೂನಿನ ಮತ್ತು ನ್ಯಾಯದ ಸುರಕ್ಷೆಗಾಗಿ ನಿರಂತರ ದುಡಿದಿರುತ್ತಾರೆ. ಬಡಬಗ್ಗರಿಗೆ ನ್ಯಾಯ ಒದಗಿಸಲು ತನ್ನ ಎಲ್ಲಾ ಶಕ್ತಿಗಳನ್ನು ವ್ಯಯಿಸಿರುವ ಇವರು ಜನಾನುರಾಗಿಯೂ ಆಗಿರುತ್ತಾರೆ. ಒಬ್ಬ ಸಮರ್ಥ ಸರ್ಕಾರಿ ಅಧಿಕಾರಿಯಾಗಿದ್ದ ಇವರು ತನ್ನ ಬಿಡುವಿನ ಕಾಲದಲ್ಲಿ ಸಮುದಾಯದ ಹಲವಾರು ಸಂಘ ಸಂಸ್ಥೆಗಳ ಮೂಲಕ ಜನಸೇವೆಯಲ್ಲಿ ತೊಡಗಿರುತ್ತಾರೆ.

6. ಆರೋಗ್ಯ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ಮೇರಿ ವಾಸ್, ದೇರೆಬೈಲ್

ದೆರೆಬೈಲಿನ ಮೇರಿ ವಾಸ್‍ರವರು ನರ್ಸಿಂಗ್ ಕ್ಷೇತ್ರದಲ್ಲಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಪಿಯುಸಿ ಶಿಕ್ಷಣ ಮುಗಿಸುತ್ತಲೇ ನರ್ಸಿಂಗ್ ಹಾಗೂ ಸೂಲಗಿತ್ತಿಯ ಸೇವೆಯಲ್ಲಿ ತರಬೇತಿಯನ್ನು ಅವರು ಪಡೆದರು. 1974 ರಲ್ಲಿ ಸ್ಟಾಫ್ ನರ್ಸ್ ಆಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. 2 ವರ್ಷ ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಸೇವೆ ಆರಂಭಿಸಿ, 1976 ರಿಂದ 1990 ರ ತನಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ನಂತರ 2 ವರುಷ ಇ.ಎಸ್.ಐ. ಆಸ್ಪತ್ರೆಯಲ್ಲಿ ಸೇವೆ ನೀಡಿ ಸ್ವಯಂ ನಿವೃತ್ತಿ ತೆಗೆದು ಕೊಂಡರು.
80 ರ ದಶಕದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತ ನಿಧಿ ಹೆಲ್ಪ್ ಲಾಯ್ನ್ ಸ್ಥಾಪಿಸಿದ ತಂಡದ ಸದಸ್ಯೆಯಾಗಿದ್ದರು. ಎರಡು ವರುಷ ಸೌದಿ ಅರೇಬಿಯದ ಡಿಫೆನ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ 15 ವರುಷ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರ್‍ವೈಸರ್ ಆಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಕಳೆದ ಹತ್ತು ವರುಷಗಳಿಂದ ಮಂಗಳೂರು ಯೆನೆಪೆÇೀಯ ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಸ್ಪತ್ರೆಯ ವಿವಿಧ ವಿಭಾಗಳಲ್ಲಿ ಸೇವೆ ಸಲ್ಲಿಸಿದ್ದಕ್ಕೋಸ್ಕರ ಅವರಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

7. ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ಮರ್ಲಿನ್ ರಸ್ಕಿನ್ಹಾ : ನಾಗೋರಿ


ನಾಡಿನಾದ್ಯಂತ ಟೆರ್ರಕೊಟ್ಟಾ ಕಲೆಗೆ ಹೆಸರಾಗಿರುವ ಆಂಜೆಲೊರ್ ಮಂಗಳೂರಿನ ಮರ್ಲಿನ್ ರಸ್ಕಿನ್ಹಾ ತನ್ನ ಮೆಟ್ರಿಕ್ ಶಿಕ್ಷಣದ ನಂತರ ಮುಂಬಾಯಿಯ ಪ್ರತಿಷ್ಟಿತ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್‍ನಿಂದ ಕಲಾ ವಿಷಯದಲ್ಲಿ ಡಿಪ್ಲೋಮಾ ಪಡೆದರು. ಬೆಂಗಳೂರು ಮತ್ತು ಮುಂಬಾಯಿಯ ಹೆಸರಾಂತ ಕಂಪೆನಿಗಳಲ್ಲಿ ಕಮರ್ಶಿಯಲ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಇವರು ಕರಾವಳಿಯ ಪ್ರಖ್ಯಾತ ಕಲಾ ಸಂಸ್ಥೆ ಸಾಯ್ಮನ್ ಆಂಡ್ ಕಂಪೆನಿಯ ಆರ್ಥರ್ ರಸ್ಕೀನ್ಹಾರೊಡನೆ ವಿವಾಹವಾದರು. ಕಲಾತ್ಮಕ ಪಾತ್ರೆ ಪಗಡಗಳ ವಿನ್ಯಾಸ ಮತ್ತು ಅಲಂಕಾರಿಕ ಸೊಬಗು ಸಾಮಾಗ್ರಿಗಳ ತಯಾರಿಕೆಯಲ್ಲಿ ಇವರು ಎತ್ತಿದ ಕೈ ಆದರು. ನಿರಂತರ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಹೊಸ ಹೊಸ ಜನಾಗತ್ಯದ ಆಕರ್ಷಕ ವಸ್ತುಗಳ ವಿನ್ಯಾಸ ಮಾಡುವುದರಲ್ಲಿ ಇವರು ಅಪಾರ ಪರಿಶ್ರಮ ಹೊಂದಿದರು. ಆಧುನಿಕ ಆಭರಣ ವಿನ್ಯಾಸ, ಮನೋಕರ್ಷಕ ವಸ್ತುಗಳ ವಿನ್ಯಾಸದಲ್ಲಿ ಇವರದು ಎತ್ತಿದ ಕೈ ಆಗಿದೆ. ಇವರು ಕರ್ನಾಟಕ ಹ್ಯಾಂಡಿಕ್ರಾಪ್ಟ್ಸ್ ಮತ್ತು ಆರ್ಟಿಸನ್ಸ್ ಇದರ ಸ್ಥಾಪಕ ಸದಸ್ಯರಾಗಿದ್ದಾರೆ. ತಮ್ಮ ಸ್ವಂತ ನಾಯಕತ್ವದಲ್ಲಿ ಹಲವಾರು ಪೇಂಯ್ಟಿಂಗ್ ಶಿಭಿರಗಳನ್ನು ಸಂಯೋಜಿಸಿರುತ್ತಾರೆ. ಹಲವಾರು ನಗರಗಳಲ್ಲಿ ಲಲಿತ ಕಲಾ ಪ್ರದರ್ಶನಗಳನ್ನು ಸಂಯೋಜಿಸಿರುತ್ತಾರೆ. ಬಡತನದ ಮತ್ತು ಇತರ ಒತ್ತಡಗಳಿಂದ ತಮ್ಮ ಶಿಕ್ಷಣವನ್ನು ಸಂಪೂರ್ಣ ಪೂರೈಸಲಾಗದ ಮಹಿಳೆಯರಿಗೆ ಟೆರ್ರಕೊಟ್ಟ ವಸ್ತು ತಯಾರಿ ತರಬೇತಿ ನೀಡಿ ಅವರು ತಮ್ಮ ಜೀವನಕ್ಕೆ ಹೊಸ ದಾರಿ ಕಂಡುಕೊಳ್ಳುವಲ್ಲಿ ಅನುಕೂಲವಾಗಿರುತ್ತಾರೆ.

8. ವೃತ್ತಿಪರ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ವಾಯ್ಲೆಟ್ ಜೆ ಪಿರೇರಾ : ಬೆಂದುರ್


ಹಲವಾರು ಸಂಘರ್ಷಗಳ ನಡುವೆಯೂ ಕಳೆದ 15 ವರ್ಷಗಳಿಂದ ‘ಮೆಂಗಲೋರಿಯನ್ ಡಾಟ್ ಕಾಮ್’ ಎಂಬ ಕರಾವಳಿಯ ಹೆಸರಾಂತ ವಿದ್ಯುನ್ಮಾನ ಮಾಧ್ಯಮ ನಿಭಾಯಿಸುತ್ತಿರುವ ಇವರು ಸಮಾಜದಲ್ಲಿ ಧನಾತ್ಮಕ ಪತ್ರಗಾರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಪತ್ರಗಾರಿಕೆಯೊಂದಿಗೆ ಸಮಾಜಸೇವೆಯಲ್ಲಿ ಅಪಾರ ಪರಿಶ್ರಮ ಹೊಂದಿರುವ ಇವರು ‘ಪರಿವರ್ತನಾ ಚಾರಿಟೇಬಲ್ ಟ್ರಸ್ಟ್’ ನ ಮುಖಾಂತರ ಮಂಗಳಮುಖಿಯರ ಬದುಕಿನಲ್ಲಿ ಹೊಸ ಬೆಳಕನ್ನು ಚೆಲ್ಲಲು ಶ್ರಮಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ನ್ಯಾಯ ಒದಗಿಸಲು ಅವರು ದುಡಿಯುತ್ತಿದ್ದಾರೆ. ಫಾತಿಮಾ ಎಜ್ಯುಕೇಶನ್ ಸಂಸ್ಥೆಯ ಮೂಲಕ ಅವರು ಹೆಚ್ ಐ ವಿ ಭಾದಿತ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಒದಗಿಸಲು ಅವರು ದುಡಿಯುತ್ತಿದ್ದಾರೆ.

9. ಸಮಾಜ ಸೇವೆಯ ಕ್ಷೇತ್ರದ ಸ್ತ್ರೀ ಸಾಧಕಿ : ಕುಮಾರಿ ರೆಮಿಡಿಯಾ ಡಿಸೋಜಾ, ಬೆಳ್ಮಣ್

ಬೆಳ್ಮಣಿನ ರೆಮಿಡಿಯಾ ಡಿಸೋಜಾರವರು ಕಳೆದ ನಲ್ವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತನ್ನನೇ ತೊಡಗಿಸಿಕೊಂಡಿಸಿದ್ದಾರೆ. ಕಥೊಲಿಕ್ ಸಭಾ ಹಾಗೂ ಮಾನಸ ಟ್ರಸ್ಟಿನ ಸ್ಥಾಪಕ ಸದಸ್ಯರಾಗಿ, ಆಡಳಿತ ಟ್ರಸ್ಟಿಯಾಗಿ ಅವರು 9 ವರ್ಷ ಮಾನಸ ಪುನರ್ವಸತಿ ಕೇಂದ್ರವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಪ್ರಥಮ ಮಹಿಳಾ ಅಧ್ಯಕ್ಶರಾಗಿ ಅಪಾರ ಜನಮನ್ನಣೆಗಳಿಸಿದ್ದಾರೆ. ಭೂ ನ್ಯಾಯ ಮಂಡಳಿ, ಜಿಲ್ಲಾ ಪರಿಷಧ್ ಹಾಗೂ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಅವರು ಅನೇಕ ದೀನ ದಲಿತರಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಸ್.ವಿ.ಪಿ ಸಂಘಟನೆಯ ಸದಸ್ಯರಾಗಿ ಬಡವರ, ಅಶಕ್ತರ ಹಾಗೂ ನಿರ್ಗತಿಕರ ಸೇವೆ ಮಾಡಿದ್ದಾರೆ. ಅವರಿಗೆ ಈ ತನಕ ರೋಟರಿ, ಪಿಂಗಾರ ಪ್ರಶಸ್ತಿ ಹಾಗೂ ಇತರ ಸಂಘ ಸಂಸ್ತೆಗಳಿಂದ ಪುರಸ್ಕಾರ ಲಭಿಸಿದೆ.

10. ಕ್ರೀಡಾ ಕ್ಷೇತ್ರದ ಸ್ತ್ರೀ ಸಾಧಕಿ : ಶ್ರೀಮತಿ ಜೊಯ್ಲಿನ್ ಮ್ಯೂರಲ್ ಲೋಬೊ ಶಿರ್ತಾಡಿ 

ಟ್ರಿಪಲ್ ಜಂಪ್ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಕ್ರೀಡಾ ಸಾಧನೆ ಮಾಡಿರುವ ಶಿರ್ತಾಡಿಯ ಜೊಯ್ಲಿನ್ ಮ್ಯೂರಲ್ ಲೋಬೊರವರು ರಾಜ್ಯ ಮಟ್ಟದಲ್ಲಿ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದಿರುತ್ತಾರೆ. ಎಲ್‍ಐಸಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅವರು 5 ಬಾರಿ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದಿರುತ್ತಾರೆ. ರಾಜ್ಯ ಸರ್ಕಾರದಿಂದ ಈ ಬಾಬ್ತು ಅವರಿಗೆ ಪುರಸ್ಕಾರ ಲಭಿಸಿದೆ.

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email