Msgr Maxim Noronha Launches Preparations for St Anthony of Padua Relic Feast with Festive Flag Hoisting

❤️ Spread the love ❤️ |

MANGALURU, JAN 30: As St Anthony Ashram, Jeppu is all set for the celebration of the Relic Feast of St Anthony of Padua, Very Rev. Msgr Maxim L. Noronha, Vicar General of the Diocese of Mangalore, marked the commencement of the same by hoisting the festal flag on the first day of the Novena at Our Lady of Miracles Church, Milagres, on January 30, 2024.

ಸಂತ ಅಂತೋಣಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವ: ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾರಿಂದ ಚಾಲನೆ

ವರದಿ ಮತ್ತು ಚಿತ್ರಗಳು: ಕೆನರಾ ಕಮ್ಯುನಿಕೇಶನ್ ಸೆಂಟರ್, ಮಂಗಳೂರು
ಮoಗಳೂರು, ಜ.30: ಜೆಪ್ಪು ಸಂತ ಅಂತೋನಿ ಆಶ್ರಮವು ಪದುವಾ ಸಂತ ಅಂತೋನಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವಕ್ಕೆ ಸಜ್ಜಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಜನವರಿ 30, 2024 ರಂದು ಮಿಲಾಗ್ರಿಸ್ ಚರ್ಚ್ನಲ್ಲಿ ನೊವೆನಾದ ಮೊದಲ ದಿನದಂದು ಹಬ್ಬದ ಧ್ವಜಾರೋಹಣ ಮಾಡುವ ಮೂಲಕ ಸಂಭ್ರಮದ ಮಹೋತ್ಸವಕ್ಕೆ ಚಾಲನೆ ನೀಡಿದರು.


ಜೆಪ್ಪುವಿನ ಸಂತ ಆಂತೋಣಿ ಸೆವಾ ಸಂಸ್ಥೆಗಳ ನಿರ್ದೇಶಕ ವಂದನೀಯ ಜೆ.ಬಿ ಕ್ರಾಸ್ತಾ, ಆತ್ಮಿಕ ನಿರ್ದೇಶಕರಾದ ವಂದನೀಯ ಗಿಲ್ಬರ್ಟ್ ಡಿಸೋಜಾ ಮತ್ತು ಸಹಾಯಕ ನಿರ್ದೇಶಕರಾದ ವಂದನೀಯ ಅವಿನಾಶ್ ಪಾಯ್ಸ್ ಜೊತೆಗೆ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಅವರು ಉತ್ತಮ ಆಡಳಿತಕ್ಕಾಗಿ ಮತ್ತು ನಮ್ಮ ರಾಷ್ಟ್ರದ ಆಡಳಿತದಲ್ಲಿರುವವರಿಗಾಗಿ ನೊವೆನಾ ಪೂಜಾ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು


ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಅವರು ತಮ್ಮ ಪ್ರವಚನದಲ್ಲಿ ಲೂಕನ ಗೃಂಥ 1:67 ಮತ್ತು 68, ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ, “ಇಸ್ರಾಯೇಲಿನ ದೇವರಾದ ಕರ್ತನಿಗೆ ಸ್ತುತಿ ಆಗಲಿ” ಎಂಬ ಪವಿತ್ರ ವಾಕ್ಯಗಳನ್ನು ಆಧರಿಸಿ ಧರ್ಮೋಪದೇಶವನ್ನು ಬೋಧಿಸಿದರು. ಹಬ್ಬದ ಪ್ರಯುಕ್ತ ನೊವೆನಾ ಪ್ರಾರ್ಥನಾ ವಿಧಿಗಳು 2024ರ ಫೆಬ್ರವರಿ 7 ರವರೆಗೆ ನಡೆಯಲಿರುವುದು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.


ಫೆಬ್ರುವರಿ 8, 2024 ರಂದು ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯುವ ಪ್ರಮುಖ ಹಬ್ಬದ ಪವಿತ್ರ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೊಜಾ ರವರು ನಡೆಸುವರು. ಹಬ್ಬದ ಸಂದೇಶ “ಪಡೆದವರೆಲ್ಲಾ ಘೋಷಿಸಲಿ.”


ಫೆಬ್ರುವರಿ 8 ರಂದು ಹಬ್ಬದ ದಿನದಂದು ಕೊಂಕಣಿಯಲ್ಲಿ ಬಲಿಪೂಜೆ ಬೆಳಿಗ್ಗೆ 6 ಮತ್ತು 9.30 ಕ್ಕೆ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ಮತ್ತು ಮಲಯಾಳಂನಲ್ಲಿ ಬಲಿಪೂಜೆ ಸಂಜೆ 4.30 ಕ್ಕೆ ಮಿಲಾಗ್ರಿಸ್ ಚರ್ಚ್ನಲ್ಲಿ ಆಚರಿಸಲಾಗುವುದು.

The inaugural mass, concelebrated by Rev. Fr J B Crasta, Director, Rev. Fr Gilbert Dsouza, Spiritual Director and Rev. Fr Avinash Pais, Assistant Director of St Anthony Charitable Institutions, Jeppu, centred on prayers for good governance and those in the administration of our nation.

Msgr Maxim Noronha preached a sermon based on the Canticle of Zechariah, Luke 1:67&68, emphasizing the proclamation of God’s greatness and mercies. He drew parallels with St Anthony of Padua, highlighting how the saint manifested the love of God through both his words and deeds.

Devotees, numbering in the hundreds, actively participated in the inaugural day of the novena, which is set to continue until February 7, 2024.

The main celebrant for the main festive Holy Mass on February 8, 2024, at 6 pm at Milagres Church Grounds will be Most Rev. Dr Aloysius Paul DSouza, Bishop Emeritus, Diocese of Mangalore. The theme for the feast is “Let those who received, Proclaim.”

On the Feast Day, February 8, Mass in Konkani is scheduled at 6 and 9.30 am at St. Anthony Shram Jeppu, with a Malayalam Mass at 4.30 pm at Milagres Church.

The novena is a preparatory event leading up to the relic feast of St Anthony.

Photo Gallery

Director CCC Admin
Director CCC Admin

Post a comment

Share on facebook
Share on twitter
Share on linkedin
Share on pinterest
Share on telegram
Share on whatsapp
Share on email