Search
Close this search box.

St Joseph’s Institute of Philosophy Mangalore, Declared Ecclesiastical Higher Education Institution

❤️ Spread the love ❤️ |

ಜೆಪ್ಪುವಿನ ‘ಸೈಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿ’ ತತ್ವಶಾಸ್ತçದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಣೆ

ಮಂಗಳೂರು, ಜನವರಿ 24: ಜೆಪ್ಪುವಿನ ಸಂತ ಜೋಸೆಫ್ ಗುರುಮಠದಲ್ಲಿ ನಡೆದ ಮಹತ್ವದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ, ಬೆಂಗಳೂರಿನ ಧರ್ಮಾರಾಂ ವಿದ್ಯಾ ಕ್ಷೇತ್ರದ ವಂದನೀಯ ಡಾ. ಮ್ಯಾಥ್ಯೂ ಅಟ್ಟುಂಕಲ್ ಸಿಎಂ.ಐ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಸಂತ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿಯನ್ನು 2024 ರ ಜನವರಿ 24 ರಂದು ಅಧಿಕೃತವಾಗಿ ತತ್ವಶಾಸ್ತçದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಲಾಯಿತು.
ವಂದನೀಯ ಡಾ. ಮ್ಯಾಥ್ಯೂ ಮಾತ್ನಾಡುತ್ತಾ “ಈ ಮನ್ನಣೆ ಐದು ವರ್ಷಗಳ ಆವಧಿಗೆ ಪ್ರಾಯೋಗಿಕವಾಗಿರುತ್ತದೆ. ಈ ಸಂಸ್ಥೆಯಿAದ ಪಡೆದ ಪದವಿ ಪ್ರಮಾಣ ಪತ್ರ ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುತ್ತದೆ. ಈ ಉನ್ನತ ಶಿಕ್ಷಣದ ಅವಕಾಶ ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ, ಧರ್ಮಭಗಿನಿಯರಿಗೂ ಒಳಗೊಂಡಿದೆ” ಎಂದು ಹೇಳಿದರು.
ಬಿಷಪ್ ಪೀಟರ್ ಅಧಿಕೃತವಾಗಿ ಘೋಷಣೆಯ ಆದೇಶವನ್ನು ಘೋಷಿಸಿದರು. ಸಂಸ್ಥೆಯ ಉನ್ನತ ಶಿಕ್ಷಣದ ಗಮನಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅವಕಾಶವನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು. ವಂ. ಡಾ. ಜಾರ್ಜ್ ಕುಲಂಕರ ಅವರು ಧರ್ಮಾರಾಂ ವಿದ್ಯಾ ಕ್ಷೇತ್ರದ ಅಧ್ಯಾಪಕರನ್ನು ಪರಿಚಯಿಸಿದರು ಮತ್ತು ಸಹಯೋಗಕ್ಕೆ ಒತ್ತು ನೀಡಿದರು.
ತುಳುನಾಡು ಮತ್ತು ಕೆನರಾ ಕ್ರಿಶ್ಚಿಯನ್ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಪ್ರಸ್ತುತಿಯೊಂದಿಗೆ ಸಮಾರಂಭವು ಮುಕ್ತಾಯವಾಯಿತು. ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ರೊನಾಲ್ಡ್ ಸೆರಾವೊ ಅವರು ನೆರೆದಿದ್ದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಮಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿ ಉನ್ನತ ಶಿಕ್ಷಣ ಸಂಸ್ಥೆಯಾಗಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದರು ವಂದನೀಯ ಮನೋಜ್ ಮ್ಯಾಥ್ಯೂ ವಂದಿಸಿದರು.
ಸೈoಟ್ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿಯ ನಿರ್ದೇಶಕರಾದ ವಂದನೀಯ ಡಾ. ಐವನ್ ಡಿಸೋಜಾ ಅವರು ಬಿ.ಪಿ.ಎಚ್ ಪದವಿ ನೀಡುವಲ್ಲಿ, ಸಮರ್ಪಕ ಬೋಧನೆಯನ್ನು ಉತ್ತೇಜಿಸುವಲ್ಲಿ ಮತ್ತು ಸ್ಥಳೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಕಲಿಕೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಮಹತ್ವವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜಾ, ನಿವ್ರತ್ತ ಬಿಷಪ್, ವಂದನೀಯ ಡಾ. ಜೋಸೆಫ್ ಮಾರ್ಟಿಸ್, ಧರ್ಮಭಗಿನಿ ಲಿಲ್ಲಿ ಪಿರೇರಾ, ವಂದನೀಯ ಡಾ. ರಾಕಿ ಡಿ’ಕುನ್ಹಾ, ಧಾರ್ಮಿಕ ಸಹೋದರಿಯರು, ಧರ್ಮಗುರುಗಳು ಮತ್ತು ಸಂತ ಜೋಸೆಫ್ ಗುರುಮಠದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಫೋಟೋಗಳು ಮತ್ತು ವರದಿ ವಂದನಿಯ ಅನಿಲ್ ಐವನ್ ಫೆರ್ನಾಂಡಿಸ್, ಕೆನರಾ ಕಮ್ಯೂನಿಕೇಶನ್ಸ್ ಸೆಂಟರ್, ಮಂಗಳೂರು

MANGALORE, JAN 24: In a momentous ceremony held at St Joseph’s Seminary, Jeppu, St Joseph’s Institute of Philosophy in Mangalore was officially declared as an Ecclesiastical Higher Education Institution on January 24, 2024. The proclamation of the Decree was conducted by Rev. Dr Matthew Attumkal, CMI, Dean of the Faculty of Philosophy at Dharmaram Vidya Ksetram, Bangalore.

The declaration took place in the presence of Most Rev. Dr Peter Paul Saldanha, the Bishop of Mangalore and the Moderator of the Institute. Rev. Fr Ronald Serrao, Rector of St Joseph Seminary, extended a warm welcome to the dignitaries and the gathered audience.

Rev. Dr Ivan D’Souza, the Director of St Joseph’s Institute of Philosophy, elucidated on the significance of becoming an Institute of Philosophy. He highlighted that an Institute is required for students to obtain B.Ph. in order to qualify themselves for their further studies in Theology. B.Ph. degree would motivate the candidates to take philosophical study seriously and help them to philosophise in a deeper way. It also motivates the teaching faculty to be rigorous, responsible and serious about teaching philosophy. It would pave the way both for the staff and students for the learning of local or regional literature, culture, history, beliefs, practices and philosophy.

Dr Mathew highlighted that the affiliation is valid for five years on an experimental basis, and the certification is recognised in Europe and America. He also announced that the online library of Philosophy at Dharmaram is now accessible for students at St Joseph’s Institute.

“We assure our support and help in the journey of learning and imparting knowledge,” Dr. Mathew assured, emphasising the commitment to foster a conducive learning environment.

Most Rev. Dr Peter Paul Saldanha officially announced and proclaimed the Decree of Promulgation, “The Dicastery for Culture and Education, on Oct, 23, 2023, issued the Decree of Erection of St Joseph’s Institute of Philosophy, Mangalore, affiliating it with the Faculty of Philosophy of the Pontifical Atheneum Dharmaram Vidya Kshetram, Bangalore, and approving its Statutes. With much hope and prayer that St Joseph’s Institute of Philosophy, Mangalore, will fulfil its objectives and the expectations that the Church has reposed on it, I am pleased to promulgate these Statutes of St Joseph’s Institute of Philosophy and decree that they shall come into force on Jan.1, 2024.”

In his address Bishop Peter expressed his gratitude, stating, “It’s a God-sent moment for us to have the institute of higher education in philosophy in our centre, providing access for all women religious to undergo education along with men.” He emphasised the versatility of philosophy as a discipline, covering dialogues across all fields of knowledge. The Bishop urged both students and staff to seize this opportunity, as the institute will undergo evaluation after five years.

Fr George Kulankara introduced the faculty of Dharmaram Vidya Ksetram, underlining the collaboration and exchange of knowledge between the institutions.

The ceremony concluded with a cultural presentation, as ‘Tulunadu Purana’ was staged to celebrate the rich culture and art forms of Tulunadu and Canara Christians. The depiction included Yakshagana, Kambala, Korikatta, Folk Dance, Gumta, Baila, Roce, and wedding ceremony, adding an artistic touch to the event.

Fr Manoj Mathew, the teacher of philosophy proposed the vote of thanks and acknowledged the help and assistance of every one.

This momentous declaration marks a significant step for St Joseph’s Institute of Philosophy, solidifying its position as an Ecclesiastical Higher Education Institution in Mangalore with a commitment to imparting knowledge and fostering intellectual growth.

Most Rev. Dr Aloysius Paul D Souza, Bishop Emeritus, Rev. Dr Joseph Martis, Sr Lilly Pereira, Rev. Dr Rocky DCunha, OFM CAP, Religious Sisters and Priests and the staff and students of St Joseph Seminary were present.

Pics & Report: Fr Anil Ivan Fernandes, CCC

Photo Gallery

Picture of Vijay Dsouza
Vijay Dsouza

Post a comment