Search
Close this search box.

Fr Rupesh Madtha Appointed as New Priest PRO of Mangalore Diocese

❤️ Spread the love ❤️ |

ಮಂಗಳೂರು ಧರ್ಮಕ್ಷೇತ್ರದ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ವಂ. ರೂಪೇಶ್ ಮಾಡ್ತ ನೇಮಕ

MANGALURU, APRIL 25, 2026: In a strategic move to streamline its official communication, the Diocese of Mangalore has announced the appointment of Rev. Fr Rupesh Madtha as the new Priest Public Relations Officer (PRO). The appointment, made by the Bishop of Mangalore, Most Rev. Dr Peter Paul Saldanha, will come into effect on June 1, 2026.

According to the established administrative structure of the Diocese, the public relations office is led by two representatives: one representing the clergy and the other representing the laity. Fr Rupesh Madtha will take over the mantle from Rev. Dr J.B. Saldanha, who has completed a distinguished five-year term as the Priest PRO. Fr Madtha will work in tandem with Mr Roy Castelino, who continues to serve as the Lay PRO of the Diocese.

Fr Rupesh Madtha, a dynamic and multifaceted priest of the diocese, is already entrusted with several key responsibilities. He currently serves as:

  • Manager and Editor of ‘Raknno’ Weekly: Overseeing the editorial content, publication, and management of the official diocesan newspaper, ensuring effective communication and spiritual nourishment for the Konkani-speaking Catholic community.
  •  
  • Convenor of the Diocesan Ecumenical Commission: Fostering unity, active dialogue, and collaborative initiatives among various Christian denominations across the diocese.
  •  
  • Convenor of the Diocesan Interreligious Dialogue Commission: Promoting mutual understanding, respect, and peaceful coexistence among people of diverse faiths and religious traditions.
  •  
  • Secretary of the Mangalore Christian Council: Organising and coordinating programs to support the council’s mission of strengthening Christian witness, fellowship, and community welfare.
  •  
  • Treasurer of the All Karnataka United Christian Forum for Human Rights (AKUCFHR) (Western Zone): Actively supporting the forum’s ongoing advocacy for human rights, equality, and social justice.
  •  

In his new capacity as PRO, Fr Madtha will establish and maintain active contacts with the media, as well as with government officers and ministers, to monitor and respond to reports on issues affecting the Diocese. He will also organise press conferences and issue press releases from time to time to elevate public opinion on the Church above ignorance, speculation, distortion, and prejudice.

The Diocese of Mangalore expressed its deep appreciation for the outgoing PRO, Rev. Dr J.B. Saldanha, for his five years of dedicated service. The administration shared its full confidence that Fr Rupesh Madtha, with his extensive experience in media and interfaith dialogue, will effectively manage his expanded responsibilities across these significant roles.

Fr Rupesh Ashok Madtha, New PRO
New PRO Alongside Mr Roy Castelino
Rev. Dr J B Saldanha, Outgoing PRO

ಮಂಗಳೂರು, ಎಪ್ರಿಲ್ 25, 2026: ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ವಂದನೀಯ ರೂಪೇಶ್ ಅಶೋಕ್ ಮಾಡ್ತ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ನೂತನ ನೇಮಕಾತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅವರು ಜೂನ್ 1, 2026 ರಿಂದ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಧರ್ಮಕ್ಷೇತ್ರದ ಆಡಳಿತಾತ್ಮಕ ಪದ್ಧತಿಯಂತೆ, ಸಾರ್ವಜನಿಕ ಸಂಪರ್ಕ ಕಚೇರಿಯು ಇಬ್ಬರು ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ: ಒಬ್ಬರು ಧರ್ಮಗುರುಗಳ ಪರವಾಗಿ ಮತ್ತು ಇನ್ನೊಬ್ಬರು ಕ್ರೈಸ್ತ ಶ್ರೀಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುತ್ತಾರೆ. ಕಳೆದ ಐದು ವರ್ಷಗಳಿಂದ ಧರ್ಮಗುರುಗಳ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ ವಂ. ಡಾ. ಜೆ. ಬಿ. ಸಲ್ಡಾನ್ಹಾ ಅವರ ಸೇವಾ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ತೆರವಾದ ಈ ಸ್ಥಾನಕ್ಕೆ ವಂ. ರೂಪೇಶ್ ಮಾಡ್ತ ಅವರನ್ನು ನೇಮಿಸಲಾಗಿದೆ. ಇವರು ಧರ್ಮಕ್ಷೇತ್ರದ ಶ್ರೀಸಾಮಾನ್ಯರ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಶ್ರೀ ರೋಯ್ ಕ್ಯಾಸ್ಟೆಲಿನೊ ಅವರೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಂ. ರೂಪೇಶ್ ಮಾಡ್ತ ಅವರು ಧರ್ಮಕ್ಷೇತ್ರದ ಕ್ರಿಯಾಶೀಲ ಧರ್ಮಗುರುಗಳಾಗಿದ್ದು, ಪ್ರಸ್ತುತ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ:

  • ರಾಕ್ಣೊ ಕೊಂಕಣಿ ವಾರಪತ್ರಿಕೆಯ ವ್ಯವಸ್ಥಾಪಕರು ಮತ್ತು ಸಂಪಾದಕರು: ಧರ್ಮಕ್ಷೇತ್ರದ ಅಧಿಕೃತ ಪತ್ರಿಕೆಯ ಸಂಪಾದಕೀಯ ಮತ್ತು ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ.
  •  
  • ಧರ್ಮಕ್ಷೇತ್ರದ ಕ್ರೈಸ್ತ ಐಕ್ಯತಾ ಆಯೋಗದ ಪ್ರಧಾನ ಕಾರ್ಯದರ್ಶಿ: ವಿವಿಧ ಕ್ರೈಸ್ತ ಪಂಗಡಗಳ ನಡುವೆ ಸಂವಾದ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದ್ದಾರೆ.
  •  
  • ಧರ್ಮಕ್ಷೇತ್ರದ ಸರ್ವಧರ್ಮ ಸೌಹಾರ್ದ ಆಯೋಗದ ಪ್ರಧಾನ ಕಾರ್ಯದರ್ಶಿ: ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯ ಮೂಡಿಸಲು ಶ್ರಮಿಸುತ್ತಿದ್ದಾರೆ.
  •  
  • ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್‌ನ ಕಾರ್ಯದರ್ಶಿ: ಕ್ರೈಸ್ತ ಸಮುದಾಯದ ಒಳಿತಿಗಾಗಿ ವಿವಿಧ ಕಾರ್ಯಕ್ರಮಗಳ ಸಂಯೋಜನೆ ಮಾಡುತ್ತಿದ್ದಾರೆ.
  •  
  • ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ (ಪಶ್ಚಿಮ ವಲಯ) ಕೋಶಾಧಿಕಾರಿ: ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  •  

ತಮ್ಮ ನೂತನ ಜವಾಬ್ದಾರಿಯಲ್ಲಿ ವಂ. ರೂಪೇಶ್ ಮಾಡ್ತ ಅವರು ಮಾಧ್ಯಮ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದು, ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಧರ್ಮಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದಾರೆ. ಧರ್ಮಸಭೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ವಾಸ್ತವ ಸಂಗತಿಗಳನ್ನು ಬಿಂಬಿಸಲು ಅವರು ಪತ್ರಿಕಾಗೋಷ್ಠಿ ಮತ್ತು ಪ್ರಕಟಣೆಗಳ ಮೂಲಕ ಕಾರ್ಯಪ್ರವೃತ್ತರಾಗಲಿದ್ದಾರೆ.

ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವಂ. ಡಾ. ಜೆ. ಬಿ. ಸಲ್ಡಾನ್ಹಾ ಅವರ ಸೇವೆಯನ್ನು ಧರ್ಮಕ್ಷೇತ್ರವು ಕೃತಜ್ಞತೆಯಿಂದ ಸ್ಮರಿಸಿದೆ. ವಂ. ರೂಪೇಶ್ ಮಾಡ್ತ ಅವರು ತಮ್ಮ ಬಹುಮುಖ ಅನುಭವದೊಂದಿಗೆ ಈ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂದು ಧರ್ಮಕ್ಷೇತ್ರವು ವಿಶ್ವಾಸ ವ್ಯಕ್ತಪಡಿಸಿದೆ.

Picture of Director CCC Admin
Director CCC Admin