CONSTITUTION OF INDIA in Kannada Script Konkani set to release on Easter Vigil

❤️ Spread the love ❤️ |

Photos: Stanly Bantwal

Mangaluru, Apr. 15: We are a great nation and to us we have given to our self a great Constitution. Need of the hour is to understand our constitution and thereby to serve our Nation at the best. Educated Indians need to reach out to the underprivileged, the last, least and the lost. In this mission of becoming the voice of the voiceless, knowledge of our constitution and its provisions is the greatest support and the strength.

Indian constitution, as we all know is not only a legal document instead it is an instrument of social change. After a long struggle with the white masters we have won our freedom, the fruits of our freedom struggle have to be shared with all, especially with those who were discriminated against for long. Unless we reach out to those who are still outside the protection circle our tryst with destiny will not be fulfilled in complete. Knowing our constitution will enable us the spirit behind its formation, its gifts and guarantees to common man. By knowing our constitution, undoubtedly we will become better and responsible citizens of this great nation and its lesser privileged. It is also a known fact that to be a responsible citizen one must have a clear picture of his rights and duties.

 

 

The Catholic Bishops conference of India therefore want every person studying under its institutions and especially Christians, to make an earnest attempt to learn and understand the constitution, its provisions and other aspects related to it. The Mangalore Diocesan Commission for lay faithful has taken a step forward. Under the dynamic leadership of Very Rev Fr J B Crasta it has published the entire constitution of India as translated into Kannada Script Konkani. Renowned Translators Prof Stephen Quadros Permude and Smt Gladis Quadros Permude have done the translation.

The Book will be released on 20 April after the Easter Vigil all over the diocese of Mangalore. The main programme will be held at Our Lady of the Holy Rosary Church Bolar (Cathedral of the Diocese of Mangalore) and The Bishop of Mangalore Most Rev Dr Peter Paul Saldanha will release the book in the presence of Shri Roy Castelino and Shri Sushil Noronha, Co-Convener and the Secretary and other members of the Diocesan Citizens Awareness and Development Committee respectively.

Fr J. B. Crasta, Mr. Roy Castelino, Mr. Sushil Noronha and Mr. Steevan Quadras were present at  the Press Conference. For further information , Fr J B Crasta  can be contated on 9448724276


ಭಾರತದ ಸಂವಿಧಾನ –ಈಗ ಕರಾವಳಿ ಕರ್ನಾಟಕದ ಕೊಂಕಣಿಗರ ಮಾತೃಭಾಷೆಯಲ್ಲಿ ಮಾತೃಲಿಪಿಯಲ್ಲಿ

ಭಾರತೀಯರಾದ ನಾವೆಲ್ಲರೂ ನಮ್ಮ ಸಂವಿಧಾನವನ್ನು ಅರ್ಥೈಸಿಕೊಂಡಾಗ ನಮ್ಮ ನಾಗರೀಕತೆಯನ್ನು ಇನ್ನಷ್ಟು ಅರ್ಥಪೂರ್ಣ ಮಾಡಿಕೊಳ್ಳಬಹುದಾಗಿದೆ. ದೀರ್ಘಕಾಲ ಬ್ರಿಟೀಷರ ಮುಷ್ಟಿಯಲ್ಲಿ ನರಳಿದ ನಮ್ಮ ದೇಶ ಮಹಾತ್ಮ ಗಾಂಧೀಜಿ ಹಾಗೂ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತರ ನಿರಂತರ ಸಂಘರ್ಷದಿಂದ ಸ್ವಾತಂತ್ರ್ಯ ಪಡೆಯಿತು. ಸತ್ಯ ಮತ್ತು ಅಹಿಂಸೆಯ ದಿವ್ಯಪಥದಲ್ಲಿ ನಡೆದ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ತಮ್ಮ ಜೀವ ಬಲಿ ನೀಡಿ ನಮಗೆ ಸ್ವಾತಂತ್ರ್ಯದ ಸ್ವರ್ಗವನ್ನು ರಚಿಸಿ ನೀಡಿದ್ದಾರೆ. ಈ ಸ್ವಾತಂತ್ರ್ಯದ ಫಲಗಳು ಸಮಾಜದ ಅಂತಿಮ ಸ್ಥರದಲ್ಲಿರುವವರಿಗೆ ತಲುಪಬೇಕು ಎನ್ನುವುದು ರಾಷ್ಟ್ರಪಿತನ ಮತ್ತಿತರ ರಾಷ್ಟ್ರೀಯ ಸಂಗ್ರಾಮಿಗಳ ಕನಸಾಗಿತ್ತು. ಆ ಕನಸನ್ನು ನನಸು ಮಾಡಬೇಕಾದರೆ ನಮ್ಮ ಸಂವಿಧಾನದ ಬೆಳಕು ಸರ್ವರಿಗೂ ತಲುಪಬೇಕಾಗಿದೆ.

ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರರು ‘ಯಾವುದೇ ಸಂವಿಧಾನ ಅದೆಷ್ಟೇ ಉತ್ತಮವಾಗಿರಲಿ ಅದು ಕ್ರಮಕ್ಕೆ ಹಾಕುವ ಕೈಗಳು ಕೆಟ್ಟದಾಗಿದ್ದರೆ ಅದರಡಿಯ ವ್ಯವಸ್ಥೆಗಳೆಲ್ಲ ಕೆಟ್ಟು ಹೋಗುತ್ತವೆ ಎಂದು ಹೇಳಿದ್ದಾರೆ. ನಮ್ಮ ಸಂವಿಧಾನವು ವಿಶ್ವದ ಅತ್ಯುತ್ತಮ ಹಾಗೂ ವ್ಯವಸ್ಥಿತ ಮತ್ತು ವಿಸ್ತøತವಾದ ಸಂವಿಧಾನವಾಗಿದೆ. ಈ ಸಂವಿಧಾನ ಬರೇ ಒಂದು ಕಾನೂನು ದಾಖಲೆಯಲ್ಲ ಹೊರತಾಗಿ ದಮನಕ್ಕೆ ಒಳಗಾದವರ ಮುಕ್ತಿಯ ಸಾಧನ, ಬಹುತ್ವದ ನಾಡಾದ ಭಾರತದಲ್ಲಿ ಸರ್ವ ಧರ್ಮ, ಭಾಷೆ, ಸಂಸ್ಕøತಿ ಮತ್ತು ಜನಾಂಗಗಳಿಗೆ ಸಮಾನ ನ್ಯಾಯಿಕ ಅಭಿರಕ್ಷೆ ನೀಡುವ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಬಲ ತುಂಬಿ ಮುನ್ನಡೆಸುವ ದಾರಿ ದೀವಿಗೆ. ಈ ಸಂವಿಧಾನದ ಯಶಸ್ಸಿನಲ್ಲೆ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಕನಸು ನನಸುಗೊಳಿಸುವ ಶಕ್ತಿ ಅಡಗಿದೆ.

ನಮ್ಮ ಸಂವಿಧಾನದ ಸರಿಯಾದ ಪರಿಚಯ ನಮಗಾದಾಗ ಅದರಡಿಯಲ್ಲಿ ನಮಗೆ ದತ್ತವಾದ ಹಕ್ಕುಗಳ, ನಮ್ಮ ಕರ್ತವ್ಯಗಳ ಸ್ಪಷ್ಟವಾದ ಪರಿಚಯ ನಮಗಾಗುತ್ತದೆ. ಭಾರತವನ್ನು ಎಲ್ಲಾ ನಿಟ್ಟಿನಲ್ಲಿಯೂ ಶ್ರೇಷ್ಟವನ್ನಾಗಿ ಮಾಡಲು ನಮಗೆಲ್ಲರಿಗೂ ನಮ್ಮ ಸಂವಿಧಾನದ ಸ್ಪಷ್ಟವಾದ ಪರಿಚಯವಾಗುವುದು ಅಗತ್ಯವಾಗಿದೆ. ಆದುದರಿಂದಲೇ ಭಾರತೀಯ ಕಥೋಲಿಕ ಧರ್ಮಸಭೆಯು 2019 ನೇ ಶೈಕ್ಷಣಿಕ ಸಾಲಿನಿಂದ ತನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಸಂವಿಧಾನದ ಶಿಕ್ಷಣವನ್ನು ಕಡ್ಡಾಯಮಾಡಲು ಹಾಗೂ ಎಲ್ಲಾ ಭಾರತೀಯರಿಗೂ ಸಂವಿಧಾನದ ಪರಿಚಯ ಆಗುವಂತೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಶ್ರೀಸಾಮಾನ್ಯ ಆಯೋಗದ ವತಿಯಿಂದ ಭಾರತದ ಸಂವಿಧಾನವನ್ನು ಕನ್ನಡ ಲಿಪಿ ಕೊಂಕಣಿಯಲ್ಲಿ ಪ್ರಕಟಿಸುವ ನಿರ್ಧಾರ ಮಾಡಿದೆ.

ಆಯೋಗದ ಕಾರ್ಯದರ್ಶಿ ವಂದನೀಯ ಸ್ವಾಮಿ ಜೆ ಬಿ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಖ್ಯಾತ ಭಾಷಾಂತರಕಾರರಾದ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಹಾಗೂ ಶ್ರೀಮತಿ ಗ್ಲ್ಯಾಡಿಸ್ ಕ್ವಾಡ್ರಸ್ ಪೆರ್ಮುದೆಯವರು ಸಂವಿಧಾನದ ಕೊಂಕಣಿ ಭಾಷಾಂತರ ಸಿದ್ಧಪಡಿಸಿದ್ದು ಹಲವಾರು ತಜ್ಞರು ಪಠ್ಯ ತಿದ್ದುವಿಕೆ ಮಾಡಿರುತ್ತಾರೆ. ಈ ಸಾಲಿನ ಈಸ್ಟರ್ ಹಬ್ಬದ ರಾತ್ರಿಯ ಮಹಾ ಬಲಿ ಪೂಜೆಯ ನಂತರ ರೊಜಾರಿಯೋ ಕಾಥೆದ್ರಾಲ್‍ನಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಈ ಕೃತಿಯ ಲೋಕಾರ್ಪಣೆ ಮಾಡಲಿದ್ದಾರೆ. ಧರ್ಮಕ್ಷೇತ್ರದ ವಿವಿಧ ದೇವಾಲಯಗಳಲ್ಲಿ ಅದೇ ಸಮಯಕ್ಕೆ ಲೋಕಾರ್ಪಣೆ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ನಾಗರೀಕ ಜಾಗೃತಿ ಮತ್ತು ಅಭಿವೃದ್ಧಿ ಸಮಿತಿಯ ಸಹ ಸಂಚಾಲಕರಾದ ಶ್ರೀ ರೋಯ್ ಕಾಸ್ತೆಲಿನೋ, ಕಾರ್ಯದರ್ಶಿ ಶ್ರೀ ಸುಶೀಲ್ ನೊರೊನ್ಹಾ ಹಾಗೂ ಸದಸ್ಯರು ಹಾಜರಿರಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಂ. ಜೆ. ಬಿ. ಕ್ರಾಸ್ತಾ, ಶ್ರೀ ರೋಯ್ ಕ್ಯಾಸ್ತೆಲಿನೊ, ಶ್ರೀ ಸುಶೀಲ್ ನೊರೋನ್ಹಾ ಹಾಗೂ ಶ್ರೀ ಸ್ಟೀವನ್ ಕ್ವಾಡ್ರಸ್‍ರವರು ಹಾಜರಿದ್ದರು. ಹೆಚ್ಚಿನ ಮಾಹಿತಿಗಾಗಿ ವಂ. ಜೆ ಬಿ ಕ್ರಾಸ್ತಾ ರವರನ್ನು ಸಂಪರ್ಕಿಸಬಹುದು- 9448724276

Director CCC Admin
Director CCC Admin
Share on facebook
Share on twitter
Share on linkedin
Share on pinterest
Share on telegram
Share on whatsapp
Share on email